Red Wine : ವೈನ್ ಆರೋಗ್ಯಕ್ಕೆ ಹೇಗೆ ಒಳ್ಳೆಯದು, ಯಾವೆಲ್ಲಾ ವೈನ್ ದೇಹಕ್ಕೆ ಉತ್ತಮ?
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ, ಆದ್ರೆ ಹಾಗಂತ ವೈನ್ ಆರೋಗ್ಯಕ್ಕೆ ಖಂಡಿತ ಹಾನಿಕಾರಕವಲ್ಲ. ಈ ವೈನನ್ನು ಪುರುಷರಷ್ಟೇ ಅಲ್ಲ, ಮಹಿಳೆಯರು ಕೂಡ ಸೇವಿಸುತ್ತಾರೆ. ಹೌದು, ಈ ವೈನ್ ಹಳೆದಾದಷ್ಟು ದುಬಾರಿ ಹಾಗೂ ಬೇಡಿಕೆ ಹೆಚ್ಚು. ವೈನ್ ಕುಡಿಯುವುದರಿಂದ ಆರೋಗ್ಯ ಪ್ರಯೋಜನಗಳು ಹಲವರಂತೆ. ಹಾಗಾದ್ರೆ ಯಾವೆಲ್ಲಾ ವೈನ್ ಆರೋಗ್ಯಕ್ಕೆ ಉತ್ತಮ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಮದ್ಯ ಪ್ರಿಯರಿಗಾಗಿಯೇ ಮಾರುಕಟ್ಟೆಯಲ್ಲಿ ಬ್ರಾಂಡಿ, ವಿಸ್ಕಿ, ಸ್ಕಾಚ್, ವೋಡ್ಕಾ, ರಮ್, ಬಿಯರ್, ವೈನ್ ಗಳಲ್ಲಿ ಹೀಗೆ ನಾನಾ ರೀತಿಯ ಆಲ್ಕೋಹಾಲ್ ಯುಕ್ತ ಅಂಶಗಳು ಕಡಿಮೆಯಿರುವ ಪಾನೀಯಗಳು ಲಭ್ಯವಿದೆ. ಆದರೆ ಪುರುಷರು ಮಾತ್ರವಲ್ಲದೇ ಮಹಿಳೆಯರು ಇಷ್ಟ ಪಟ್ಟು ಸೇವಿಸುವ ಆಲೋಯುಕ್ತ ಪಾನೀಯವೆಂದರೆ ಅದುವೇ ಈ ವೈನ್. ಅದರಲ್ಲಿಯೂ ಈ ಕೆಂಪು ವೈನ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನಲಾಗಿದೆ. ನಿಯಮಿತವಾಗಿ ಸೇವಿಸುತ್ತ ಬಂದರೆ ಆರೋಗ್ಯದಲ್ಲಿ ನಾನಾ ರೀತಿಯ ಬದಲಾವಣೆಗಳನ್ನು ಕಾಣಬಹುದು.
- ಕೆಂಪು ವೈನ್ ನಲ್ಲಿ ಪಾಲಿಫಿನಲ್ ಮತ್ತು ಟಾನಿಕ್ ಆಮ್ಲ ಮಧುಮೇಹ ವಿರೋಧಿ ಗುಣಲಕ್ಷಣಗಳು ಅಧಿಕವಾಗಿದೆ. ಹೀಗಾಗಿ ನಿಯಮಿತವಾಗಿ ಕೆಂಪು ವೈನ್ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.
- ಕೆಂಪು ವೈನ್ ನಿಯಮಿತ ಸೇವನೆಯು ದೇಹದಲ್ಲಿ ಲೈಂಗಿಕ ಹಾರ್ಮೋನ್ ಪ್ರಮಾಣವನ್ನು ಹೆಚ್ಚಿಸಿ ಲೈಂಗಿಕ ಆಸಕ್ತಿ ಹೆಚ್ಚಾಗುವಂತೆ ಮಾಡುತ್ತದೆ.
- ಮಿತವಾಗಿ ಕೆಂಪು ವೈನ್ ಕುಡಿಯುವುದರಿಂದ ಕ್ಯಾನ್ಸರ್ ಜೀವಕೋಶಗಳನ್ನು ಇದು ನಾಶಪಡಿಸುತ್ತದೆ. ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳು ಅಭಿವೃದ್ಧಿಯಾಗದಂತೆ ನೋಡಿಕೊಳ್ಳುತ್ತದೆ.
- ಮಿತವಾಗಿ ಕೆಂಪು ವೈನ್ ಕುಡಿಯುವುದರಿಂದ ಹೃದಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳು ಬರುವುದಿಲ್ಲ. ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸಿ, ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಿಸುತ್ತದೆ.
- ಮೂಳೆಗಳನ್ನು ಬಲಪಡಿಸುತ್ತದೆ. ಲಿವರ್ ಆರೋಗ್ಯ ವನ್ನು ಕಾಪಾಡುತ್ತದೆ, ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಕಾರಿಯಾಗಿದೆ.
- ನಿದ್ರೆಯ ಮಟ್ಟವನ್ನು ಹೆಚ್ಚಿಸುವುದರೊಂದಿಗೆ ಬುದ್ಧಿ ಶಕ್ತಿಯನ್ನು ಚುರುಕಾಗಿಸಲು ಸಹಾಯ ಮಾಡುತ್ತದೆ.
- ಕೆಂಪು ವೈನ್ ನಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಹೆಚ್ಚಾಗಿದ್ದು, ದೇಹದಲ್ಲಿನ ಶಕ್ತಿಯನ್ನು ಹೆಚ್ಚಿಸುತ್ತದೆ. ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ತಡೆಯಲು ಸಹಕಾರಿಯಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: