ತ್ವಚೆಯ ಸೌಂದರ್ಯಕ್ಕೆ ಮಾತ್ರವಲ್ಲ ಹೊಟ್ಟೆ ಸಂಬಂಧಿ ಕಾಯಿಲೆಗೂ ಉತ್ತಮ ಅಲೋವೆರಾ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 11, 2023 | 3:11 PM

ತ್ಚಚೆಯ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಂಡರೆ, ನೈಸರ್ಗಿಕವಾಗಿ ದೊರೆಯುವ ಅಲೋವೆರಾವನ್ನು ಬಳಸಿಕೊಂಡು ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದು ತಿಳಿದಿರು ವಿಚಾರ. ಆದರೆ ಅಲೋವೆರಾ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಅವುಗಳು ಹೊಟ್ಟೆ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಈ ಕುರಿತ ಇನ್ನಷ್ಟು ಮಾಹಿತಿ ಇಲ್ಲಿದೆ.

ತ್ವಚೆಯ ಸೌಂದರ್ಯಕ್ಕೆ ಮಾತ್ರವಲ್ಲ ಹೊಟ್ಟೆ ಸಂಬಂಧಿ ಕಾಯಿಲೆಗೂ ಉತ್ತಮ ಅಲೋವೆರಾ
ಸಾಂದರ್ಭಿಕ ಚಿತ್ರ
Follow us on

ಅಲೋವೆರಾ ಒಂದು ಅದ್ಭುತ ಸಸ್ಯವಾಗಿದ್ದು, ಅದು ನಮ್ಮ ಚರ್ಮವನ್ನು ಸುಂದರವಾಗಿ ಮತ್ತು ದೇಹವನ್ನು ಆರೋಗ್ಯಕರವಾಗಿಡುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಅಲೋವೆರಾ ನಂಜುನಿರೋಧಕ, ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಮತ್ತು ಉತ್ಕರ್ಷಣ ನಿರೋಧಕ ಸೇರಿದಂತೆ ಹಲವು ಅಂಶಗಳಿಂದ ಕೂಡಿದೆ. ಅಲೋವೆರಾದ ಈ ಎಲ್ಲಾ ಗುಣಲಕ್ಷಣಗಳು ದೇಹದ ಗಾಯಗಳನ್ನು ಗುಣಪಡಿಸಲು ಮತ್ತು ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಹಳ ಸಹಾಯಕವಾಗಿದೆ. ಅಲ್ಲದೆ ಹೊಟ್ಟೆ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಲು ಸಹ ಅಲೋವೆರಾ ಸಹಕಾರಿಯಾಗಿದೆ. ಕಳಪೆ ಮಟ್ಟದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಸೇವನೆಯಿಂದ ಇಂದು ಅನೇಕ ಜನರು ಹೆಚ್ಚಾಗಿ ಹೊಟ್ಟೆ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ಹೊಟ್ಟೆ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಲ್ಲಿ ಅಲೋವೆರಾವೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಹೊಟ್ಟೆ ಸಂಬಂಧಿ ಸಮಸ್ಯೆಗಳಿಗೆ ಅಲೋವೆರಾವನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಯಿರಿ

ಹೊಟ್ಟೆ ಸಂಬಂಧಿ ಸಮಸ್ಯೆಗಳಿಗೆ ಅಲೋವೆರಾದ ಉಪಯೋಗಳು:

ಹೊಟ್ಟೆನೋವಿನಿಂದ ಪರಿಹಾರ ನೀಡುತ್ತದೆ:

ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರಗಳನ್ನು ಸೇವಿಸುವುದರಿಂದ ಸಾಮಾನ್ಯವಾಗಿ ಹೊಟ್ಟೆ ನೋವಿನ ಸಮಸ್ಯೆಯನ್ನು ಎದುರಿಸುತ್ತಾರೆ. ಅಲ್ಲದೆ ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸದಿದ್ದಾಗಲೂ ಹೊಟ್ಟೆ ನೋವಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ರೀತಿ ಹೊಟ್ಟೆ ನೋವು ಕಾಣಿಸಿಕೊಂಡಾಗ ನಿಮಗೆ ಅಲೋವೆರಾ ಸಹಾಯವಾಗಬಹುದು. ಹೊಟ್ಟೆ ನೋವು ಕಾಣಿಸಿಕೊಂಡರೆ ಅಲೋವೆರವನ್ನು ನೀರಿನೊಂದಿಗೆ ಸೇರಿಸಿ ಚೆನ್ನಾಗಿ ಕುದಿಸಿ.ಅದನ್ನು ಶೋಧಿಸಿ ಅದಕ್ಕೆ ಇಂಗು ಬೆರೆಸಿ ಕುಡಿಯಿರಿ. ಇದನ್ನು ಕುಡಿಯವುದರಿಂದ ಹೊಟ್ಟೆ ನೋವು ನಿವಾರಣೆಯಾಗುತ್ತದೆ.

ಹೊಟ್ಟೆಯ ಗಡ್ಡೆ ಸಮಸ್ಯೆ ಕಡಿಮೆ ಮಾಡುತ್ತದೆ:

ಅಲೋವೆರಾ ಹೊಟ್ಟೆಯಲ್ಲಿ ಕಾಣಿಸಿಕೊಳ್ಳುವ ಗಡ್ಡೆಯ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ. ಹೊಟ್ಟೆಯಲ್ಲಿ ಗಡ್ಡೆಯ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, ಅಲೋವೆರಾದ ತಿರುಳನ್ನು ನಿಮ್ಮ ಹೊಟ್ಟೆಯ ಮೇಲೆ ಪ್ರತಿದಿನ ಸುಮಾರು ಎರಡು ಗಂಟೆಗಳ ಕಾಲ ಕಟ್ಟಿಕೊಳ್ಳಿ. ಹೀಗೆ ಮಾಡುವುದರಿಂದ ಗಡ್ಡೆಯು ಕಡಿಮೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಅಲೋವೆರಾ ಜ್ಯೂಸ್​​ನ ಆರೋಗ್ಯ ಪ್ರಯೋಜನಗಳು

ಗ್ಯಾಸ್ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ:

ಹೆಚ್ಚಿನವರಿಗೆ ಹೊಟ್ಟೆ ಗ್ಯಾಸ್ ಸಮಸ್ಯೆ ಬಾಧಿಸುತ್ತದೆ. ಗ್ಯಾಸ್ ಸಮಸ್ಯೆ ಇರುವವರು ಅಅಲೋವೆರಾವನ್ನು ಸೇವಿಸಬಹುದು. ನೀವು 2 ಚಮಚ ಅಲೋವೆರಾ ತಿರುಳಿ ತೆಗೆದುಕೊಂಡು ಅದಕ್ಕೆ ಒಂದು ಚಮಚ ಹಸುವಿನ ತುಪ್ಪ, ಒಂದು ಚಿಟಿಕೆ ಮೈರೋಬಾಲನ್ (ಅಳಲೆ ಕಾಯಿ) ಪುಡಿ ಮತ್ತು ಒಂದು ಚಿಟಿಕೆ ಕಲ್ಲು ಉಪ್ಪು ಸೇರಿಸಿ. ಈ ಮಿಶ್ರಣವನ್ನು ಸೇವಿಸುವುದರಿಂದ ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ.

ಜೀರ್ಣಾಂಗವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ:

ನೀವು ಅಲೋವೆರಾ ಜ್ಯೂಸ್​​​ನ್ನು ನಿಯಮಿತವಾಗಿ ಸೇವನೆ ಮಾಡಿದರೆ, ನಿಮ್ಮ ಜೀರ್ಣಕ್ರಿಯೆಯು ಸರಾಗವಾಗುತ್ತದೆ ಮತ್ತು ನೀವು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಅಲೋವೆರಾ ಜ್ಯೂಸ್​​​ನ್ನು ಬೆಳಗ್ಗೆ ಸೇವಿಸಿದರೆ ಉತ್ತಮ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: