ಮಕ್ಕಳ ಪರೀಕ್ಷೆ ಸಮಯ ಹತ್ತಿರ ಬರುತ್ತಿದ್ದಂತೆ ಹೆತ್ತವರಾದ ನಿಮ್ಮ ಪಾತ್ರ ಹೀಗಿರಲಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 16, 2024 | 6:37 PM

ಮಕ್ಕಳು ಶೈಕ್ಷಣಿಕ ತೊಡಗುವಿಕೆಯು ಎಷ್ಟಿದೆ ಎನ್ನುವುದು ತಿಳಿಯುವುದೇ ಪರೀಕ್ಷೆಯ ಫಲಿತಾಂಶವು ಬಂದ ಬಳಿಕವೇ. ಹೀಗಾಗಿ ಮಕ್ಕಳ ಪರೀಕ್ಷಾ ತಯಾರಿ ಚೆನ್ನಾಗಿರಲಿ ಎಂದು ಹೆತ್ತವರು ಬಯಸುತ್ತಾರೆ. ಪೋಷಕರೂ ಮಕ್ಕಳಿಗೆ ಪೋಷಕರು ಪರೀಕ್ಷೆಯು ಹತ್ತಿರ ಬರುತ್ತಿದ್ದಂತೆ ಒತ್ತಡ ಹೇರಲು ಶುರು ಮಾಡುತ್ತಾರೆ. ಆದರೆ ಮಕ್ಕಳ ಶೈಕ್ಷಣಿಕ ಜೀವನದ ಪರೀಕ್ಷೆಯ ಅವಧಿಯಲ್ಲಿ ಫೋಷಕರು ಮಕ್ಕಳಿಗೆ ಬೆಂಬಲವನ್ನು ನೀಡಬೇಕು. ಈ ಸಮಯದಲ್ಲಿ ಪೋಷಕರಿಗೂ ಒಂದಷ್ಟು ಜವಾಬ್ದಾರಿಗಳಿವೆ. ಈ ಎಲ್ಲಾ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಿದರೆ ಮಕ್ಕಳು ಕೂಡ ಯಾವುದೇ ಭಯ ಆತಂಕವಿಲ್ಲದೇ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸುತ್ತಾರೆ.

ಮಕ್ಕಳ ಪರೀಕ್ಷೆ ಸಮಯ ಹತ್ತಿರ ಬರುತ್ತಿದ್ದಂತೆ ಹೆತ್ತವರಾದ ನಿಮ್ಮ ಪಾತ್ರ ಹೀಗಿರಲಿ
ಸಾಂದರ್ಭಿಕ ಚಿತ್ರ
Follow us on

ಪರೀಕ್ಷೆಯ ಸಮಯ ಹತ್ತಿರ ಬರುತ್ತಿದ್ದಂತೆ ಮಕ್ಕಳಿಗೆ ಮಾತ್ರವಲ್ಲದೇ ಪೋಷಕರು ಕೂಡ ಭಯ ಹಾಗೂ ಆತಂಕದಲ್ಲಿರುತ್ತಾರೆ. ಮಕ್ಕಳಿಗೆ ಪರೀಕ್ಷೆ ಮುಗಿಯುವ ತನಕ ಹೆತ್ತವರಿಗೆ ಟೆನ್ಶನೋ ಟೆನ್ಶನ್. ಈ ಸಮಯದಲ್ಲಿ ಬಹುತೇಕ ಪೋಷಕರು ಮಕ್ಕಳ ಮೇಲೆ ಹೆಚ್ಚು ಒತ್ತಡ ಹೇರುವುದನ್ನು ನೋಡಿರಬಹುದು. ಈ ಸಲ ಒಳ್ಳೆಯ ಅಂಕಗಳಿಸಿದರೆ ನೀನು ಹೇಳಿದಾಗೆ ನಾನು ಕೇಳುತ್ತೇನೆ ಎನ್ನುವ ಮಾತು ಹೆಚ್ಚಿನ ಪೋಷಕರು ಹೇಳುವುದನ್ನು ಕೇಳಿರಬಹುದು. ಆದರೆ ಮಕ್ಕಳು ಕೂಡ ಪರೀಕ್ಷೆಯನ್ನು ಬರೆಯಲು ತಯಾರಿ ನಡೆಸುತ್ತಿದ್ದರೆ ಹೆತ್ತವರು ಬೆಂಬಲ ನೀಡುವುದು ಬಹಳ ಮುಖ್ಯ.

