Beauty Hacks: ದೈನಂದಿನ ಜೀವನದಲ್ಲಿ ನೀವು ಅನುಸರಿಸಬೇಕಾದ ಬ್ಯೂಟಿ ಹ್ಯಾಕ್‌ಗಳು ಇಲ್ಲಿವೆ

|

Updated on: Feb 24, 2023 | 4:39 PM

ವಿಶೇಷ ಕಾರ್ಯಕ್ರಮಗಳ ಹೊರತಾಗಿಯೂ ಪ್ರತೀ ದಿನ ಸಾಕಷ್ಟು ಅಂದರೆ ಒಂದರ ಮೇಲೋಂದು ಕ್ರಿಮ್​​ಗಳನ್ನು ಬಳಸುವ ಅಭ್ಯಾಸ ನಿಮಗಿದ್ದರೆ, ಆದಷ್ಟು ಬಿಟ್ಟು ಬಿಡಿ. ನೀವು ಪ್ರತಿ ದಿನ ಅತಿಯಾದ ಕ್ರೀಮ್​​ಗಳನ್ನು ಬಳಸುವುದರಿಂದ ಅದರಲ್ಲಿರುವ ಕೆಮಿಕಲ್​​ ಮುಖಕ್ಕೆ ಹಾನಿಯುಂಟು ಮಾಡಬಹುದು.

Beauty Hacks: ದೈನಂದಿನ ಜೀವನದಲ್ಲಿ ನೀವು ಅನುಸರಿಸಬೇಕಾದ ಬ್ಯೂಟಿ ಹ್ಯಾಕ್‌ಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
Image Credit source: iStock
Follow us on

ಪ್ರತಿಯೊಬ್ಬರೂ ತಮ್ಮ ತ್ವಚೆಯ ಬಗ್ಗೆ ಅತಿಯಾದ ಕಾಳಜಿಯನ್ನು ಹೊಂದಿರುತ್ತಾರೆ. ಮುಖದಲ್ಲಿ ಚಿಕ್ಕದೊಂದು ಮೊಡವೆ ಉಂಟಾದರೂ ಕೂಡ ಅದು ಸಾಕಷ್ಟು ಮುಜುಗರಕ್ಕೀಡು ಮಾಡುತ್ತದೆ. ಇಂದಿನ ಒತ್ತಡದ ಹಾಗೂ ಬದಲಾದ ಆಹಾರ ಕ್ರಮದಿಂದಾಗಿ ಚರ್ಮದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ.  ಆದ್ದರಿಂದ ನಿಮ್ಮ ತ್ವಚೆಯನ್ನು ಅತ್ಯಂತ ಆರೋಗ್ಯಕರ, ಕಾಂತಿಯುತವಾಗಿ ಹಾಗೂ ಯಾವುದೇ ಅಲರ್ಜಿ ಉಂಟಾಗದಂತೆ ಕಾಪಾಡಲು ಈ ಟಿಪ್ಸ್​​​​ ಪ್ರತಿದಿನ ಫಾಲೋ ಮಾಡಿ.

ಸ್ನಾನದ ನಂತರ ಮಾಯಿಶ್ಚರೈಸರ್ ಹಚ್ಚಿ:

ನೀವು ಸ್ನಾನ ಮಾಡಿ ಬಂದ ಕೂಡಲೇ ಚರ್ಮವು ಒದ್ದೆಯಾಗಿರುವುದರಿಂದ ಆ ಸಮಯದಲ್ಲಿ ಮಾಯಿಶ್ಚರೈಸರ್ ಹಚ್ಚುವುದು ತುಂಬಾ ಅಗತ್ಯವಾಗಿದೆ. ಯಾಕೆಂದರೆ ನಿಮ್ಮ ಚರ್ಮವು ಮಾಯಿಶ್ಚರೈಸರ್​​​ನಲ್ಲಿರುವ ಅದರ ಒಳ್ಳೆಯತನವನ್ನು ಸಂಪೂರ್ಣವಾಗಿ ಹೀರಿಕೊಳ್ಳಲು ಮತ್ತು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.

