Personality Test : ನಿಮ್ಮ ಕೈ ಬೆರಳುಗಳ ಆಕಾರದಲ್ಲಿ ಅಡಗಿದೆ ನಿಮ್ಮೊಳಗಿನ ರಹಸ್ಯ
ಯಾರೇ ಆಗಿರಲಿ, ವ್ಯಕ್ತಿಯ ಪರಿಚಯವಾದಾಗ ಆ ವ್ಯಕ್ತಿ ಹೇಗೆ? ಆತನಲ್ಲಿ ಒಳ್ಳೆಯ ಗುಣಗಳಿವೆಯೇ ಎಂದು ತಿಳಿಯಲು ಬಯಸುತ್ತಾರೆ. ಆ ವ್ಯಕ್ತಿಯೊಂದಿಗೆ ಸ್ವಲ್ಪ ಹೊತ್ತು ಮಾತನಾಡಿದ್ರೆ ಸಾಕು, ಆತನ ವ್ಯಕ್ತಿತ್ವ ಏನೆಂದು ಅರ್ಥವಾಗುತ್ತದೆ. ಆದರೆ ಒಬ್ಬ ವ್ಯಕ್ತಿಯ ಕೈ ಬೆರಳಿನ ಉದ್ದ ಹಾಗೂ ಆಕಾರವು ವ್ಯಕ್ತಿತ್ವವನ್ನು ಬಿಚ್ಚಿಡುತ್ತದೆ. ಕೈ ಬೆರಳಿನ ಆಕಾರದ ಮೇಲೆ ವ್ಯಕ್ತಿಯ ಯಾವೆಲ್ಲಾ ಗುಣಗಳನ್ನು ಹೊಂದಿದ್ದಾನೆ ಎಂದು ನಿರ್ಣಯಿಸಬಹುದು. ಹಾಗಾದ್ರೆ ನಿಮ್ಮ ಕೈ ಬೆರಳಿನ ಉದ್ದ ಎಷ್ಟಿದೆ ಎಂದು ನಿಮ್ಮಲ್ಲಿರುವ ಗುಣಗಳನ್ನು ತಿಳಿದುಕೊಳ್ಳಿ.
ಪ್ರಪಂಚದಲ್ಲಿರುವ ವ್ಯಕ್ತಿಗಳು ನೋಡುವುದಕ್ಕೆ ಮಾತ್ರವಲ್ಲ, ಗುಣಸ್ವಭಾವದಿಂದಲೂ ಭಿನ್ನವಾಗಿಯೇ ಇರುತ್ತಾರೆ. ಆದರೆ ಒಬ್ಬರ ಸ್ವಭಾವವನ್ನು ತಿಳಿಯಬೇಕೆಂದರೆ ಅವರ ಜೊತೆಗೆ ಸ್ವಲ್ಪ ಸಮಯವಾದರೂ ಕಳೆಯಬೇಕು. ನೋಡಿದ ಕೂಡಲೇ ಆ ವ್ಯಕ್ತಿಯೂ ಹೀಗೆ ಎಂದು ನಿರ್ಣಯಿಸಲು ಸಾಧ್ಯವಿಲ್ಲ. ಆದರೆ ಕೈ ಬೆರಳಿನ ಆಕಾರದಿಂದಲೇ ವ್ಯಕ್ತಿತ್ವ ಹೇಗಿರುತ್ತದೆ ಎಂದು ತಿಳಿದುಕೊಳ್ಳಬಹುದು. ಆದರೆ ಈ ವಿಷಯವನ್ನು ನಂಬಲು ಅಸಾಧ್ಯವಾಗಿದ್ದರೂ ಸತ್ಯವಾಗಿದ್ದು ಕೈ ಬೆರಳಿನ ಆಕಾರವು ಕೂಡ ವ್ಯಕ್ತಿತ್ವವನ್ನು ಬಿಚ್ಚಿಡುತ್ತದೆ ಎನ್ನಲಾಗಿದೆ.
