ಪ್ರೀತಿಸಿದ ಹುಡುಗಿಗೆ ನಡುರಸ್ತೆಯಲ್ಲೇ ತಾಳಿ ಕಟ್ಟಿದ.. ಈಗ ಗ್ರಾಮಸ್ಥರಿಗೆ ಶುರುವಾಯ್ತು ಸಂಕಷ್ಟ

ದಾವಣಗೆರೆ: ಪ್ರೀತಿಸಿದ ಹುಡುಗಿಗೆ ಯುವಕನೊಬ್ಬ ನಡು ರಸ್ತೆಯಲ್ಲೇ ತಾಳಿ ಕಟ್ಟಿರುವ ಸ್ವಾರಸ್ಯಕರ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಿಮ್ಲಾಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಹೇಮಂತ್ ಎಂಬ ಯುವಕ ತಾನು ಪ್ರೀತಿಸಿದ ಯುವತಿಗೆ ನಡು ರಸ್ತೆಯಲ್ಲೇ ತಾಳಿಕಟ್ಟಿದ್ದಾನೆ. ಹೇಮಂತ್​ ಕಳೆದ 4 ವರ್ಷದಿಂದ ಯುವತಿಯನ್ನು ಪ್ರೀತಿಸುತ್ತಿದ್ದ ಎಂದು ತಿಳಿದುಬಂದಿದೆ. ಆದರೆ, ಇವರ ಪ್ರೀತಿಗೆ ಜಾತಿ ಅಡ್ಡಬಂದ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರು ಇದಕ್ಕೆ ಒಪ್ಪದೆ ಹೇಮಂತ್​ನಿಗೆ ತಮ್ಮ ಜಾತಿಯ ಯುವತಿಯೊಂದಿಗೆ ಮದುವೆ ಮಾಡಿಸಿದ್ದಾರೆ. ಸದ್ಯ, ಯುವಕ‌ ಮತ್ತು ಯುವತಿ ಅನ್ಯಜಾತಿಗೆ ಸೇರಿದ್ದವರಾಗಿರುವುದರಿಂದ […]

ಪ್ರೀತಿಸಿದ ಹುಡುಗಿಗೆ ನಡುರಸ್ತೆಯಲ್ಲೇ ತಾಳಿ ಕಟ್ಟಿದ.. ಈಗ ಗ್ರಾಮಸ್ಥರಿಗೆ ಶುರುವಾಯ್ತು ಸಂಕಷ್ಟ
Edited By:

Updated on: Sep 06, 2020 | 1:25 PM

ದಾವಣಗೆರೆ: ಪ್ರೀತಿಸಿದ ಹುಡುಗಿಗೆ ಯುವಕನೊಬ್ಬ ನಡು ರಸ್ತೆಯಲ್ಲೇ ತಾಳಿ ಕಟ್ಟಿರುವ ಸ್ವಾರಸ್ಯಕರ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಿಮ್ಲಾಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಹೇಮಂತ್ ಎಂಬ ಯುವಕ ತಾನು ಪ್ರೀತಿಸಿದ ಯುವತಿಗೆ ನಡು ರಸ್ತೆಯಲ್ಲೇ ತಾಳಿಕಟ್ಟಿದ್ದಾನೆ.

ಹೇಮಂತ್​ ಕಳೆದ 4 ವರ್ಷದಿಂದ ಯುವತಿಯನ್ನು ಪ್ರೀತಿಸುತ್ತಿದ್ದ ಎಂದು ತಿಳಿದುಬಂದಿದೆ. ಆದರೆ, ಇವರ ಪ್ರೀತಿಗೆ ಜಾತಿ ಅಡ್ಡಬಂದ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರು ಇದಕ್ಕೆ ಒಪ್ಪದೆ ಹೇಮಂತ್​ನಿಗೆ ತಮ್ಮ ಜಾತಿಯ ಯುವತಿಯೊಂದಿಗೆ ಮದುವೆ ಮಾಡಿಸಿದ್ದಾರೆ.

ಸದ್ಯ, ಯುವಕ‌ ಮತ್ತು ಯುವತಿ ಅನ್ಯಜಾತಿಗೆ ಸೇರಿದ್ದವರಾಗಿರುವುದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಸ್ಥಳಕ್ಕೆ ಚನ್ನಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.