Health Tips: ಕೊಲೆಸ್ಟ್ರಾಲ್ ಸಮಸ್ಯೆಯೇ? ಅಡುಗೆಗೆ ಯಾವ ಎಣ್ಣೆ ಬಳಸಬೇಕು ಗೊತ್ತಾ?

|

Updated on: Aug 20, 2024 | 5:38 PM

ದೇಹದಲ್ಲಿ ಕೆಟ್ಟ ಕೊಬ್ಬು ಹೆಚ್ಚಾದಂತೆ ಯಕೃತ್ತಿನ ಕಾಯಿಲೆ, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ದೇಹದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಔಷಧಿಗಳಿಗಿಂತ ಜೀವನಶೈಲಿಯ ಬದಲಾವಣೆಯು ಉತ್ತಮವಾಗಿದೆ.

Health Tips: ಕೊಲೆಸ್ಟ್ರಾಲ್ ಸಮಸ್ಯೆಯೇ? ಅಡುಗೆಗೆ ಯಾವ ಎಣ್ಣೆ ಬಳಸಬೇಕು ಗೊತ್ತಾ?
Healthy Cooking Oils
Follow us on

ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಮನೆಯೂ ಕೊಲೆಸ್ಟ್ರಾಲ್​​ನಿಂದ ಬಳಲುತ್ತಿವವರು ಇದ್ದೇ ಇರುತ್ತಾರೆ. ಈ ಕಾಯಿಲೆಯಿಂದ ಹೃದಯದ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಪತ್ತೆಯಾದ ನಂತರ ಆಹಾರದ ಮೇಲೆ ಕೇಂದ್ರೀಕರಿಸುವುದು ಮುಖ್ಯ. ಬೆಣ್ಣೆ, ತುಪ್ಪ ಸೇರಿದಂತೆ ಆಹಾರ ಪದಾರ್ಥಗಳನ್ನು ಎಷ್ಟು ಕಡಿಮೆ ಸೇವಿಸುತ್ತೀರೋ ಅಷ್ಟು ಒಳ್ಳೆಯದು. ಆದರೆ, ನೀವು ಸೇವಿಸುವ ಆಹಾರದಲ್ಲಿ ಇರುವ ಎಣ್ಣೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ.ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಯಾವ ಎಣ್ಣೆಯನ್ನು ಬಳಸಬಹುದು ಎಂಬುದನ್ನು ಇಲ್ಲಿ ತಿಳಿಯಿರಿ.

ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಯಾವ ಎಣ್ಣೆ ಬಳಸಬೇಕು ?

ಆಲಿವ್ ಎಣ್ಣೆ:

ಆಲಿವ್ ಎಣ್ಣೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಈ ಎಣ್ಣೆಯು ಇತರ ಎಣ್ಣೆಗಳಿಗಿಂತ ಮೊನೊ-ಅನ್‌ಸ್ಯಾಚುರೇಟೆಡ್ ಕೊಬ್ಬಿನಲ್ಲಿ ಹೆಚ್ಚು. ಈ ಎಣ್ಣೆಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿದಿನ ಅಡುಗೆಯಲ್ಲಿ ಆಲಿವ್ ಎಣ್ಣೆಯನ್ನು ಬಳಸಿ.

ಅಗಸೆಬೀಜದ ಎಣ್ಣೆ:

ಅಗಸೆಬೀಜದ ಎಣ್ಣೆಯು ಆಲ್ಫಾ-ಲಿನೋಲೆನಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ಒಮೆಗಾ -3 ಕೊಬ್ಬಿನಾಮ್ಲವಾಗಿದೆ. ಅಗಸೆಬೀಜದ ಎಣ್ಣೆಯು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸೋಯಾಬೀನ್ ಎಣ್ಣೆ:

ಸೋಯಾಬೀನ್ ಎಣ್ಣೆಯಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳಿವೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ತಡೆಯುತ್ತದೆ.

ಎಳ್ಳಿನ ಎಣ್ಣೆ:

ಎಳ್ಳಿನ ಎಣ್ಣೆಯು ಬಹುಅಪರ್ಯಾಪ್ತ ಮತ್ತು ಮೊನೊಸಾಚುರೇಟೆಡ್ ಕೊಬ್ಬುಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಎಳ್ಳಿನ ಎಣ್ಣೆಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಬಹಳ ಸಹಾಯಕವಾಗಿದೆ.

ಸೂರ್ಯಕಾಂತಿ ಎಣ್ಣೆ:

ಆರೋಗ್ಯಕರ ಜೀವನ ನಡೆಸಲು ಬಯಸುವವರು ಅಡುಗೆಯಲ್ಲಿ ಸೂರ್ಯಕಾಂತಿ ಎಣ್ಣೆಯನ್ನು ಸಹ ಬಳಸಬಹುದು. ಸೂರ್ಯಕಾಂತಿ ಎಣ್ಣೆಯು ಬಹುಅಪರ್ಯಾಪ್ತ ಮತ್ತು ಮೊನೊಸಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ, ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