- ನೇರ ಬೆರಳುಗಳನ್ನು ಹೊಂದಿರುವ ವ್ಯಕ್ತಿಗಳು : ಕೈ ಬೆರಳುಗಳು ನೇರವಾಗಿದ್ದರೆ ಆ ವ್ಯಕ್ತಿಗಳು ಪ್ರಾಮಾಣಿಕರಾಗಿರುತ್ತಾರೆ. ಸತ್ಯವನ್ನು ಹೇಳುವ ಗುಣವನ್ನು ಹೊಂದಿದ್ದು, ಎಲ್ಲರ ನಂಬಿಕೆಗೆ ಅರ್ಹರಾಗಿರುತ್ತಾರೆ. ಯಾರಿಗೂ ಮೋಸ ಮಾಡದ ಹಾಗೂ ಸುಳ್ಳು ಹೇಳದ ವ್ಯಕ್ತಿತ್ವವು ಇವರಾದ್ದಾಗಿರುತ್ತದೆ. ಇದ್ದ ವಿಷಯಗಳನ್ನು ನೇರವಾಗಿ ಹೇಳುವ ಸ್ವಭಾವವು ಇವರದ್ದು. ಸ್ವತಂತ್ರ ವ್ಯಕ್ತಿಯಾಗಿ ಬದುಕಲು ಇಷ್ಟ ಪಡುತ್ತಾರೆ. ಸ್ನೇಹ ಸಂಬಂಧವನ್ನು ಬೆಳೆಸುವಾಗ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ.
- ಚಿಕ್ಕ ಬೆರಳುಗಳನ್ನು ಹೊಂದಿರುವ ವ್ಯಕ್ತಿಗಳು : ನೇರ ಹಾಗೂ ಪ್ರಾಯೋಗಿಕ ಗುಣಗಳನ್ನು ಹೊಂದಿರುವ ವ್ಯಕ್ತಿಗಳು ಇವರಾಗಿರುತ್ತಾರೆ. ಸಮಯ ನಿರ್ವಹಣೆ ಮತ್ತು ವಿಷಯಗಳನ್ನು ಸಂಘಟಿಸುವಲ್ಲಿ ಇವರಿಗಿಂತ ನಿಪುಣರು ಯಾರು ಇಲ್ಲ. ಇವರು ಯಾವುದೇ ವಿಷಯಗಳ ಬಗ್ಗೆ ಹೆಚ್ಚು ವಿಶ್ಲೇಷಿಸುವ ಗುಣವನ್ನು ಹೊಂದಿರುತ್ತಾರೆ.
- ಮೊನಚಾದ ಬೆರಳುಗಳನ್ನು ಹೊಂದಿರುವ ವ್ಯಕ್ತಿಗಳು : ಈ ವ್ಯಕ್ತಿಗಳು ಹೆಚ್ಚು ಕನಸು ಕಾಣುತ್ತಾರೆ. ಹೀಗಾಗಿ ವಾಸ್ತವಕ್ಕಿಂತ ದೂರವಿರುವ ಸ್ವಭಾವ ಇವರದ್ದು. ಭಾವನಾತ್ಮಕ ಜೀವಿಗಳಾಗಿದ್ದರೂ ಕನಸುಗಳು ಹಾಗೂ ಗುರಿಗಳನ್ನು ತಲುಪಲು ಶ್ರಮಿಸುವ ವ್ಯಕ್ತಿಗಳು ಇವರು. ಹೀಗಾಗಿ ಇವರಲ್ಲಿ ನಾಯಕತ್ವ ಗುಣವು ಹೆಚ್ಚಿರುತ್ತದೆ.
