World Fisheries Day 2024 : ಮತ್ಸ್ಯೋದ್ಯಮದಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ? ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಗುರಿಯೇನು?

ಮೀನುಗಾರಿಕೆ ಉದ್ಯಮವು ಸರಿಸುಮಾರು 28 ಮಿಲಿಯನ್ ಮೀನುಗಾರರಿಗೆ ಮತ್ತು ಲಕ್ಷಗಟ್ಟಲೆ ಮೀನು ಕೃಷಿಕರಿಗೆ ಉದ್ಯೋಗವನ್ನು ಒದಗಿಸುತ್ತದೆ. ಜೊತೆಗೆ ಭಾರತದ ಆಹಾರ ಭದ್ರತೆಗೆ ಕೊಡುಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಪಂಚದಾದ್ಯಂತ ಮೀನುಗಾರಿಕೆಗೆ ಸಂಬಂಧಿಸಿದ ಎಲ್ಲಾ ಮೀನುಗಾರರು ಹಾಗೂ ಇತರ ಮಧ್ಯಸ್ಥಗಾರರ ಒಗ್ಗಟ್ಟನ್ನು ಪ್ರದರ್ಶಿಸಲು ಈ ದಿನವನ್ನು ಪ್ರತಿ ವರ್ಷ ನವೆಂಬರ್ 21 ರಂದು ವಿಶ್ವ ಮೀನುಗಾರಿಕಾ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

World Fisheries Day 2024 : ಮತ್ಸ್ಯೋದ್ಯಮದಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ? ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಗುರಿಯೇನು?
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 21, 2024 | 10:29 AM

ಜಾಗತಿಕವಾಗಿ, 250 ದಶಲಕ್ಷಕ್ಕೂ ಹೆಚ್ಚು ಜನರು ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆಯ ಮೇಲೆಯೇ ಅವಲಂಬಿತರಾಗಿದ್ದಾರೆ. ಅದೆಷ್ಟೋ ಶತಮಾನಗಳಿಂದ, ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆಯಲ್ಲಿ ಭಾರತ ಸೇರಿದಂತೆ ವಿಶ್ವದ ಕೆಲವು ರಾಷ್ಟ್ರಗಳು ಮುಂದಿದೆ. ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆಯ ಸಮರ್ಥನೀಯ ವಿಧಾನದಿಂದಾಗಿ ಸಂಪನ್ಮೂಲಗಳನ್ನು ರಕ್ಷಿಸುವಲ್ಲಿ, ಮುಂದಿನ ಪೀಳಿಗೆಗೆ ಮೀನು ಸಂಗ್ರಹಗಳನ್ನು ಲಭ್ಯವಿರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ನವೆಂಬರ್ 21 ರಂದು ವಿಶ್ವ ಮೀನುಗಾರಿಕಾ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.

ವಿಶ್ವ ಮೀನುಗಾರಿಕಾ ದಿನ ಇತಿಹಾಸ

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ ಮೀನುಗಾರಿಕೆ ಇಲಾಖೆಯು 2014 ರಿಂದ ನವೆಂಬರ್ 21 ರಂದು ವಿಶ್ವ ಮೀನುಗಾರಿಕಾ ದಿನವನ್ನು ಆಚರಿಸಲು ಮುಂದಾಯಿತು. ಮೀನುಗಾರಿಕೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮೀನುಗಾರರ ಪಾತ್ರ ಮತ್ತು ಕೊಡುಗೆಯನ್ನು ಗುರುತಿಸಲು ಮತ್ತು ಪ್ರಪಂಚದಾದ್ಯಂತದ ಎಲ್ಲಾ ಪಾಲುದಾರರೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸುವುದು ಈ ದಿನದ ಉದ್ದೇಶವಾಗಿತ್ತು. ಅಂದಿನಿಂದ ಪ್ರತಿ ವರ್ಷವು ನವೆಂಬರ್ 21 ರಂದು ವಿಶ್ವ ಮೀನುಗಾರಿಕಾ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ವಿಶ್ವ ಮೀನುಗಾರಿಕಾ ದಿನದ ಥೀಮ್ ಹಾಗೂ ಮಹತ್ವ

ಮೀನುಗಾರರ ಅಮೂಲ್ಯ ಕೊಡುಗೆಗಳನ್ನು ಎತ್ತಿ ತೋರಿಸುವುದು ಹಾಗೂ ಮೀನು ಕೃಷಿಕರು ಮೀನುಗಾರಿಕಾ ವಲಯದ ಮಧ್ಯಸ್ಥಗಾರರ ನಡುವೆ ಜಾಗತಿಕ ಒಗ್ಗಟ್ಟನ್ನು ಪ್ರದರ್ಶಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಈ ವರ್ಷ, ಭಾರತದ ನೀಲಿ ಪರಿವರ್ತನೆ ಎನ್ನುವ ಥೀಮ್ ನಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ. ಸಣ್ಣ-ಪ್ರಮಾಣದ ಮತ್ತು ಸುಸ್ಥಿರ ಮೀನುಗಾರಿಕೆಯನ್ನು ಬಲಪಡಿಸುವುದು. ಸುಸ್ಥಿರ ಅಭ್ಯಾಸಗಳನ್ನು ಮುಂದುವರಿಸಲು ಹಾಗೂ ಸಣ್ಣ-ಪ್ರಮಾಣದ ಮೀನುಗಾರಿಕೆಯನ್ನು ಸಶಕ್ತಗೊಳಿಸಲು ದೇಶದ ಬದ್ಧತೆಯನ್ನು ಎತ್ತಿ ತೋರಿಸುವುದಾಗಿದೆ.

ಮೀನು ಉತ್ಪಾದನೆಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?

ಭಾರತವು ಅಕ್ವಾಕಲ್ಚರ್ ಮೂಲಕ ಮೀನು ಉತ್ಪಾದಿಸುವ ದೇಶವಾಗಿದ್ದು, ವಿಶ್ವದ ಎರಡನೇ ಪ್ರಮುಖ ಮೀನು ಉತ್ಪಾದಕ ದೇಶವಾಗಿದೆ. ಭಾರತದಲ್ಲಿನ ಮೀನುಗಾರಿಕೆ ಕ್ಷೇತ್ರವು ಸುಮಾರು 28 ಮಿಲಿಯನ್ ಮೀನುಗಾರರು ಮತ್ತು ಮೀನು ಕೃಷಿಕರಿಗೆ ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆ ಮತ್ತು ವಿದೇಶಿ ವಿನಿಮಯ ಗಳಿಕೆಯನ್ನು ಪೂರೈಸುವುದರ ಜೊತೆಗೆ ನೇರ ಉದ್ಯೋಗವನ್ನು ಒದಗಿಸುತ್ತದೆ. ಜಾಗತಿಕ ಮೀನು ಉತ್ಪಾದನೆಗೆ ಭಾರತದ ಕೊಡುಗೆ ಸುಮಾರು 7.7 ಪ್ರತಿಶತ ಮತ್ತು ಇದು ಮೀನು ಉತ್ಪನ್ನಗಳ ಜಾಗತಿಕ ರಫ್ತಿನಲ್ಲಿ 4 ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಟೆಲಿವಿಷನ್ ಕಂಡು ಹಿಡಿದ ವ್ಯಕ್ತಿ ಯಾರು? ಭಾರತದಲ್ಲಿ ದೂರದರ್ಶನ ಅಭಿವೃದ್ಧಿಯಾದದ್ದು ಹೇಗೆ? ಇಲ್ಲಿದೆ ಮಾಹಿತಿ

ಮತ್ಸ್ಯೋದ್ಯಮದಲ್ಲಿ 2024-25 ಕ್ಕೆ ಭಾರತದ ಗುರಿಯೇನು?

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಪ್ರಕಾರ, ಮೀನುಗಾರಿಕಾ ವಲಯದಲ್ಲಿ ಮೊದಲ ಬಾರಿಗೆ, ಸರ್ಕಾರವು 2019-20 ಕ್ಕೆ ಉತ್ತಮ ಸಾಧನೆ ಮಾಡಿದ ರಾಜ್ಯಗಳಿಗೆ ಪ್ರಶಸ್ತಿಗಳನ್ನು ನೀಡಿದೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯು 2024-25 ರ ವೇಳೆಗೆ 22 ಮಿಲಿಯನ್ ಮೆಟ್ರಿಕ್ ಟನ್ ಮೀನು ಉತ್ಪಾದನೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಈ ವಲಯವನ್ನು ಪರಿವರ್ತಿಸುವಲ್ಲಿ ಭಾರತ ಸರ್ಕಾರವು ಮುಂಚೂಣಿಯಲ್ಲಿದೆ. ಅದಲ್ಲದೇ, ದೇಶದಲ್ಲಿ ನೀಲಿ ಕ್ರಾಂತಿಯ ಮೂಲಕ ಆರ್ಥಿಕ ಕ್ರಾಂತಿಗೆ ನಾಂದಿ ಹಾಡಿದೆ. ಭಾರತದಲ್ಲಿ 3 ಕೋಟಿ ಮೀನುಗಾರರು ಮತ್ತು ಮೀನುಗಾರಿಕೆಗೆ ಸುಸ್ಥಿರ ಆದಾಯ ಮತ್ತು ಜೀವನೋಪಾಯವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:28 am, Thu, 21 November 24

ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ
ಗುಂಪು ಕಟ್ಟಿಕೊಂಡು ಬರಲ್ಲ, ಸಿಂಗಲ್ ಸಿಂಹ ರೀತಿ ಬರ್ತೀನಿ; ಚೈತ್ರಾ ಕುಂದಾಪುರ
ಗುಂಪು ಕಟ್ಟಿಕೊಂಡು ಬರಲ್ಲ, ಸಿಂಗಲ್ ಸಿಂಹ ರೀತಿ ಬರ್ತೀನಿ; ಚೈತ್ರಾ ಕುಂದಾಪುರ
ಮೈಸೂರು: ಮುಡಾದಲ್ಲಿ 5 ಸಾವಿರ ಕೋಟಿ ರೂ. ಹಗರಣ, ಗಂಗರಾಜು ಗಂಭೀರ ಆರೋಪ
ಮೈಸೂರು: ಮುಡಾದಲ್ಲಿ 5 ಸಾವಿರ ಕೋಟಿ ರೂ. ಹಗರಣ, ಗಂಗರಾಜು ಗಂಭೀರ ಆರೋಪ
ಗಣೇಶನಿಗೆ ತುಳಸಿಯನ್ನು ಯಾಕೆ ಅರ್ಪಿಸಬಾರದು? ತಿಳಿಯಲು ಈ ವಿಡಿಯೋ ನೋಡಿ
ಗಣೇಶನಿಗೆ ತುಳಸಿಯನ್ನು ಯಾಕೆ ಅರ್ಪಿಸಬಾರದು? ತಿಳಿಯಲು ಈ ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಶುಭವಾಗಲಿದೆ
Nithya Bhavishya: ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಶುಭವಾಗಲಿದೆ
ಕೆಲಸಕ್ಕೆ ಮುಸ್ಲಿಂ ಯುವತಿಯನ್ನು ಕರೆ ತಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ!
ಕೆಲಸಕ್ಕೆ ಮುಸ್ಲಿಂ ಯುವತಿಯನ್ನು ಕರೆ ತಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ!
ಪೋಷಕರೇ ಎಚ್ಚರ! ಆಟವಾಡುವಾಗ ಗೇಟ್ ಬಿದ್ದು ಒಂದೂವರೆ ವರ್ಷದ ಮಗು ಸಾವು
ಪೋಷಕರೇ ಎಚ್ಚರ! ಆಟವಾಡುವಾಗ ಗೇಟ್ ಬಿದ್ದು ಒಂದೂವರೆ ವರ್ಷದ ಮಗು ಸಾವು
ಭಕ್ತನಂತೆ ದೇವಸ್ಥಾನಕ್ಕೆ ಬಂದು ದೇವರ ವಿಗ್ರಹವನ್ನೇ ಕದ್ದ ಖತರ್ನಾಕ್ ಕಳ್ಳ
ಭಕ್ತನಂತೆ ದೇವಸ್ಥಾನಕ್ಕೆ ಬಂದು ದೇವರ ವಿಗ್ರಹವನ್ನೇ ಕದ್ದ ಖತರ್ನಾಕ್ ಕಳ್ಳ
ಥಾರ್​ ಖರೀದಿಸಿದ ಖುಷಿಗೆ ಮಹೀಂದ್ರಾ ಶೋರೂಂನಲ್ಲಿ ಗುಂಡು ಹಾರಿಸಿದ ಯುವಕ!
ಥಾರ್​ ಖರೀದಿಸಿದ ಖುಷಿಗೆ ಮಹೀಂದ್ರಾ ಶೋರೂಂನಲ್ಲಿ ಗುಂಡು ಹಾರಿಸಿದ ಯುವಕ!