ಜಿಂಕೆ ಮೇಲೆ ನಾಯಿಗಳ ದಾಳಿ: ಪ್ರಾಣ ಉಳಿಸಿದವರಾರು?

| Updated By: ಸಾಧು ಶ್ರೀನಾಥ್​

Updated on: Jun 25, 2020 | 6:25 PM

ವಿಜಯಪುರ: ವ್ಯಕ್ತಿಯೊಬ್ಬ ಮನಸು ಮಾಡಿದರೆ ಮತ್ತೊಂದು ಜೀವವನ್ನು ಉಳಿಸಬಲ್ಲ ಅನ್ನೋದಕ್ಕೆ ವಿಜಯಪುರದಲ್ಲಿ ನಡೆದ ಘಟನೆ ಸಾಕ್ಷಿಯಂತಿದೆ. ಏಕಾಂಗಿಯಾಗಿದ್ರೂ ಹಲವು ನಾಯಿಗಳ ಜೊತೆ ಹೋರಾಡಿ ಜಿಂಕೆಯೊಂದರ ಪ್ರಾಣ ರಕ್ಷಣೆ ಮಾಡಿ ಮಾದರಿಯಾಗಿದ್ದಾನೆ ವಿಜಯಪುರ ಜಿಲ್ಲೆಯ ಗ್ರಾಮವೊಂದರ ಯುವಕ. ಹೌದು, ವಿಜಯಪುರ ನಗರ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 50 ಬಳಿಯ ಜಮೀನಿಗೆ ಕಾಡಿನಲ್ಲಿ ಹಾಯಾಗಿ ಓಡಾಡಿಕೊಂಡಿದ್ದ ಜಿಂಕೆಯೊಂದು ದಾರಿ ತಪ್ಪಿ ಬಂದಿದೆ. ತಡರಾತ್ರಿ ದಾರಿ ತಪ್ಪಿ ಬಂದ ಜಿಂಕೆ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಆದರೆ ಜಿಂಕೆ ವಾಸನೆ ಕಂಡು […]

ಜಿಂಕೆ ಮೇಲೆ ನಾಯಿಗಳ ದಾಳಿ: ಪ್ರಾಣ ಉಳಿಸಿದವರಾರು?
Follow us on

ವಿಜಯಪುರ: ವ್ಯಕ್ತಿಯೊಬ್ಬ ಮನಸು ಮಾಡಿದರೆ ಮತ್ತೊಂದು ಜೀವವನ್ನು ಉಳಿಸಬಲ್ಲ ಅನ್ನೋದಕ್ಕೆ ವಿಜಯಪುರದಲ್ಲಿ ನಡೆದ ಘಟನೆ ಸಾಕ್ಷಿಯಂತಿದೆ. ಏಕಾಂಗಿಯಾಗಿದ್ರೂ ಹಲವು ನಾಯಿಗಳ ಜೊತೆ ಹೋರಾಡಿ ಜಿಂಕೆಯೊಂದರ ಪ್ರಾಣ ರಕ್ಷಣೆ ಮಾಡಿ ಮಾದರಿಯಾಗಿದ್ದಾನೆ ವಿಜಯಪುರ ಜಿಲ್ಲೆಯ ಗ್ರಾಮವೊಂದರ ಯುವಕ.

