AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂದಿನ ಒಂದೇ ವಾರದಲ್ಲಿ 1 ಕೋಟಿ ಕೊರೊನಾ ಕೇಸ್ ಪತ್ತೆ!

ಮುಂದಿನ ಒಂದೇ ವಾರದಲ್ಲಿ ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 1 ಕೋಟಿಗೆ ಏರಿಕೆಯಾಗಲಿದೆ ಅಂತಾ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಌಂಡರ್ಸ್ ನಾರ್ಡ್​ಸ್ಟ್ರಾಮ್ ಭವಿಷ್ಯ ನುಡಿದಿದ್ದಾರೆ. ನಾವು ಕೊರೊನಾಗೆ ಔಷಧ ಕಂಡು ಹಿಡಿಯೋ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದೇವೆ. ಆದ್ರೆ ಸೋಂಕಿತರ ಸಂಖ್ಯೆ ಹೆಚ್ಚಳವಾಗ್ತಿದ್ದು, ಅಪಾಯದ ಸೂಚನೆಯಾಗಿದೆ. ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕಿದೆ ಅಂದ್ರು. ಕಿಲ್ಲರ್ ಕೊರೊನಾ ಕಂಟಕ ಜಗತ್ತಿನಾದ್ಯಂತ ಕಿಲ್ಲರ್ ಕೊರೊನಾ ಅಟ್ಟಹಾಸ ಮುಂದುವರಿದಿದೆ. ವಿಶ್ವದಲ್ಲಿ 95 ಲಕ್ಷ 33 ಸಾವಿರದ 440 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇನ್ನು […]

ಮುಂದಿನ ಒಂದೇ ವಾರದಲ್ಲಿ 1 ಕೋಟಿ ಕೊರೊನಾ ಕೇಸ್ ಪತ್ತೆ!
Guru
|

Updated on:Jun 25, 2020 | 5:53 PM

Share

ಮುಂದಿನ ಒಂದೇ ವಾರದಲ್ಲಿ ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 1 ಕೋಟಿಗೆ ಏರಿಕೆಯಾಗಲಿದೆ ಅಂತಾ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಌಂಡರ್ಸ್ ನಾರ್ಡ್​ಸ್ಟ್ರಾಮ್ ಭವಿಷ್ಯ ನುಡಿದಿದ್ದಾರೆ. ನಾವು ಕೊರೊನಾಗೆ ಔಷಧ ಕಂಡು ಹಿಡಿಯೋ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದೇವೆ. ಆದ್ರೆ ಸೋಂಕಿತರ ಸಂಖ್ಯೆ ಹೆಚ್ಚಳವಾಗ್ತಿದ್ದು, ಅಪಾಯದ ಸೂಚನೆಯಾಗಿದೆ. ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕಿದೆ ಅಂದ್ರು.

ಕಿಲ್ಲರ್ ಕೊರೊನಾ ಕಂಟಕ ಜಗತ್ತಿನಾದ್ಯಂತ ಕಿಲ್ಲರ್ ಕೊರೊನಾ ಅಟ್ಟಹಾಸ ಮುಂದುವರಿದಿದೆ. ವಿಶ್ವದಲ್ಲಿ 95 ಲಕ್ಷ 33 ಸಾವಿರದ 440 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇನ್ನು ಕೊರೊನಾ ಮಹಾಮಾರಿಗೆ ಜಗತ್ತಿನಾದ್ಯಂತ 4 ಲಕ್ಷದ 85 ಸಾವಿರದ 160 ಜನ ಬಲಿಯಾಗಿದ್ದಾರೆ. ಇನ್ನು 51 ಲಕ್ಷ 63 ಸಾವಿರದ 361 ಸೋಂಕಿತರು ಗುಣಮುಖರಾಗಿದ್ದು, ಸದ್ಯ ಒಟ್ಟು 38 ಲಕ್ಷ 69 ಸಾವಿರದ 599 ಸೋಂಕಿತರಿಗೆ ಚಿಕಿತ್ಸೆ ನೀಡಲಾಗ್ತಿದೆ.