ಎಕ್ಸ್‌ಫೋಲಿಯಂಟ್‌ ಅತಿಯಾಗಿ ಬಳಸಬೇಡಿ:

ಕೆಮಿಕಲ್ ಎಕ್ಸ್‌ಫೋಲಿಯಂಟ್‌ಗಳು ವಾಸನೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿದಿನದ ಸ್ನಾನದ ನಂತರ ಅಂಡರ್ ಆರ್ಮ್ಸ್ ಗಳಿಗೆ ಎಕ್ಸ್‌ಫೋಲಿಯಂಟ್‌ ಬಳಸಿ. ಚಿಕ್ಕ ಹತ್ತಿ ಉಂಡೆಯನ್ನು ತೆಗೆದುಕೊಂಡು ಒಂದರಿಂದ ಎರಡು ಹನಿಗಳಷ್ಟು ಮಾತ್ರ ಬಳಸಿ. ಯಾಕೆಂದರೆ ಇದು ಸೂಕ್ಷ್ಮ ಪ್ರದೇಶವಾಗಿದೆ.

ಕಣ್ಣುಗಳಿಗೆ ಬಳಸಲಾಗುವ ಸೌಂದರ್ಯ ವರ್ಧಕಗಳ ಬಗ್ಗೆ ಎಚ್ಚರವಿರಲಿ:

ವಿಶೇಷವಾಗಿ ಕಣ್ಣುಗಳ ಕೆಳಭಾಗಕ್ಕೆ ಬಳಸಲಾಗುವ ಕ್ರೀಮ್​​ ಅಥವಾ ಯಾವುದೇ ಸೌಂದರ್ಯ ವರ್ಧಕಗಳನ್ನು ಕಣ್ಣಿನ ಕೆಳಭಾಗದಿಂದ ಸ್ವಲ್ಪ ದೂರಕ್ಕೆ ಹಚ್ಚಿ. ಯಾಕೆಂದರೆ ಇದು ನಿಮ್ಮ ಕಣ್ಣಿನ ಗುಡ್ಡೆಗಳಿಗೆ ಹಾನಿಯುಂಟು ಮಾಡುವ ಸಾಧ್ಯತೆ ಹೆಚ್ಚಿದೆ.

ಇದನ್ನು ಓದಿ: ಅತಿಯಾಗಿ ವಾಯು ಮಾಲಿನ್ಯಕ್ಕೆ ಒಗ್ಗಿಕೊಳ್ಳುವುದು ಮೂಳೆ ಹಾನಿಗೆ ಕಾರಣವಾಗಬಹುದು

ಸಾಕಷ್ಟು ಲೇಯರ್​​​​ಗಳನ್ನು ಮುಖದ ಮೇಲೆ ಹಾಕುವುದನ್ನು ತಪ್ಪಿಸಿ:

ವಿಶೇಷ ಕಾರ್ಯಕ್ರಮಗಳ ಹೊರತಾಗಿಯೂ ಪ್ರತೀ ದಿನ ಸಾಕಷ್ಟು ಅಂದರೆ ಒಂದರ ಮೇಲೋಂದು ಕ್ರಿಮ್​​ಗಳನ್ನು ಬಳಸುವ ಅಭ್ಯಾಸ ನಿಮಗಿದ್ದರೆ, ಆದಷ್ಟು ಬಿಟ್ಟು ಬಿಡಿ. ನೀವು ಪ್ರತಿ ದಿನ ಅತಿಯಾದ ಕ್ರೀಮ್​​ಗಳನ್ನು ಬಳಸುವುದರಿಂದ ಅದರಲ್ಲಿರುವ ಕೆಮಿಕಲ್​​ ಮುಖಕ್ಕೆ ಹಾನಿಯುಂಟು ಮಾಡಬಹುದು.

ನೆತ್ತಿಯ ಭಾಗಕ್ಕೆ ತೇವಾಂಶ ಅಗತ್ಯ:

ನೀವು ಸ್ನಾನ ಮಾಡುವಂತಹ ಸಮಯದಲ್ಲಿ ನೆತ್ತಿಯ ಮೇಲೆ ಶಾಂಪು ಹಚ್ಚಿದ ಬಳಿಕ ತಕ್ಷಣ ತೊಳೆದು ಬಿಡಬೇಡಿ. ನೀವು ತಲೆ ತೊಳೆಯುವ ಮೊದಲು ಕೆಲವು ನಿಮಿಷಗಳ ಕಾಲ ಶಾಂಪು ನೆತ್ತಿಯ ಮೇಲೆ ಹಾಗೆಯೇ ಬಿಡಿ. ಇದರಿಂದ ನೀವು ವ್ಯಾತ್ಯಾಸಗಳನ್ನು ಕಾಣಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 4:23 pm, Fri, 24 February 23