ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು
ಮಂಡ್ಯ: ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರುಪಾಲಾಗಿರುವ ಘಟನೆ ನಾಗಮಂಗಲ ತಾಲೂಕಿನ ಗದಗ ಗ್ರಾಮದಲ್ಲಿ ನಡೆದಿದೆ. 7ನೇ ತರಗತಿ ಓದುತ್ತಿದ್ದ 12 ವರ್ಷದ ಪುನೀತ್ ಹಾಗೂ ಮನು ಮೃತ ಬಾಲಕರು. ಹಸುಗಳನ್ನು ಮೇಯಿಸಲು ಬಾಲಕರು ತೆರಳಿದ್ದರು. ಈ ವೇಳೆ ಈಜಲು ಕೆರೆಗೆ ಇಳಿದಿದ್ದ ಬಾಲಕರು ಮೃತಪಟ್ಟಿದ್ದಾರೆ. ಬಾಲಕರ ಜೊತೆ ತೆರಳಿದ್ದ ಮತ್ತೊಬ್ಬ ಬಾಲಕ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾನೆ. ಘಟನೆ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯ: ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರುಪಾಲಾಗಿರುವ ಘಟನೆ ನಾಗಮಂಗಲ ತಾಲೂಕಿನ ಗದಗ ಗ್ರಾಮದಲ್ಲಿ ನಡೆದಿದೆ. 7ನೇ ತರಗತಿ ಓದುತ್ತಿದ್ದ 12 ವರ್ಷದ ಪುನೀತ್ ಹಾಗೂ ಮನು ಮೃತ ಬಾಲಕರು.
ಹಸುಗಳನ್ನು ಮೇಯಿಸಲು ಬಾಲಕರು ತೆರಳಿದ್ದರು. ಈ ವೇಳೆ ಈಜಲು ಕೆರೆಗೆ ಇಳಿದಿದ್ದ ಬಾಲಕರು ಮೃತಪಟ್ಟಿದ್ದಾರೆ. ಬಾಲಕರ ಜೊತೆ ತೆರಳಿದ್ದ ಮತ್ತೊಬ್ಬ ಬಾಲಕ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾನೆ. ಘಟನೆ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 6:40 pm, Thu, 25 June 20