AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Preesha Chakraborty: ಭಾರತೀಯ ಮೂಲದ ಅಮೆರಿಕಾದ 9ವರ್ಷದ ಬಾಲಕಿಗೆ ‘ವಿಶ್ವದ ಬುದ್ಧಿವಂತ ವಿದ್ಯಾರ್ಥಿನಿ’ ಪಟ್ಟ

ಭಾರತೀಯ ಮೂಲದ ಅಮೆರಿಕಾದ ಬಾಲಕಿ ಪ್ರೀಶಾ ಚಕ್ರವರ್ತಿ ‘ವಿಶ್ವದ ಬುದ್ಧಿವಂತ ವಿದ್ಯಾರ್ಥಿನಿ’ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. 90 ದೇಶಗಳ ಸುಮಾರು 16 ಸಾವಿರ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಭಾಗಿಯಾಗಿದ್ದರು.

Preesha Chakraborty: ಭಾರತೀಯ ಮೂಲದ ಅಮೆರಿಕಾದ 9ವರ್ಷದ ಬಾಲಕಿಗೆ ‘ವಿಶ್ವದ ಬುದ್ಧಿವಂತ ವಿದ್ಯಾರ್ಥಿನಿ’ ಪಟ್ಟ
ಪ್ರೀಶಾ ಚಕ್ರವರ್ತಿ
ಅಕ್ಷತಾ ವರ್ಕಾಡಿ
|

Updated on:Jan 16, 2024 | 1:00 PM

Share

ವಾಷಿಂಗ್ಟನ್‌: ಪ್ರತಿಷ್ಠಿತ ಜಾನ್ಸ್ ಹಾಪ್‌ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್‌ನ “ವಿಶ್ವದ ಬುದ್ಧಿವಂತ ವಿದ್ಯಾರ್ಥಿನಿ”(World’s Brightest)  ಪಟ್ಟಿಯಲ್ಲಿ ಒಂಬತ್ತು ವರ್ಷದ ಭಾರತೀಯ-ಅಮೆರಿಕನ್(Indian-American) ಶಾಲಾ ವಿದ್ಯಾರ್ಥಿನಿ ಪ್ರೀಶಾ ಚಕ್ರವರ್ತಿ  ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. 90 ದೇಶಗಳಲ್ಲಿ ಸುಮಾರು 16 ಸಾವಿರ ವಿದ್ಯಾರ್ಥಿಗಳಲ್ಲಿ ಪ್ರೀಶಾ ‘ವಿಶ್ವದ ಬುದ್ಧಿವಂತ ವಿದ್ಯಾರ್ಥಿನಿ’ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.

ಪ್ರೀಶಾ ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿರುವ ವಾರ್ಮ್ ಸ್ಪ್ರಿಂಗ್ ಎಲಿಮೆಂಟರಿ ಶಾಲೆಯ 3ನೇ ತರಗತಿಯ ವಿದ್ಯಾರ್ಥಿನಿ. 2023ರಲ್ಲಿ ನಡೆದ ಪ್ರತಿಷ್ಠಿತ ಜಾನ್ಸ್ ಹಾಪ್‌ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್‌ (JH-CTY) ಪರೀಕ್ಷೆಯನ್ನು ಬರೆದಿದ್ದರು. “ಇದು ಕೇವಲ ಒಂದು ಬರವಣಿಗೆಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಗುರುತಿಸುವುದಿಲ್ಲ,ಬದಲಾಗಿ ಅವರ ಕುತೂಹಲ ಮತ್ತು ಕಲಿಕೆಯ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ” ಎಂದು CTY ನ ಕಾರ್ಯನಿರ್ವಾಹಕ ನಿರ್ದೇಶಕ ಆಮಿ ಶೆಲ್ಟನ್ ಹೇಳಿದ್ದಾರೆ. ಪ್ರೀಶಾ ಯಾವಾಗಲೂ ಕಲಿಕೆಯ ಬಗ್ಗೆ ಉತ್ಸುಕಳಾಗಿರುತ್ತಾಳೆ. ಜೊತೆಗೆ ಹೊಸತನ್ನು ಕಲಿಯುವ ಹಂಬಲ ಆಕೆಗೆ ಸದಾ ಇದೆ ಎಂದು ಆಕೆಯ ಪೋಷಕರು ಹೇಳುತ್ತಾರೆ.

ಇದನ್ನೂ ಓದಿ: ರಷ್ಯಾದ ಹಸುಗಳ ಕಣ್ಣಿಗೆ ವಿಆರ್ ಗ್ಲಾಸ್; ಹಾಲು ನೀಡುವ ಸಾಮರ್ಥ್ಯದಲ್ಲಿ ಶೇ. 40ರಷ್ಟು ಹೆಚ್ಚಳ

ಪ್ರೀಶಾ ವಿಶ್ವದಲ್ಲೇ ಅತ್ಯಂತ ಹಳೆಯ ಉನ್ನತ-ಐಕ್ಯೂ ಸೊಸೈಟಿಯಾದ ಮೆನ್ಸಾ ಫೌಂಡೇಶನ್‌ನ ಜೀವಿತಾವಧಿಯ ಸದಸ್ಯರಾಗಿದ್ದಾರೆ. ಆದರೆ ಇಲ್ಲಿ ಸದಸ್ಯತ್ವನ್ನು ಪಡೆಯುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಐಕ್ಯೂ ಅಥವಾ ಇತರ ಅನುಮೋದಿತ ಬುದ್ಧಿಮತ್ತೆ ಪರೀಕ್ಷೆಯಲ್ಲಿ ಶೇಕಡಾ 98 ಅಥವಾ ಹೆಚ್ಚಿನ ಅಂಕಗಳನ್ನು ಪಡೆದವರಿಗೆ ಮಾತ್ರ ಸದಸ್ಯತ್ವವನ್ನು ನೀಡಲಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ:

Published On - 12:59 pm, Tue, 16 January 24

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