ಕಾಲು ಜಾರಿ ನದಿಗೆ ಬಿದ್ದು ಯುವಕನ ಸಾವು!

ಹಾಸನ: ನದಿ ದಡದಲ್ಲಿ ಹಾದು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಯುವಕನೊಬ್ಬ ನದಿಗೆ ಬಿದ್ದು ಸಾವನಪ್ಪಿರುವ ಘಟನೆ ಹಾಸನ ಜಿಲ್ಲೆಯಲ್ಲಿ ಸಂಭವಿಸಿದೆ. ಹಾಸನ‌ ಜಿಲ್ಲೆ ಸಕಲೇಶಪುರ ತಾಲೂಕಿನ ಐಗೂರು ಗ್ರಾಮದ ನವೀನ್(25) ಎಂಬ ಯುವಕ ಬೆಳಿಗ್ಗೆ ಜಾನುವಾರುಗಳನ್ನ ಜಮೀನಿನ‌‌ ಬಳಿ ಕರೆದೊಯ್ಯವಾಗ ಈ ಅವಘಡ ಸಂಭವಿಸಿದೆ. ನದಿಯಂಚಿನಲ್ಲಿ ಜಾನುವಾರುಗಳೊಂದಿಗೆ ತೆರಳುವಾಗ ಆಕಸ್ಮಿಕವಾಗಿ ಯುವಕ ಕಾಲು ಜಾರಿ ನದಿಗೆ ಬಿದ್ದಿದ್ದಾನೆ ಎನ್ನಲಾಗ್ತಿದೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದಾರೆ. ಬೆಳಿಗ್ಗೆಯಿಂದ ಶೋಧ ನಡೆಸಿ‌ ಯುವಕನ ಮೃತದೇಹವನ್ನು ಹೊರತೆಗೆದಿದ್ದಾರೆಂದು ತಿಳಿದು […]

ಕಾಲು ಜಾರಿ ನದಿಗೆ ಬಿದ್ದು ಯುವಕನ ಸಾವು!
Guru Edited By: ಸಾಧು ಶ್ರೀನಾಥ್​

Updated on: Aug 24, 2020 | 12:07 PM

ಹಾಸನ: ನದಿ ದಡದಲ್ಲಿ ಹಾದು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಯುವಕನೊಬ್ಬ ನದಿಗೆ ಬಿದ್ದು ಸಾವನಪ್ಪಿರುವ ಘಟನೆ ಹಾಸನ ಜಿಲ್ಲೆಯಲ್ಲಿ ಸಂಭವಿಸಿದೆ.

ಹಾಸನ‌ ಜಿಲ್ಲೆ ಸಕಲೇಶಪುರ ತಾಲೂಕಿನ ಐಗೂರು ಗ್ರಾಮದ ನವೀನ್(25) ಎಂಬ ಯುವಕ ಬೆಳಿಗ್ಗೆ ಜಾನುವಾರುಗಳನ್ನ ಜಮೀನಿನ‌‌ ಬಳಿ ಕರೆದೊಯ್ಯವಾಗ ಈ ಅವಘಡ ಸಂಭವಿಸಿದೆ. ನದಿಯಂಚಿನಲ್ಲಿ ಜಾನುವಾರುಗಳೊಂದಿಗೆ ತೆರಳುವಾಗ ಆಕಸ್ಮಿಕವಾಗಿ ಯುವಕ ಕಾಲು ಜಾರಿ ನದಿಗೆ ಬಿದ್ದಿದ್ದಾನೆ ಎನ್ನಲಾಗ್ತಿದೆ.

ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದಾರೆ. ಬೆಳಿಗ್ಗೆಯಿಂದ ಶೋಧ ನಡೆಸಿ‌ ಯುವಕನ ಮೃತದೇಹವನ್ನು ಹೊರತೆಗೆದಿದ್ದಾರೆಂದು ತಿಳಿದು ಬಂದಿದೆ.

Guru
Loading...
Unable to load recommendations.
Follow Us