Amarnath Yatra 2023: ಅಮರನಾಥ ದೇವಾಲಯದ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ

ನೀವು ಕೂಡ ಅಮರನಾಥಕ್ಕೆ ಭೇಟಿ ನೀಡುವ ಪ್ಲಾನ್​​ ಯೋಚಿಸಿದ್ದರೆ ಹೋಗುವ ಮೊದಲು ಅಮರನಾಥ ದೇವಾಲಯದ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಯನ್ನು ಇಲ್ಲಿ ತಿಳಿದುಕೊಳ್ಳಿ.

Amarnath Yatra 2023: ಅಮರನಾಥ ದೇವಾಲಯದ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ
Amarnath Yatra 2023Image Credit source: Explore Our India
Follow us
ಅಕ್ಷತಾ ವರ್ಕಾಡಿ
|

Updated on: Jun 23, 2023 | 1:47 PM

ಅಮರನಾಥ ಯಾತ್ರೆ(Amarnath Yatra) ಯು ಭಾರತದ ಅತ್ಯಂತ ಪವಿತ್ರ ತೀರ್ಥಯಾತ್ರೆಗಳಲ್ಲಿ ಒಂದಾಗಿದೆ. ಈ ಪವಿತ್ರ ಸ್ಥಳವು ಸಮುದ್ರ ಮಟ್ಟದಿಂದ 13,600 ಅಡಿ ಎತ್ತರದಲ್ಲಿದೆ. ಈ ವರ್ಷ, ಅಮರನಾಥ ಯಾತ್ರೆಯು ಜುಲೈ 1 ರಂದು ಪ್ರಾರಂಭವಾಗಲಿದ್ದು, 62 ದಿನಗಳ ಕಾಲ ಯಾತ್ರೆ ನಡೆಯಲಿದೆ. ಅಮರನಾಥ ಯಾತ್ರೆಯು ಆಗಸ್ಟ್ 31 ರಂದು ಮುಕ್ತಾಯಗೊಳ್ಳಲಿದೆ. ಏಪ್ರಿಲ್ 17 ರಂದು ನೋಂದಣಿ ಪ್ರಾರಂಭವಾಗಿದೆ. ನೀವು ಕೂಡ ಅಮರನಾಥಕ್ಕೆ ಭೇಟಿ ನೀಡುವ ಪ್ಲಾನ್​​ ಯೋಚಿಸಿದ್ದರೆ ಹೋಗುವ ಮೊದಲು ಅಮರನಾಥ ದೇವಾಲಯದ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಯನ್ನು ಇಲ್ಲಿ ತಿಳಿದುಕೊಳ್ಳಿ.

ಅಮರನಾಥ ದೇವಾಲಯದ ಕೆಲವು ಆಸಕ್ತಿದಾಯಕ ಸಂಗತಿಗಳು:

  • ಅಮರನಾಥ ದೇವಾಲಯವು ಭಾರತದ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಹಿಂದೂ ದೇವಾಲಯವಾಗಿದೆ. ಅಮರನಾಥ ಗುಹೆಯು 3,888 ಮೀ ಎತ್ತರದಲ್ಲಿದೆ ಮತ್ತು ಪಹಲ್ಗಾಮ್‌ನಿಂದ 45 ಕಿಮೀ ಮತ್ತು ಶ್ರೀನಗರದಿಂದ 141 ಕಿಮೀ ದೂರದಲ್ಲಿದೆ.
  • ಅಬುಲ್ ಫಜಲ್ ತನ್ನ ಅಮರ ಕೃತಿ ‘ಐನ್-ಇ-ಅಕ್ಬರ್’ ನಲ್ಲಿ ಈ ದೇವಾಲಯವನ್ನು ಉಲ್ಲೇಖಿಸಿದ್ದಾರೆ ಮತ್ತು ಈ ಸ್ಥಳವನ್ನು ಯಾತ್ರಿಕರಲ್ಲಿ ಅತ್ಯಂತ ಜನಪ್ರಿಯ ತಾಣವೆಂದು ಕರೆದಿದ್ದಾರೆ.

ಇದನ್ನೂ ಓದಿ: ರಾಜ್ಯಾದ್ಯಂತ ಜೂ.27ರಂದು ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ

  • ಮಹಾನ್ ಸನ್ಯಾಸಿ ಸ್ವಾಮಿ ವಿವೇಕಾನಂದರು 1898 ರಲ್ಲಿ ಈ ಗುಹೆಗೆ ಭೇಟಿ ನೀಡಿದ್ದರು ಮತ್ತು ಅವರು ಅಲ್ಲಿನ ಸೌಂದರ್ಯದಿಂದ ಮಂತ್ರಮುಗ್ಧರಾಗಿದ್ದರು. ಅದರ ಭೇಟಿಗಳ ವಿವರವನ್ನು ಸೋದರಿ ನಿವೇದಿತಾ ಅವರ ‘ಸ್ವಾಮಿ ವಿವೇಕಾನಂದರೊಂದಿಗೆ ಕೆಲವು ಅಲೆದಾಟಗಳ ಟಿಪ್ಪಣಿಗಳು'(Notes of Some Wanderings with the Swami Vivekananda) ಕೃತಿಯಲ್ಲಿ ಕಾಣಬಹುದು.
  • ಕೆಲವು ಶಿವ ಭಕ್ತರು ಅಮರನಾಥ ಯಾತ್ರೆಯನ್ನು ಸ್ವರ್ಗದ ದಾರಿ ಎಂದು ಕರೆದರೆ, ಇನ್ನೂ ಕೆಲವರು ಮೋಕ್ಷದ ಸ್ಥಳ ಎಂದು ಕರೆಯುತ್ತಾರೆ. ಅಷ್ಟರ ಮಟ್ಟಿಗೆ ಭಕ್ತರ ನಂಬಿಕೆಯ ಪಾವಿತ್ರ್ಯತೆಯುಳ್ಳ ತಾಣವಾಗಿದೆ.
  • 11 ನೇ ಶತಮಾನದ ರಾಣಿ ಸೂರ್ಯಮತಿ ಈ ದೇವಾಲಯಕ್ಕೆ ತ್ರಿಶೂಲಗಳು, ಬಾಣ ಲಿಂಗಗಳು ಮತ್ತು ಇತರ ಪವಿತ್ರ ಲಾಂಛನಗಳನ್ನು ಉಡುಗೊರೆಯಾಗಿ ನೀಡಿದ್ದಾಳೆ ಎಂಬುದು ನಂಬಿಕೆಯಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: