ಬೆಂಗಳೂರಿಗರು ಗೋವಾಗೆ ಟ್ರಿಪ್ ಹೋಗಲು ಹಿಂದೇಟು ಹಾಕುತ್ತಿರುವುದು ಏಕೆ? ಇದೇ ನೋಡಿ ಕಾರಣ

ಗೋವಾವು ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿದ್ದು, ಭಾರತೀಯರು ಮಾತ್ರವಲ್ಲದೇ, ವಿದೇಶಿಗರಿಗೆ ಇದು ನೆಚ್ಚಿನ ತಾಣಗಳಲ್ಲಿ ಒಂದಾಗಿದೆ. ಆದರೆ ಇದೀಗ ಭಾರತದ ಕರಾವಳಿಯುದ್ದಕ್ಕೂ, ಅದರಲ್ಲಿಯೂ ಈ ಗೋವಾದಲ್ಲಿ ಐಷಾರಾಮಿ ಹೋಟೆಲ್‌ಗಳು ಮಧ್ಯಮ ವರ್ಗದ ಪ್ರಯಾಣಿಕರಿಗೆ ಹೆಚ್ಚು ದುಬಾರಿಯಾಗಿವೆ. ಹೀಗಾಗಿ ಪ್ರವಾಸಿಗರನ್ನು ಶ್ರೀಲಂಕಾ, ಥೈಲ್ಯಾಂಡ್ ಮತ್ತು ವಿಯೆಟ್ನಾಂನಂತಹ ವಿದೇಶಿ ಬೀಚ್ ತಾಣಗಳನ್ನು ಆಯ್ಕೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಬೆಂಗಳೂರಿಗರು ಗೋವಾಗೆ ಟ್ರಿಪ್ ಹೋಗಲು ಹಿಂದೇಟು ಹಾಕುತ್ತಿರುವುದು ಏಕೆ? ಇದೇ ನೋಡಿ ಕಾರಣ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 21, 2024 | 3:21 PM

ಬೀಚ್ ಎಂದ ಕೂಡಲೇ ಮೊದಲು ನೆನಪಿಗೆ ಬರುವುದೇ ಗೋವಾ. ಹೀಗಾಗಿ ಹೆಚ್ಚಿನವರು ಟ್ರಿಪ್ ಪ್ಲಾನ್ ಮಾಡುವಾಗ ಗೋವಾ ಮೊದಲ ಆಯ್ಕೆಯಾಗಿರುತ್ತದೆ. ಈ ಹಿಂದೆ ಬೀಚ್, ಸಮುದ್ರಾಹಾರ, ಕೈಗೆಟುಕುವ ದರದಲ್ಲಿ ಸಿಗುವ ಮದ್ಯ ಸೇರಿದಂತೆ ಹಲವು ಕಾರಣಗಳಿಂದ ಒಂದು ಕಾಲದಲ್ಲಿ ಗೋವಾವು ಪ್ರವಾಸಿಗರ ಸ್ವರ್ಗವಾಗಿತ್ತು. ಆದರೆ ಇದೀಗ ಬೆಂಗಳೂರಿಗರು ಗೋವಾ ಪ್ರವಾಸಕ್ಕೆ ವಿದಾಯ ಹೇಳುತ್ತಿದ್ದಾರೆ. ವಿಮಾನ ಪ್ರಯಾಣ ಮತ್ತು ವಸತಿ ವೆಚ್ಚಗಳು ಗೋವಾವನ್ನು ದುಬಾರಿಯಾಗಿ ಕಾಣುವಂತೆ ಮಾಡುತ್ತಿದೆ. ಹೀಗಾಗಿ ಕೆಲವು ಪ್ರವಾಸಿಗರು ಪರ್ಯಾಯ ಸ್ಥಳಗಳನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ.

