ಹಾಲು ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ. ಮಕ್ಕಳು ಮತ್ತು ಹದಿಹರೆಯದವರ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಹಾಲು ಅತ್ಯಗತ್ಯ. ಒಟ್ಟಾರೆ ಆರೋಗ್ಯ ಮತ್ತು ರೋಗ ತಡೆಗಟ್ಟುವಿಕೆಗೆ ಪ್ರತಿದಿನ ಸರಿಯಾದ ಪ್ರಮಾಣದಲ್ಲಿ ಹಾಲು ಕುಡಿಯುವುದು ಬಹಳ ಮುಖ್ಯ. ಹಾಲು ಕ್ಯಾಲ್ಸಿಯಂ, ಪ್ರೊಟೀನ್, ಜೀವಸತ್ವಗಳು ಮತ್ತು ಅನೇಕ ಖನಿಜಗಳಿಂದ ಸಮೃದ್ಧವಾಗಿದೆ. ಹೀಗೆ ಹಾಲನ್ನು ಕುಡಿಯುವುದರಿಂದ ಹಲವಾರು ಲಾಭಗಳು ಸಿಗುತ್ತವೆ ಎಂದು ಗೊತ್ತಿದ್ದರೂ ಹಾಲು ಕುಡಿಯುವಾಗ ಅರಿವಿಲ್ಲದೆ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ.
ಹಾಲನ್ನು ದೀರ್ಘಕಾಲದವರೆಗೆ ಕುದಿಸುವುದು ಅಥವಾ ಪದೇ ಪದೇ ಕುದಿಸುವುದರಿಂದ ಅದರಲ್ಲಿರುವ ಪೋಷಕಾಂಶಗಳು ನಾಶವಾಗುತ್ತದೆ. ಇದರಿಂದ ಹಾಲಿನಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ಪೂರ್ಣ ಪ್ರಮಾಣದಲ್ಲಿ ದೊರೆಯುವುದಿಲ್ಲ. ಹಾಲನ್ನು ಮತ್ತೆ ಹೆಚ್ಚು ಹೊತ್ತು ಕುದಿಸುವ ತಪ್ಪು ಮಾಡಬೇಡಿ. ಹಾಲು ಕುದಿದ ನಂತರ, ತಕ್ಷಣ ಬೆಂಕಿಯನ್ನು ಆಫ್ ಮಾಡುವುದು ಉತ್ತಮ. ಹಾಲನ್ನು ಒಮ್ಮೆ ಮಾತ್ರ ಕುದಿಸಲು ಪ್ರಯತ್ನಿಸಿ.
ಇದನ್ನೂ ಓದಿ: ವರಮಹಾಲಕ್ಷ್ಮೀ ಹಬ್ಬಕ್ಕೆ ಮನೆಯ ಅಲಂಕಾರ ಹೇಗೆ ಮಾಡಬೇಕು? ಇಲ್ಲಿದೆ ಸಿಂಪಲ್ ಟಿಪ್ಸ್
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