- ಅಡ್ಡಾತಿಡ್ಡಿ ಬೆರಳುಗಳನ್ನು ಹೊಂದಿರುವ ವ್ಯಕ್ತಿಗಳು : ಈ ವ್ಯಕ್ತಿಗಳು ಮುಕ್ತ ಮನಸ್ಸಿನವರಾಗಿರುತ್ತಾರೆ. ಶಾಂತ ಸ್ವಭಾವವಿರುವ ಕಾರಣ ಕೋಪಿಸಿ ಕೊಳ್ಳುವುದು ಕಡಿಮೆ ಎನ್ನಬಹುದು. ಹೆಚ್ಚು ಜನರಿರುವ ಸ್ಥಳಗಳಲ್ಲಿ ಇರಲು ಇಷ್ಟ ಪಡುವುದಿಲ್ಲ. ಆದರೆ ತಮ್ಮ ಮಾತಿನಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ.
- ತೋರುಬೆರಳು ಮತ್ತು ಉಂಗುರ ಬೆರಳು ಒಂದೇ ಉದ್ದವಿದ್ದರೆ: ಈ ಎರಡು ಬೆರಳುಗಳು ಒಂದೇ ಉದ್ದವಿದ್ದರೆ ಇವರು ಸಮತೋಲನ ಜೀವನವನ್ನು ನಡೆಸುತ್ತಾರೆ. ಕಾಳಜಿ, ನಿಷ್ಠಾವಂತ, ಸೌಮ್ಯ ವ್ಯಕ್ತಿಗಳಾಗಿದ್ದು ಉತ್ತಮ ಕೇಳುಗರಾಗಿರುತ್ತಾರೆ. ಇತರರ ಸಮಸ್ಯೆಗಳನ್ನು ಆಲಿಸಿ ಸಹಾಯ ಮಾಡುವುದರಲ್ಲಿ ಎತ್ತಿದ ಕೈ ಎನ್ನಬಹುದು. ಹೀಗಾಗಿಯೇ ಹೆಚ್ಚು ಜನರ ಸ್ನೇಹವನ್ನು ಸಂಪಾದಿಸಿಕೊಳ್ಳುತ್ತಾರೆ.
- ತೋರುಬೆರಳು ಉಂಗುರದ ಬೆರಳಿಗಿಂತ ಉದ್ದವಿದ್ದರೆ : ಈ ರೀತಿ ಬೆರಳಿನ ಆಕಾರವನ್ನು ಹೊಂದಿರುವ ವ್ಯಕ್ತಿಗಳು ಅತೀ ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಇತರರಿಗೆ ಸಲಹೆ ನೀಡುವುದರಲ್ಲಿ ಇವರು ನಿಪುಣರು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲು ನೂರು ಬಾರಿ ಯೋಚಿಸುತ್ತಾರೆ. ಮಾಡುವ ಕೆಲಸಗಳ ಮೇಲೆ ಹೆಚ್ಚು ಜಾಗರೂಕರಾಗಿರುತ್ತಾರೆ.
- ಉಂಗುರ ಬೆರಳು ತೋರು ಬೆರಳಿಗಿಂತ ಉದ್ದವಿದ್ದರೆ : ಈ ವ್ಯಕ್ತಿಗಳಲ್ಲಿ ಹೆಚ್ಚಿನ ಮಟ್ಟದ ಆತ್ಮವಿಶ್ವಾಸವನ್ನು ಕಾಣಬಹುದು. ಇವರಲ್ಲಿ ಸಹಾನುಭೂತಿ ಗುಣವಿದ್ದು, ಜೀವನದ ಪ್ರತಿಯೊಂದು ವಿಷಯದ ಬಗ್ಗೆಯೂ ಹೆಚ್ಚು ಲೆಕ್ಕಾಚಾರ ಮಾಡುತ್ತಾರೆ. ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುವ ಕಾರಣ ಜನರು ಇವರೆಡೆಗೆ ಆಕರ್ಷಿತರಾಗುವುದೇ ಹೆಚ್ಚು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