ಇಡ್ಲಿ ನಮ್ಮಲ್ಲಿ ಅನೇಕರಿಗೆ ಪ್ರಮುಖ ಉಪಹಾರ ಆಯ್ಕೆಯಾಗಿದೆ. ಅವುಗಳನ್ನು ಸ್ವಲ್ಪ ಸಾಂಬಾರ್ ಮತ್ತು ಚಟ್ನಿಯೊಂದಿಗೆ ತಿಂದರೆ ಬಾಯಿಗೂ ರುಚಿ, ಮನಸ್ಸಿಗೂ ಆನಂದ. ಸಾಮಾನ್ಯ ವಿಧಾನದ ಇಡ್ಲಿಯನ್ನು ನೀವು ತಿಂದಿರಬಹುದು. ಆದರೆ ಯಾವತ್ತಾದರೂ ಬಾಳೆ ಎಲೆಯಲ್ಲಿ ಇಡ್ಲಿ ಮಾಡಿ ತಿಂದಿದ್ದೀರಾ? ಇಲ್ವಾ ಇಲ್ಲಿ ನಾವು ನಿಮಗೆ ತೋರಿಸುತ್ತೇವೆ ನೋಡಿ. ಮನೆ ಯಾರಾದರೂ ಬಂದ್ರೆ, ಅಥವಾ ತಕ್ಷಣಕ್ಕೆ ನಿಮಗೆ ಮಾಡಿಕೊಳ್ಳಬೇಕೆಂದರೆ ಈ ಬಾಳೆ ಎಲೆ ಇಡ್ಲಿ ಮಾಡಬಹುದು. @chieffoodieofficer ಎಂಬ Instagram ಪುಟದಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ. ಇದನ್ನು ಒಮ್ಮೆ ನೀವು ಕೂಡ ಪ್ರಯತ್ನಿಸಬಹುದು.
ಗ್ರೇವಿಯನ್ನು ತಯಾರಿಸಿ : ಬಾಣಲೆಯಲ್ಲಿ ಸ್ವಲ್ಪ ತುಪ್ಪವನ್ನು ಬಿಸಿ ಮಾಡಿ ಮತ್ತು ಕತ್ತರಿಸಿದ ಈರುಳ್ಳಿ ಕಂದು ಬಣ್ಣಕ್ಕೆ ಬರುವರೆಗೆ ಪ್ರೈ ಮಾಡಿ. ಟೊಮ್ಯಾಟೊ, ಒಂದು ಚಿಟಿಕೆ ಹಲ್ದಿ, ಪೋಡಿ ಮಸಾಲಾ, ಒಣಗಿದ ಕೊತ್ತಂಬರಿ ಸೊಪ್ಪು, ಉಪ್ಪು ಮತ್ತು ಒಂದು ಸ್ಪ್ಲಾಶ್ ನೀರನ್ನು ಸೇರಿಸಿ. ಎಲ್ಲವನ್ನೂ ಮಿಶ್ರಣ ಮಾಡಿ
ಲೇಯರ್ ಇಟ್ ಅಪ್: ಬಾಳೆ ಎಲೆಯನ್ನು ತೆಗೆದುಕೊಂಡು ಅದಕ್ಕೆ ತುಪ್ಪದಿಂದ ಸವರಿಕೊಂಡು, ಅದರ ಮಧ್ಯದಲ್ಲಿ ಈರುಳ್ಳಿ-ಟೊಮ್ಯಾಟೊ ಗ್ರೇವಿಯನ್ನು ಹಾಕಿ. ಗ್ರೇವಿಯ ಮೇಲೆ ಇಡ್ಲಿ ಹಿಟ್ಟನ್ನು ಸುರಿಯಿರಿ, ಹಿಟ್ಟಿನ ಮೇಲೆ ಮಸಾಲ ಪುಡಿಯನ್ನು ಸ್ವಲ್ಪ ಹಾಕಿಕೊಳ್ಳಿ.
ಸ್ಟೀಮ್ ಮಾಡಿ: ಒಂದು ಪ್ಯಾನ್ ಬೇಯಲು ಬಿಡಿ. ಗಟ್ಟಿಯಾಗಿ ಮುಚ್ಚಳ ಮುಚ್ಚಿ, 20ರಿಂದ 25 ನಿಮಿಷದ ವರೆಗೆ ಬೇಯಿಸಿ, ನಂತರ ಮನೆಯವರಿಗೆ ರುಚಿಯಾಗಿ ಬಡಿಸಿ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