ಪಾರ್ಕ್​ನಲ್ಲಿ ನನ್ನ ಮೇಲೆ ಹಲ್ಲೆಗೆ ಯತ್ನ -ಕಾಂಗ್ರೆಸ್​ ವಕ್ತಾರೆ ವಿರುದ್ಧ ಸಂಯುಕ್ತಾ ಹೆಗ್ಡೆ ದೂರು

  • TV9 Web Team
  • Published On - 12:38 PM, 6 Sep 2020
ಪಾರ್ಕ್​ನಲ್ಲಿ ನನ್ನ ಮೇಲೆ ಹಲ್ಲೆಗೆ ಯತ್ನ -ಕಾಂಗ್ರೆಸ್​ ವಕ್ತಾರೆ ವಿರುದ್ಧ ಸಂಯುಕ್ತಾ ಹೆಗ್ಡೆ ದೂರು

ಬೆಂಗಳೂರು: ಪಾರ್ಕ್‌ನಲ್ಲಿ ತನ್ನ ಮೇಲೆ ಹಲ್ಲೆ ಮಾಡಿರುವ ಆರೋಪದಡಿ ನಟಿ ಸಂಯುಕ್ತಾ ಹೆಗ್ಡೆ HSR ಲೇಔಟ್ ಠಾಣೆಯಲ್ಲಿ ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ ವಿರುದ್ಧ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಪಾರ್ಕ್​ನಲ್ಲಿ ಅಸಭ್ಯ ವರ್ತನೆ.. ನಟಿ ಸಂಯುಕ್ತ ಹೆಗ್ಡೆ ಮತ್ತೊಂದು ಕಿರಿಕ್​

ಅಗರ ಕೆರೆ ಬಳಿ ಸಂಯುಕ್ತಾ ಡ್ಯಾನ್ಸ್ ಪ್ರಾಕ್ಟಿಸ್ ಮಾಡುವ ವೇಳೆ ತುಂಡು ಬಟ್ಟೆ ಹಾಕಿರುವುದನ್ನು ವಿರೋಧಿಸಿದ್ದ ಕವಿತಾ ರೆಡ್ಡಿ, ತಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದರು ಎಂದು ನಟಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ HSR ಲೇಔಟ್ ಪೊಲೀಸ್​ ಠಾಣೆಯಲ್ಲಿ ಸಂಯುಕ್ತಾ ಹೆಗ್ಡೆ ದೂರು ದಾಖಲಿಸಿದ್ದರು. ದೂರಿನನ್ವಯ ಪೊಲೀಸರು FIR ದಾಖಲು ಮಾಡಿದ್ದಾರೆ.

ಜೊತೆಗೆ, ಕವಿತಾ ರೆಡ್ಡಿ ಸಹ ಸಂಯುಕ್ತಾ ಹೆಗ್ಡೆ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಕವಿತಾ ರೆಡ್ಡಿ ನೀಡಿರುವ ದೂರಿನನ್ವಯ HSR ಲೇಔಟ್ ಠಾಣೆಯಲ್ಲಿ ಸಂಯುಕ್ತಾ ಹೆಗ್ಡೆ ವಿರುದ್ಧ NCR ದಾಖಲು ಮಾಡಲಾಗಿದೆ.