ಹೌದು, ವಿಜಯಪುರ ನಗರ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 50 ಬಳಿಯ ಜಮೀನಿಗೆ ಕಾಡಿನಲ್ಲಿ ಹಾಯಾಗಿ ಓಡಾಡಿಕೊಂಡಿದ್ದ ಜಿಂಕೆಯೊಂದು ದಾರಿ ತಪ್ಪಿ ಬಂದಿದೆ. ತಡರಾತ್ರಿ ದಾರಿ ತಪ್ಪಿ ಬಂದ ಜಿಂಕೆ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಆದರೆ ಜಿಂಕೆ ವಾಸನೆ ಕಂಡು ಹಿಡಿದ ನಾಯಿಗಳು ಬೊಗಳುತ್ತಾ ಜಿಂಕೆ ಮೇಲೆ ಅಟ್ಯಾಕ್ ಮಾಡಿಬಿಟ್ಟಿವೆ.  ಎಂದಿನಂತೆ ಮುಂಜಾನೆ ವಿಜಯಪುರ ತಾಲೂಕಿನ ಅಲಿಯಾಬಾದ್ ಗ್ರಾಮದ ಅಬುಶಾ ಬಾಳು ತನ್ನ ಜಮೀನಿಗೆ ತೆರಳಿದಾಗ, ಜಿಂಕೆ ಮೇಲೆ ನಾಯಿಗಳ ಹಿಂಡು ದಾಳಿ ಮಾಡುವುದು ಕಂಡಿದೆ.
ನಾಯಿಗಳು ಹಿಂಡಿನಿಂದ ಜಿಂಕೆ ರಕ್ಷಿಸಿದ
ಅರೇ ನಮ್ಮ ಜಮೀನಿನಲ್ಲಿ ನಾಯಿಗಳ ಹಿಂಡೇಕೆ ಬೊಗಳುತ್ತಿವೆ ಎಂದು ತುಸು ಭಯದಿಂದಲೇ ಅಬುಶಾ ಬಾಳು ಹತ್ತಿರ ಹೋಗಿದ್ದಾನೆ. ಆಗ ಅಲ್ಲಿ ಜಿಂಕೆ ನಾಯಿಗಳ ಹಿಂಡಿನ ದಾಳಿಯಿಂದ ನಲುಗಿದ್ದು ಕಂಡು ಬಂದಿದೆ. ಕೂಡಲೇ ಜಿಂಕೆಯ ರಕ್ಷಿಸಲು ನಾಯಿಗಳನ್ನು ಓಡಿಸುವುದಕ್ಕೆ ಪ್ರಯತ್ನ ಮಾಡಿದ್ದಾನೆ. ಎಷ್ಟೇ ಜೋರಾಗಿ ಕೂಗಿದರೂ ನಾಯಿಗಳು ಹೋಗದಿದ್ದಾಗ, ಮರದ ದೊಣ್ಣೆಯಿಂದ ಕೆಲ ನಾಯಿಗಳಿಗೆ ಏಟು ಹಾಕಿದ್ದಾನೆ. ಇದರಿಂದ ಬೆದರಿದ ನಾಯಿಗಳು ಅಲ್ಲಿಂದ ಕಾಲ್ಕಿತ್ತಿವೆ. ನಂತರ ಗಾಯಗೊಂಡಿದ್ದ ಜಿಂಕೆಯನ್ನು ಉಪಚರಿಸಿ ಅರಣ್ಯ ಇಲಾಖೆಯ ಆಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ.

 

ಅಬುಶಾನ ಧೈರ್ಯಕ್ಕೆ ಅಧಿಕಾರಿಗಳ ಮೆಚ್ಚುಗೆ
ಕೂಡಲೇ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಆಧಿಕಾರಿಗಳು, ಗಾಯಗೊಂಡ ಜಿಂಕೆಯನ್ನ ವಶಕ್ಕೆ ಪಡೆದು ಚಿಕಿತ್ಸೆ ನೀಡಿದ್ದಾರೆ. ಜಿಂಕೆ ರಕ್ಷಣೆ ಮಾಡಿದ ಅಬುಶಾನ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿರುವ ಅಧಿಕಾರಿಗಳು, ಗುಣಮುಖಗೊಂಡ  ಬಳಿಕ ಜಿಂಕೆಯನ್ನು ಕಾಡಿಗೆ ಬಿಡುವುದಾಗಿ ತಿಳಿಸಿದ್ದಾರೆ. ಆದ್ರೆ ಅಪಾಯದಲ್ಲಿದ್ದ ವನ್ಯ ಜೀವಿಯನ್ನ ಧೈರ್ಯಮಾಡಿ ರಕ್ಷಿಸಿದ ಅಬುಶಾನ ಮಾನವೀಯತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
-ಅಶೋಕ ಯಡಳ್ಳಿ

Published On - 6:24 pm, Thu, 25 June 20