ಹಣದುಬ್ಬರವು ಪ್ರಯಾಣ ವೆಚ್ಚವನ್ನು ಹೆಚ್ಚಿಸುತ್ತಿದ್ದು, ಬೆಂಗಳೂರಿನ ಪ್ರವಾಸಿಗರು ಕರಾವಳಿ ಸ್ಥಳಗಳಿಗೆ ಚಳಿಗಾಲದಲ್ಲಿ ಪ್ರವಾಸಕ್ಕೆ ಯೋಜನೆ ರೂಪಿಸುವಾಗ ಹೋಟೆಲ್‌ಗಳು ಮತ್ತು ವಿಮಾನಯಾನ ಸಂಸ್ಥೆಗಳು ಕೈಗೆಟುಕುವ ದರದಲ್ಲಿಯೇ ಎಂದು ನೋಡುತ್ತಿದ್ದಾರೆ. ಇದೆಲ್ಲವನ್ನು ಲೆಕ್ಕ ಹಾಕಿ ಕಡಿಮೆ ವೆಚ್ಚದ ಸ್ಥಳಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಆದರೆ ಗೋವಾ ಪ್ರವಾಸ ದುಬಾರಿಯಾಗಿರುವುದರಿಂದ ಶ್ರೀಲಂಕಾ, ಥೈಲ್ಯಾಂಡ್ ಮತ್ತು ವಿಯೆಟ್ನಾಂನಂತಹ ವಿದೇಶಿ ಬೀಚ್ ತಾಣಗಳನ್ನು ಆಯ್ಕೆ ಮಾಡಲು ಪ್ರವಾಸಿಗರನ್ನು ಪ್ರೇರೇಪಿಸುತ್ತದೆ ಎನ್ನಲಾಗಿದೆ. ಬೆಂಗಳೂರು ಮೂಲದ ಟೂರ್ ಆಪರೇಟರ್‌ಗಳು ಪ್ರವಾಸಿಗರ ಆಯ್ಕೆಗಳ ಬದಲಾವಣೆಗೆ ಏರುತ್ತಿರುವ ಬೆಲೆಗಳು ಮತ್ತು ಜನಪ್ರಿಯ ಭಾರತೀಯ ಕಡಲತೀರಗಳಲ್ಲಿ ಜನದಟ್ಟಣೆ ಕಾರಣ ಎಂದಿದ್ದಾರೆ.