ಪರೀಕ್ಷೆಯ ಸಮಯದಲ್ಲಿ ಹೆತ್ತವರ ಪಾತ್ರ ಹೀಗಿರಲಿ:

* ಮಕ್ಕಳ ಮೇಲೆ ಒತ್ತಡ ಬೇಡ : ಪರೀಕ್ಷೆ ಸಮಯ ಹತ್ತಿರ ಬರುತ್ತಿದ್ದಂತೆ ಎಲ್ಲಾ ಹೆತ್ತವರು ಮಾಡುವ ತಪ್ಪೆಂದರೆ ಮಕ್ಕಳ ಮೇಲೆ ಓದು ಎಂದು ಒತ್ತಡ ಹಾಕುವುದು. ಇದರಿಂದ ಮಕ್ಕಳು ಮಾನಸಿಕ ಒತ್ತಡವನ್ನು ಅನುಭವಿಸುತ್ತಾರೆ. ಮಕ್ಕಳ ಮೇಲೆ ಒತ್ತಡ ಹಾಕುವ ಕೆಲಸವನ್ನು ಮೊದಲು ನಿಲ್ಲಿಸಿ , ಈಗ ಓದಿದರೆ ಮುಂದೆ ಭವಿಷ್ಯಕ್ಕೆ ಎಷ್ಟು ಪ್ರಯೋಜನವಾಗುತ್ತದೆ ಎನ್ನುವುದನ್ನು ತಿಳಿ ಹೇಳಿ, ನಿಮ್ಮ ಮಕ್ಕಳು ನಿಮ್ಮ ಮಾತನ್ನು ಅರ್ಥ ಮಾಡಿಕೊಳ್ಳುತ್ತಾರೆ.

* ಮಕ್ಕಳಿಗೆ ನೀಡುವ ಆಹಾರದ ಮೇಲೆ ಗಮನವಿರಲಿ : ಪರೀಕ್ಷೆ ಸಮಯ ಹತ್ತಿರ ಬರುತ್ತಿದ್ದಂತೆ ಮಕ್ಕಳು ಕೇಳುತ್ತಾರೆ ಎಂದು ಸಿಕ್ಕ ಸಿಕ್ಕ ಆಹಾರವನ್ನು ನೀಡಬೇಡಿ. ಮಕ್ಕಳಿಗೆ ನೀಡುವ ಆಹಾರವು ಪೌಷ್ಟಿಕಾಂಶಯುಕ್ತವಾಗಿರಲಿ. ಸರಿಯಾದ ಸಮಯಕ್ಕೆ ಆಹಾರವನ್ನು ನೀಡುವ ಅಭ್ಯಾಸ ಮಾಡಿಕೊಳ್ಳುವುದರಿಂದ ಇದು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು.

* ಮನೆಯ ವಾತಾವರಣವು ಆರೋಗ್ಯಕರವಾಗಿರಲಿ : ಮಕ್ಕಳು ಓದುವ ಸಮಯದಲ್ಲಿ ಮನೆಯ ವಾತಾವರಣ ಪ್ರಶಾಂತವಾಗಿದ್ದರೆ, ಓದಿದ್ದೆಲ್ಲವು ನೆನಪಿನಲ್ಲಿ ಉಳಿಯುತ್ತದೆ. ಈ ಸಮಯದಲ್ಲಿ ಕೇಬಲ್ ಕನೆಕ್ಷನ್ ಅನ್ನು ತೆಗೆಯುವುದು ಒಳ್ಳೆಯದು. ಅದಲ್ಲದೇ ಹೆತ್ತವರು ಕೂಡ ಜೋರಾಗಿ ಫೋನಿಯಲ್ಲಿ ಮಾತನಾಡುವುದು. ಮೊಬೈಲ್ ನೋಡುತ್ತಾ ಕುಳಿತುಕೊಳ್ಳುವುದು ಈ ಅಭ್ಯಾಸಗಳನ್ನು ನಿಮ್ಮ ಮಕ್ಕಳಿಗೋಸ್ಕರ ದೂರವಿಡಿ.

ಇದನ್ನೂ ಓದಿ: ಮಕ್ಕಳ ಮೇಲಿನ ಒತ್ತಡವೇ ಹೃದಯಾಘಾತಕ್ಕೆ ಕಾರಣವಾಗುತ್ತಿದೆಯೇ? ಹೆತ್ತವರು ಈ ಬಗ್ಗೆ ಗಮನ ಕೊಡಿ

* ಮಕ್ಕಳಿಗೆ ಹೆಚ್ಚು ಸಮಯ ನೀಡುವುದನ್ನು ಮರೆಯಬೇಡಿ : ಪರೀಕ್ಷೆ ಸಮಯ ಹತ್ತಿರ ಬರುತ್ತಿದ್ದಂತೆ ಮಕ್ಕಳ ಜೊತೆಗೆ ಹೆಚ್ಚು ಇರಿ. ಓದಲು ಕೂತರೆ ಅವರಿಗೆ ಬೇಕಾದ ಅಗತ್ಯ ಮಾಹಿತಿಯನ್ನು ಒದಗಿಸಿ. ಓದುವಾಗ ಏನಾದರೂ ಸಮಸ್ಯೆಯಾಗುತ್ತಿದ್ದರೆ ಅದನ್ನು ಕೇಳಿರಿ. ಮಕ್ಕಳಿಗೆ ನಿಮ್ಮ ಜೊತೆಗೆ ಮುಕ್ತವಾಗಿ ಮಾತನಾಡಲು ಅವಕಾಶ ಮಾಡಿಕೊಟ್ಟು, ಅವರ ಭಾವನೆಗಳಿಗೆ ಸ್ಪಂದಿಸುವುದು ಮುಖ್ಯ.

* ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಲೇಬೇಡಿ : ಪರೀಕ್ಷೆ ಸಮಯ ಹತ್ತಿರ ಬರುತ್ತಿದ್ದಂತೆ ಹೆಚ್ಚಿನವರು ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಿ ಮಾತನಾಡುವುದಿದೆ. ಇದು ಮಕ್ಕಳಿಗೆ ತಮ್ಮ ಬಗ್ಗೆ ಕೀಳರಿಮೆ ಭಾವ ಬೆಳೆಯುತ್ತದೆ. ಬೇರೆ ಮಕ್ಕಳ ಅಂಕವನ್ನು ನಿಮ್ಮ ಮಕ್ಕಳ ಮುಂದೆ ಹೇಳುವ ಅಭ್ಯಾಸವಿದ್ದರೆ ಅದನ್ನು ನಿಲ್ಲಿಸಿ. ನಿಮ್ಮ ಮಕ್ಕಳ ಸಾಮರ್ಥ್ಯದ ಬಗ್ಗೆ ನಿಮಗೆ ತಿಳಿದಿದ್ದು, ಅವರನ್ನು ಸದಾ ಪ್ರೋತ್ಸಾಹಿಸುವ ಕೆಲಸವು ಈ ಸಮಯದಲ್ಲಾಗಲಿ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

 

Published On - 6:37 pm, Fri, 16 February 24