ನಿಮ್ಮ ಮನೆಯಲ್ಲಿರುವ ಒಂದೇ ಗಿಡದಲ್ಲಿ ವಿವಿಧ ತಳಿಯ ಮಾವಿನ ಹಣ್ಣು, ಹೂವುಗಳನ್ನು ಬೆಳೆಸಬೇಕೇ? ಈ ವಿಧಾನ ಅನುಸರಿಸಿ 

ಮನೆಯ ಸುತ್ತಮುತ್ತಲಿನ ಅರಳಿ ನಿಂತ ಬಣ್ಣ ಬಣ್ಣದ ಹೂವುಗಳು ಮನಸ್ಸಿಗೆ ಹಿತವೆನಿಸುತ್ತದೆ. ರುಚಿಕರವಾದ ಮಾವಿನಹಣ್ಣುಗಳನ್ನು ಕಂಡಾಗ ಬಾಯಲ್ಲಿ ನೀರೂರುತ್ತದೆ. ಈ ಎಲ್ಲಾ ರೀತಿಯ ಮಾವು ಮತ್ತು ದಾಸವಾಳ ಹೂವುಗಳನ್ನು ಬೆಳೆಯಬೇಕಾದರೆ ಸಾಕಷ್ಟು ಸ್ಥಳಾವಕಾಶ ಬೇಕಾಗುತ್ತದೆ. ಆದರೆ ಈ ರೀತಿಯ ವಿಧಾನಗಳನ್ನು ಅನುಸರಿಸುವ ಮೂಲಕ ಒಂದೇ ಗಿಡದಲ್ಲಿ ಹಲವು ಬಗೆಯ ದಾಸವಾಳ ಹೂವುಗಳು ಹಾಗೂ ಮಾವಿನ ಹಣ್ಣನ್ನು ಬೆಳೆಯಲು ಸಾಧ್ಯವಂತೆ, ಅದೇಗೆ ಎನ್ನುವುದನ್ನು ತಿಳಿಯಲು ಈ ಮಾಹಿತಿಯನ್ನು ಓದಿ.

ನಿಮ್ಮ ಮನೆಯಲ್ಲಿರುವ ಒಂದೇ ಗಿಡದಲ್ಲಿ ವಿವಿಧ ತಳಿಯ ಮಾವಿನ ಹಣ್ಣು, ಹೂವುಗಳನ್ನು ಬೆಳೆಸಬೇಕೇ? ಈ ವಿಧಾನ ಅನುಸರಿಸಿ 
ಸಾಂದರ್ಭಿಕ ಚಿತ್ರ
Edited By:

Updated on: Nov 21, 2024 | 5:23 PM

ಮನೆಯ ಹಿತ್ತಲಲ್ಲಿ ಇರುವ ಜಾಗದಲ್ಲಿ ವಿವಿಧ ಬಗೆಬಗೆಯ ಹೂಗಳು, ಇಷ್ಟವಾದ ಹಣ್ಣುಗಳ ಸಸ್ಯಗಳನ್ನು ಬೆಳೆಯಬೇಕು ಎಂದುಕೊಳ್ಳುತ್ತಾರೆ. ಆದರೆ, ಜಾಗದ ಕೊರತೆಯಿಂದ ಹೆಚ್ಚಿನ ತಳಿಯ ಸಸ್ಯಗಳನ್ನು ಬೆಳೆಯಲು ಸಾಧ್ಯವಾಗುವುದಿಲ್ಲ. ಅದರಲ್ಲಿಯೂ ಈ ನಗರ ಪ್ರದೇಶದಲ್ಲಿ ವಾಸಿಸುವವರಿಗೆ ಮನೆಯಲ್ಲೇ ಹೂವಿನ ತೋಟ ಮಾಡಲು ಸಾಕಷ್ಟು ಸ್ಥಳಾವಕಾಶವಿರುವುದಿಲ್ಲ. ಆದರೆ ಇದೀಗ ಹಳ್ಳಿಯಲ್ಲಾದರೂ ಸರಿಯೇ, ನಗರದಲ್ಲಾದರೂ ಸರಿಯೇ, ಸ್ವಲ್ಪ ಜಾಗ ಇದ್ದವರು ಕೂಡ ಎಲ್ಲ ಬಗೆಯ ಮಾವು, ದಾಸವಾಳದ ಹೂಗಳನ್ನು ನೆಡಬಹುದು.

ಹೌದು, ಪಾರ್ವತಿಪುರಂ ಮಾನ್ಯಂ ಜಿಲ್ಲಾ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಂತಸದ ಸುದ್ದಿ ನೀಡಿದ್ದಾರೆ. ವಿನೂತನ ರೀತಿಯಲ್ಲಿ ಸಸ್ಯಗಳನ್ನು ಬೆಳೆಸಬಹುದಾಗಿದೆ. ಒಂದೇ ಗಿಡದಲ್ಲಿ ಇಪ್ಪತ್ತು ಬಗೆಯ ಹಣ್ಣುಗಳು ಮತ್ತು ಇಪ್ಪತ್ತು ಬಗೆಯ ದಾಸವಾಳ ಹೂವುಗಳನ್ನು ಬೆಳೆಸಲು ತರಬೇತಿ ನೀಡಲಾಗುತ್ತದೆ. ಈ ರೀತಿಯ ಸಸ್ಯಗಳನ್ನು ನೆಡಲು ಮನೆಯ ಸುತ್ತಮುತ್ತಲೂ ಸ್ವಲ್ಪ ಜಾಗವಿದ್ದರೂ ಸಾಕಂತೆ.

ಇದನ್ನೂ ಓದಿ: ಬೆಂಗಳೂರಿಗರು ಗೋವಾಗೆ ಟ್ರಿಪ್ ಹೋಗಲು ಹಿಂದೇಟು ಹಾಕುತ್ತಿರುವುದು ಏಕೆ? ಇದೇ ನೋಡಿ ಕಾರಣ

ಈ ಕೃಷಿ ಪದ್ಧತಿಯಲ್ಲಿ ಒಂದೇ ಮಾವಿನ ಗಿಡಕ್ಕೆ ವಿವಿಧ ಮಾವಿನ ಗಿಡಗಳ ಸಣ್ಣ ಕೊಂಬೆಗಳನ್ನು ಕಸಿ ಮಾಡಲಾಗುತ್ತದೆ. ಈ ರೀತಿಯಾಗಿ ಕಸಿ ಮಾಡಿದ ಗಿಡಗಳು ಕಾಯಿ ಬಿಡುವ ಸಮಯಕ್ಕೆ ಬಂದಾಗ ಯಾವ ರೀತಿಯ ಗಿಡಗಳನ್ನು ಕಸಿ ಮಾಡಿದ್ದಿರೋ ಅದೇ ರೀತಿಯ ಮಾವು ಉತ್ಪಾದನೆಯಾಗುತ್ತದೆ. ಅಲ್ಲದೆ ದಾಸವಾಳ ಗಿಡಕ್ಕೂ ಈ ರೀತಿಯ ಕಸಿ ಮಾಡುವ ವಿಧಾನದ ಮೂಲಕ ಒಂದೇ ಗಿಡದಲ್ಲಿ ಇಪ್ಪತ್ತು ಬಗೆಯ ದಾಸವಾಳದ ತಳಿಗಳನ್ನು ಬೆಳೆಸಬಹುದು. ಹೀಗಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೈದೋಟದಲ್ಲಿ ಆಸಕ್ತಿ ಇರುವವರಿಗೆ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