ಸ್ಕೈವೇ ಟೂರ್ಸ್‌ನ ಟ್ರಾವೆಲ್ ಕನ್ಸಲ್ಟೆಂಟ್ ಮತ್ತು ಕರ್ನಾಟಕ ಟೂರಿಸಂ ಸೊಸೈಟಿಯ ಕಾರ್ಯದರ್ಶಿ ಎಸ್ ಮಹಾಲಿಂಗಯ್ಯ, ಹಣದುಬ್ಬರವು ಆಗ್ನೇಯ ಏಷ್ಯಾದಲ್ಲಿ ಹೆಚ್ಚು ಬಜೆಟ್ ಸ್ನೇಹಿ ಆಯ್ಕೆಗಳತ್ತ ಪ್ರವಾಸಿಗರು ಮನಸ್ಸು ಮಾಡುತ್ತಿದ್ದಾರೆ. ಗೋವಾದಂತಹ ಜನಪ್ರಿಯ ಭಾರತೀಯ ಕರಾವಳಿ ತಾಣಗಳಲ್ಲಿನ ಐಷಾರಾಮಿ ಹೋಟೆಲ್‌ಗಳ ವೆಚ್ಚವು ಆಗ್ನೇಯ ಏಷ್ಯಾಕ್ಕೆ ರೌಂಡ್‌ಟ್ರಿಪ್ ವಿಮಾನಗಳ ವೆಚ್ಚಕ್ಕಿಂತ ಹೆಚ್ಚಾಗಿದೆ. ಗೋವಾದಿಂದ ಕೊಚ್ಚಿಯ ಪಂಚತಾರಾ ಹೋಟೆಲ್‌ಗಳು ಪ್ರತಿ ರಾತ್ರಿಗೆ ಸುಮಾರು 20,000 ರಿಂದ 25,000 ರೂ. ಜೊತೆಗೆ 18% ಜಿಎಸ್‌ಟಿಯನ್ನು ವಿಧಿಸುತ್ತವೆ. ಈ ಬೆಲೆಗೆ ವಿದೇಶದಲ್ಲಿ ಉತ್ತಮ ಅನುಭವವನ್ನು ಪಡೆಯಲು ಸಾಧ್ಯವಾಗುವ ಕಾರಣ ವಿದೇಶಿ ತಾಣಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಬ್ಯಾಂಕಾಕ್, ಬಾಲಿ, ಸಿಂಗಾಪುರ್ ಹಾಗೂ ಕೊಲಂಬೊ ಸೇರಿದಂತೆ ಹೀಗೆ ಹಲವು ಆಗ್ನೇಯ ಏಷ್ಯಾದ ತಾಣಗಳಿಗೆ ಕಡಿಮೆ ಬೆಲೆಯಲ್ಲಿ ಪ್ರವಾಸ ಕೈಗೊಳ್ಳಬಹುದು. ಹೀಗಾಗಿ ಹೆಚ್ಚಿನ ಪ್ರವಾಸಿಗರು ಈ ಅಂತರಾಷ್ಟ್ರೀಯ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಬೆಂಗಳೂರು ಮೂಲದ ಪ್ರಯಾಣಿಕರಾದ ಧುಬೋ ಪುರ್ಕಾಯಸ್ಥ ಅವರು ಗೌಪ್ಯತೆಹಾಗೂ ವಿಶ್ರಾಂತಿಗಾಗಿ ನಿಶ್ಯಬ್ದ ಕಡಲತೀರಗಳನ್ನು ಆದ್ಯತೆ ನೀಡುತ್ತಾರೆ. ಆದರೆ ಈ ಭಾರತೀಯ ಕಡಲತೀರಗಳು ವಿಶೇಷವಾಗಿ ಪಶ್ಚಿಮ ಕರಾವಳಿಯೂ ವರ್ಷಪೂರ್ತಿ ಜನಸಂದಣಿಯಿಂದ ಕೂಡಿರುತ್ತವೆ ಎಂದಿದ್ದಾರೆ. ಒಂದು ಕಾಲದಲ್ಲಿ ಏಕಾಂತವಾಗಿದ್ದ ಗೋಕರ್ಣದ ಕೆಲವು ಬೀಚ್‌ಗಳು ಈಗ ಜನದಟ್ಟಣೆಯಿಂದ ಕೂಡಿದೆ. ಇದಕ್ಕೆ ತದ್ವಿರುದ್ಧ ಎನ್ನುವಂತೆ ಥೈಲ್ಯಾಂಡ್ ಅಥವಾ ವಿಯೆಟ್ನಾಂನಲ್ಲಿರುವ ಕಡಲತೀರಗಳು ಇವೆ. ಇಲ್ಲಿ ಮುಂಗಡವಾಗಿ ಕಾಯ್ದಿರಿಸಿದರೆ, ಪಶ್ಚಿಮ ಕರಾವಳಿಯಿಂದ 10,000 ರೂ ಕ್ಕಿಂತ ಕಡಿಮೆ ಬೆಲೆಯಲ್ಲಿ ಬ್ಯಾಂಕಾಕ್‌ಗೆ ವಿಮಾನದಲ್ಲಿ ತೆರಳಬಹುದು. ಇದು ಅಂತಾರಾಷ್ಟ್ರೀಯ ಪ್ರಯಾಣವನ್ನು ಹೆಚ್ಚು ಆಕರ್ಷಕವಾಗಿ ಮಾಡುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಾಥಮಿಕ ಶಿಕ್ಷಣದಲ್ಲಿ ಮಕ್ಕಳಿಗೆ ತತ್ವಶಾಸ್ತ್ರ ಎಷ್ಟು ಅಗತ್ಯ? ಇಲ್ಲಿದೆ ಮಾಹಿತಿ

ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಏನಿದೆ?

ಕರ್ನಾಟಕದ ಪ್ರವಾಸೋದ್ಯಮ ಇಲಾಖೆಯು 2024-29ರ ಹೊಸ ಪ್ರವಾಸೋದ್ಯಮ ನೀತಿಯ ಅಡಿಯಲ್ಲಿ ರಾಜ್ಯದ 320 ಕಿಮೀ ಕರಾವಳಿಯನ್ನು ಪ್ರಮುಖ ಕಡಲತೀರದ ತಾಣವನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ. ಈ ವರ್ಷದ ಆರಂಭದಲ್ಲಿ, ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಗಾಗಿ ಇಲಾಖೆಯು ಕರಾವಳಿಯಲ್ಲಿ 40 ಸ್ಥಳಗಳನ್ನು ಗುರುತಿಸಿದೆ. ಕರಾವಳಿ ಕರ್ನಾಟಕವು 2023 ರಲ್ಲಿ 8 ಕೋಟಿಗೂ ಹೆಚ್ಚು ಸಂದರ್ಶಕರನ್ನು ಕಂಡಿದ್ದು, ಇದು ರಾಜ್ಯದ ಒಟ್ಟು ಪ್ರವಾಸಿಗರ ಸಂಖ್ಯೆಯಲ್ಲಿ 12-15% ರಷ್ಟಿದೆ ಎನ್ನಲಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