ಅಮೆರಿಕದಿಂದ ಭಾರತೀಯರು ವಾಪಸ್ ಅಮೆರಿಕದಲ್ಲಿ ಸಿಲುಕಿದ್ದ ಭಾರತೀಯರನ್ನು ವಾಪಸ್ ತಾಯ್ನಾಡಿಗೆ ಕರೆತರಲಾಯ್ತು. ವಾಷಿಂಗ್ಟನ್ ಡಿಸಿ ಏರ್​ಪೋರ್ಟ್​ನಿಂದ 224 ಪ್ರಯಾಣಿಕರನ್ನು ಕರೆತರಲಾಗ್ತಿದೆ. ಸಣ್ಣಪುಟ್ಟ ಮಕ್ಕಳು, ನವಜಾತ ಶಿಶುಗಳು ಹಾಗೂ ಅನಾರೋಗ್ಯದಿಂದ ಬಳಲ್ತಿರೋ ಪ್ರಯಾಣೀಕರನ್ನು ಏರ್​ಲಿಫ್ಟ್ ಮಾಡಲಾಯ್ತು. ವಾಷಿಂಗ್ಟನ್ ಡಿಸಿಯಲ್ಲಿ ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ಭಾರತೀಯರು ತಾಯ್ನಾಡಿಗೆ ಮರಳಲು ವ್ಯವಸ್ಥೆ ಮಾಡಿದ್ದರು.

ಟೆಕ್ಸಾಸ್​ಗೆ ವೈರಸ್ ಸುನಾಮಿ ಟೆಕ್ಸಾಸ್​ನಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ಮುಂದುವರಿದಿದೆ. ನಿನ್ನೆ ಒಂದೇ ದಿನ ಹೊಸದಾಗಿ 5 ಸಾವಿರದ 489 ಜನರಿಗೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ಟೆಕ್ಸಾಸ್​ನಾದ್ಯಂತ ನಿರ್ಬಂಧ ಮುಂದುವರಿದಿದೆ. ಜನರ ಓಡಾಟಕ್ಕೆ ನಿರ್ಬಂಧ ವಿಧಿಸದಿದ್ದರೂ, ಜನರು ತಮ್ಮ ರಕ್ಷಣೆ ಮಾಡಿಕೊಳ್ಳಬೇಕು ಅಂತಾ ಗವರ್ನರ್ ಜಾರ್ಜ್ ಅಬಾಟ್ ಮನವಿ ಮಾಡಿದ್ದಾರೆ. ಹೀಗಾಗಿ ಜನನಿಬಿಢ ಪ್ರದೇಶಗಳೆಲ್ಲಾ ಬಿಕೋ ಅನ್ನುತ್ತಿವೆ.

ಆರ್ಥಿಕತೆ ಮೇಲೆ ದುಷ್ಪರಿಣಾಮ ಹೆಚ್-1ಬಿ ವೀಸಾ ರದ್ದು ಮಾಡೋದ್ರಿಂದ ಅಮೆರಿಕಾದ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಲಿದೆ ಅಂತಾ ಯುಎಸ್ ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ ಅಭಿಪ್ರಾಯಪಟ್ಟಿದೆ. ಟ್ರಂಪ್ ಸರ್ಕಾರದ ನಿರ್ಧಾರದ ಬಗ್ಗೆ ಮಾತನಾಡಿದ ಯುಎಸ್​ಐಬಿಸಿ ಅಧ್ಯಕ್ಷೆ ನಿಶಾ ದೇಸಾಯಿ ಬಿಸ್ವಾಲ್, ಅಮೆರಿಕ ಸರ್ಕಾರದ ಈ ನಿರ್ಧಾರ ದುರದೃಷ್ಟಕರ ಅಂತಾ ಹೇಳಿದ್ದಾರೆ.

