ಗಡ್ಡ ಹಾಗೂ ಮೀಸೆ ಬೆಳೆಸೋದು ಟ್ರೆಂಡ್ ಆಗಿದೆ. ಫ್ಯಾಷನ್ ಲೋಕದಲ್ಲಿ ಟ್ರೆಂಡ್ ಆಗಿರುವ ಈ ಗಡ್ಡದ ಮೇಲೆ ಫ್ರೆಂಚ್ ಸ್ಟೈಲ್, ಚಿನ್‌ಸ್ಟ್ರಿಪ್, ಗೌಟಿ, ಫುಲ್ ಬಿಯರ್ಡ್, ಸೊಲ್‌ಪ್ಯಾಚ್, ಬಲ್ಬೂ ಹೀಗೆ ನಾನಾ ರೀತಿಯ ಸ್ಟೈಲ್ ಗಳ ಪ್ರಯೋಗ ನಡೆಯುತ್ತಲೇ ಇದೆ. ಗಡ್ಡ ಹಾಗೂ ಮೀಸೆಯಿದ್ದರೆ ಗಂಡು ಮಕ್ಕಳು ನೋಡುವುದಕ್ಕೆ ಚಂದ. ಈಗಾಗಲೇ ಮಾರುಕಟ್ಟೆಯಲ್ಲಿ ಗಡ್ಡದ ಆರೈಕೆಗಾಗಿ ನಾನಾ ರೀತಿಯ ಉತ್ಪನ್ನಗಳು ಲಭ್ಯವಿದೆ. ಆದರೆ ಮನೆಯಲ್ಲಿಯೇ ಆಹಾರದಲ್ಲಿ ಸಣ್ಣ ಪುಟ್ಟ ಬದಲಾವಣೆಯನ್ನು ಮಾಡಿಕೊಂಡು, ಈ ಮನೆ ಮದ್ದನ್ನು ಟ್ರೈ ಮಾಡಿದರೆ ನಿಮ್ಮ ಗಡ್ಡವು ಸೊಂಪಾಗಿ ಬೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.
- ಮುಖದ ಮೇಲೆ ವಿಶೇಷವಾಗಿ ಗಲ್ಲದ ಮೇಲೆ ಆಲಿವ್ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡುವುದರಿಂದ ಕೂದಲಿನ ಬೆಳವಣಿಗೆಯು ವೇಗವಾಗಿ ಆಗುತ್ತದೆ.
- ಒಂದು ಚಮಚ ಈರುಳ್ಳಿ ರಸಕ್ಕೆ ಒಂದು ಚಮಚ ತೆಂಗಿನ ಎಣ್ಣೆ, ಒಂದು ಚಮಚ ಹರಳೆಣ್ಣೆ ಹಾಗೂ ಅರ್ಧ ಚಮಚ ನಿಂಬೆ ರಸವನ್ನು ಹಿಂಡಿ, ವಾರಕ್ಕೆ ಮೂರು ಬಾರಿ ಹಚ್ಚಿದರೆ ಗಡ್ಡವು ಉದ್ದವಾಗಿ ಬೆಳೆಯುತ್ತದೆ.
- ದಾಲ್ಚಿನ್ನಿಯನ್ನು ನುಣ್ಣಗೆ ರುಬ್ಬಿಕೊಂಡು, ಅದಕ್ಕೆ ಸ್ವಲ್ಪ ಪ್ರಮಾಣದಲ್ಲಿ ಆಲಿವ್ ಎಣ್ಣೆ ಮತ್ತು ನಿಂಬೆ ರಸವನ್ನು ಬೆರೆಸಿ ಮೀಸೆ ಹಾಗೂ ಗಡ್ಡದ ಮೇಲೆ ಒಂದು ವಾರಗಳ ಕಾಲ ಹಚ್ಚುತ್ತ ಬಂದರೆ ಚೆನ್ನಾಗಿ ಬೆಳೆಯುತ್ತದೆ.
- ರಾತ್ರಿ ಮಲಗುವ ಮುನ್ನ ಗಡ್ಡ ಹಾಗೂ ಮೀಸೆಗೆ ತೆಂಗಿನೆಣ್ಣೆಯನ್ನು ಹಚ್ಚಿ ಮಸಾಜ್ ಮಾಡುತ್ತಾ ಬಂದರೆ ಉದ್ದವಾದ ಗಡ್ಡವನ್ನು ನಿಮ್ಮದಾಗಿಸಿಕೊಳ್ಳಬಹುದು.
- ನೀಲಗಿರಿಯು ಗಡ್ಡವನ್ನು ಬೆಳೆಯಲು ಸಹಕಾರಿಯಾಗಿದ್ದು, ನೀಲಗಿರಿ ತೈಲವಿರುವ ಮಾಯಿಶ್ಚರೈಸರ್ ಅನ್ನು ಬಳಸುತ್ತ ಬಂದರೆ ಮುಖದ ಮೇಲಿನ ಗಡ್ಡವು ಶೀಘ್ರವಾಗಿ ಬೆಳೆಯುತ್ತದೆ.
- ಸಮೃದ್ಧವಾದ ಗಡ್ಡವನ್ನು ಹೊಂದಲು ವಿಟಮಿನ್ ಬಿ5, ಬಿ3 ಮತ್ತು ಬಿ9 ಅಂಶವಿರುವ ಮಾಂಸ, ಒಣ ಬೀಜಗಳು, ಮೊಟ್ಟೆಯ ಹಳದಿ, ಹಾಲು, ಹಸಿರು ಎಲೆ, ಸೊಪ್ಪು ತರಕಾರಿಗಳನ್ನು ಸೇವಿಸುತ್ತಿರಬೇಕು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: