ಪ್ಲಾಸ್ಮಾ ದಾನ ಮಾಡಿ ಹಾರ್ಟ್ ಸ್ಪೇಷಲಿಸ್ಟ್ ಜೀವ ಉಳಿಸಿದ ಯುವಕ ಏನು ಹೇಳಿದ ಗೊತ್ತಾ?

  • TV9 Web Team
  • Published On - 14:03 PM, 9 Aug 2020
ಪ್ಲಾಸ್ಮಾ ದಾನ ಮಾಡಿ ಹಾರ್ಟ್ ಸ್ಪೇಷಲಿಸ್ಟ್ ಜೀವ ಉಳಿಸಿದ ಯುವಕ ಏನು ಹೇಳಿದ ಗೊತ್ತಾ?

ಬೆಂಗಳೂರು: ಕೊರೊನಾದ ಸಂಕಷ್ಟದ ಸಮಯದಲ್ಲಿ ಸಾವಿರಾರು ರೋಗಿಗಳ ಪ್ರಾಣ ಉಳಿಸುವ ವೈದ್ಯರೇ ಸಂಕಷ್ಟಕ್ಕೆ ಸಿಲುಕಿದಾಗ ಪ್ಲಾಸ್ಮಾ ಥೇರಪಿ ಸಂಜೀವಿನಿಯಂತೆ ಅವರ ಜೀವ ಕಾಪಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೌದು ಬೆಂಗಳೂರಿನ ಜಯದೇವ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ನಟೇಶ್ ಅವರಿಗೆ ಕೊರೊನಾ ಸೋಂಕು ತಗಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪರಿಸ್ಥಿತಿ ಗಂಭೀರವಾದಗ ವೈದ್ಯರು ಡಾ. ನಟೇಶ್ ಅವರಿಗೆ ಪ್ಲಾಸ್ಮಾ ಥೆರಪಿ ನೀಡಲು ನಿರ್ದರಿಸಿ ಬೆಂಗಳೂರಿನಲ್ಲಿರುವ ಹೆಚ್‌ಸಿಜಿ ಆಸ್ಪತ್ರೆ ಸಂಪರ್ಕಿಸಿದ್ದರು.

ಅಲ್ಲಿ ಕುನಾಲ್ ಎನ್ನುವ ಯುವಕ ದಾನ ಮಾಡಿದ್ದ ಪ್ಲಾಸ್ಮಾವನ್ನು ಹೆಚ್‌ಸಿಜಿ ಆಸ್ಪತ್ರೆ ಡಾಕ್ಟರ್ ನಟೇಶ್ ಅವರಿಗೆ ನೀಡಿತ್ತು. ಆಗ ಈ ಪ್ಲಾಸ್ಮಾದಿಂದ ಡಾ. ನಟೆಶ್‌ಗೆ ಚಿಕಿತ್ಸೆ ನೀಡಲಾಗಿತ್ತು. ಈಗ ಕುನಾಲ್ ನೀಡಿದ ಪ್ಲಾಸ್ಮಾದಿಂದ ಡಾ. ನಟೇಶ್ ಬದುಕುಳಿದ್ದಾರೆ.

ಕೊರೊನಾ ಸೋಂಕಿನಿಂದ ಯಶಸ್ವಿಯಾಗಿ ಗುಣಮುಖರಾದವರ ಪ್ಲಾಸ್ಮಾವನ್ನು ಇತರ ಸೋಂಕಿತರ ಚಿಕಿತ್ಸೆಗೆ ಉಪಯೋಗಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಇಲ್ಲಿಯವರೆಗೆ ಪ್ಲಾಸ್ಮಾ ಥೆರಪಿಯಿಂದ ಆರು ಜೀವಗಳನ್ನ ಉಳಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಕುನಾಲ್ ಜನರ ಜೀವ ಉಳಿಸುವ ವೈದ್ಯರಿಗೆ ನನ್ನ ಪ್ಲಾಸ್ಮಾ ಉಪಯೋಗಕ್ಕೆ ಬಂದಿರೋದಕ್ಕೆ ಸಂತಸವಾಗಿದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ ಜಯದೇವ ಆಸ್ಪತ್ರೆ ವೈದ್ಯರು ಕೂಡಾ ಕುನಾಲ್‌ಗೆ ವಿಡಿಯೋ ಮೂಲಕ ಮಾತನಾಡಿ ಧನ್ಯವಾದ ಹೇಳಿದ್ದಾರೆ.

ವೈದ್ಯರ ಪ್ರೋತ್ಸಾದ ಮಾತು ಕೇಳಿ ಕುನಾಲ್ ಈಗ ಮತ್ತೇ ತಮ್ಮ ಪ್ಲಾಸ್ಮಾ ದಾನ ಮಾಡಲು ರೆಡಿಯಾಗಿದ್ದಾರೆ. ಜೊತೆಗೆ ಕೋವಿಡ್‌ನಿಂದ ಗುಣಮುಖರಾದವರು ಪ್ಲಾಸ್ಮಾ ಡೊನೇಟ್ ಮಾಡಿ ಜೀವ ಉಳಿಸಿ ಎಂದು ಇತರರಿಗೆ ಕುನಾಲ್ ಮನವಿ ಮಾಡಿದ್ದಾರೆ.