ಪುತ್ರನೊಂದಿಗೆ ಟ್ರುಡೋ ರೌಂಡ್ಸ್ ಕೆನಡಾದಲ್ಲಿ ಲಾಕ್​ಡೌನ್ ರಿಲೀಫ್ ಬಳಿಕ ಜನಜೀವನ ಯಥಾಸ್ಥಿತಿಗೆ ಮರಳುತ್ತಿದೆ. ಇದೇ ವೇಳೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ತಮ್ಮ ಪುತ್ರನ ಜೊತೆಗೆ ಸಿಟಿ ರೌಂಡ್ಸ್ ಹಾಕಿದ್ರು. ತಮ್ಮ ಆರು ವರ್ಷದ ಪುತ್ರನನ್ನು ಕರ್ಕೊಂಡು ಹೋಗಿದ್ದ ಟ್ರುಡೋ, ಐಸ್ ಕ್ರೀಮ್ ಕೊಡಿಸಿದ್ರು. ಮಾರ್ಚ್ ತಿಂಗಳ ಮಧ್ಯಭಾಗದಲ್ಲಿ ಕೆನಡಾದಾದ್ಯಂತ ಲಾಕ್​ಡೌನ್ ಘೋಷಣೆ ಮಾಡಲಾಗಿತ್ತು.

ಆಕಾಶದಲ್ಲಿ ‘ವಿಕ್ಟರಿ’ ಚಿತ್ತಾರ ನಾಜಿಗಳ ವಿರುದ್ಧ ದಿಗ್ವಿಜಯ ಸಾಧಿಸಿದ 75ನೇ ವಾರ್ಷಿಕೋತ್ಸವವನ್ನು ರಷ್ಯಾದಲ್ಲಿ ಅದ್ಧೂರಿಯಾಗಿ ಆಚರಿಸಲಾಯ್ತು. 2ನೇ ಮಹಾಯುದ್ಧದ ವೇಳೆ ಸೋವಿಯತ್ ಒಕ್ಕೂಟು ನಾಜಿ ಸೇನೆ ವಿರುದ್ಧ ಗೆಲುವು ಸಾಧಿಸಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ರಷ್ಯಾ ಬಾನಂಗಳದಲ್ಲಿ ಸಿಡಿಮದ್ದುಗಳ ಚಿತ್ತಾರ ಎಲ್ಲರ ಗಮ ಸೆಳೆಯಿತು. ಲೂಸ್​ನಿಕಿ ಸ್ಟೇಡಿಯಂನಲ್ಲಿ 15 ನಿಮಿಷಗಳ ಕಾಲ ಆಕರ್ಷಕ ಸಿಡಿಮದ್ದು ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.

ಮತ್ತೊಂದು ವರ್ಣಭೇದ ಹತ್ಯೆ? ಅಮೆರಿಕಾದಲ್ಲಿ ಭಾರಿ ಸಂಘರ್ಷಕ್ಕೆ ಕಾರಣವಾಗಿದ್ದ ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣ ಹಸಿ ಇರೋವಾಗಲೇ ಮತ್ತೊಬ್ಬ ಕರಿಯ ಜನಾಂಗದ ವ್ಯಕ್ತಿಯ ಹತ್ಯೆ ನಡೆದಿದೆ. ಅರಿಜೋನಾದ ಟಕ್ಸನ್​ನಲ್ಲಿ ಪೊಲೀಸರು ವ್ಯಕ್ತಿಯೊಬ್ಬ ಉಸಿರುಗಟ್ಟುವಂತೆ ನೆಲದಲ್ಲಿ ಮಲಗಿಸಿದ್ದ ಪರಿಣಾಮ ಆತ ಮೃತಪಟ್ಟಿದ್ದಾನೆ. ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಟಕ್ಸನ್ ಪೊಲೀಸ್ ಅಧಿಕಾರಿ ರಾಜೀನಾಮೆ ನೀಡಿದ್ದಾರೆ.

Published On - 5:46 pm, Thu, 25 June 20