ಪುದೀನಾ ಬಳಸಿ ಮೊಸರು ಬಜ್ಜಿ ತಯಾರಿಸಿ, ರೆಸಿಪಿ ಇಲ್ಲಿದೆ

ಈ ಉರಿ ಬಿಸಿಲಿನಲ್ಲಿ ನಿಮ್ಮ ದೇಹವನ್ನು ತಂಪಾಗಿಡಲು ಈ ಪುದೀನಾ ಬಳಸಿ ಮೊಸರು ಬಜ್ಜಿ ತಯಾರಿಸಿ. ಇದು ದೇಹವನ್ನು ತಂಪಾಗಿಡುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.

ಪುದೀನಾ ಬಳಸಿ ಮೊಸರು ಬಜ್ಜಿ ತಯಾರಿಸಿ, ರೆಸಿಪಿ ಇಲ್ಲಿದೆ
ಪುದೀನಾ ಮೊಸರು ಬಜ್ಜಿ
Follow us
| Updated By: ಅಕ್ಷತಾ ವರ್ಕಾಡಿ

Updated on: Feb 25, 2023 | 7:30 AM

ಈ ಉರಿ ಬಿಸಿಲಿನಲ್ಲಿ ನಿಮ್ಮ ದೇಹವನ್ನು ತಂಪಾಗಿಡುವುದು ಈ ಪುದೀನಾ ಬಳಸಿ ಮೊಸರು ಬಜ್ಜಿ ತಯಾರಿಸಿ. ಇದು ದೇಹವನ್ನು ತಂಪಾಗಿಡುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಇದಲ್ಲದೇ ಮಧ್ಯಾಹ್ನದ ಊಟಕ್ಕೆ ನೀವು ಅತ್ಯಂತ ಸುಲಭವಾಗಿ ಹಾಗೂ ತ್ವರಿತವಾದ ಆಹಾರವನ್ನು ಹುಡುಕುತ್ತಿದ್ದರೆ ಕೇವಲ ಕೆಲವೇ ವಸ್ತುಗಳನ್ನು ಉಪಯೋಗಿಸಿ ನೀವು ಮೊಸರು ಬಜ್ಜಿ ತಯಾರಿಸಬಹುದು. ಇದರಲ್ಲಿ ಮೊಸರು, ಪುದೀನಾ ಹಾಗೂ ಕೆಲವು ಹಸಿ ತರಕಾರಿಗಳನ್ನು ಬಳಸುವುದರಿಂದ ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ.

ಪುದೀನಾ ಮೊಸರು ಬಜ್ಜಿ ಮಾಡುವುದು ಹೇಗೆ?

ಬೇಕಾಗುವ ಪದಾರ್ಥಗಳು:

  • 2 ಕಪ್ ಮೊಸರು
  • 3 ಹಸಿ ಮೆಣಸಿನಕಾಯಿ
  • 1/2 ಕಪ್ ತುರಿದ ಸೌತೆಕಾಯಿ
  • ಅಗತ್ಯವಿರುವಂತೆ ಕೆಂಪು ಮೆಣಸಿನ ಪುಡಿ
  • 1 ಟೀಚಮಚ ಜೀರಿಗೆ ಪುಡಿ
  • 3/4 ಕಪ್ ಪುದೀನ ಸೊಪ್ಪು
  • 1/4 ಕಪ್ ಈರುಳ್ಳಿ
  • ರುಚಿಕೆ ತಕ್ಕಷ್ಟು ಉಪ್ಪು
  • 1/4 ಟೀಸ್ಪೂನ್ ಸಕ್ಕರೆ

ಇದನ್ನೂ ಓದಿ: ಹುಳಿ ಮತ್ತು ಖಾರವನ್ನು ಸಿಹಿಮಾಡುವ ಶಕ್ತಿ ಈ ಹಣ್ಣಿಗಿದೆ, ಯಾವುದು ಈ ಹಣ್ಣು?

ಪುದೀನಾ ಮೊಸರು ಬಜ್ಜಿ ಮಾಡುವ ವಿಧಾನ:

ಹಂತ 1:

ಪುದೀನಾ ಸೊಪ್ಪನ್ನು ಚೆನ್ನಾಗಿ ತೊಳೆದು ಸ್ವಲ್ಪ ಹೊತ್ತು ಹಾಗೆಯೇ ಇಡಿ. ಈ ಹೊತ್ತಿಗೆ ಸೌತೆಕಾಯಿ ಮತ್ತು ಈರುಳ್ಳಿ ತೆಗೆದುಕೊಂಡು ಅದನ್ನು ಚಿಕ್ಕದಾಗಿ ಕತ್ತರಿಸಿ.

ಹಂತ 2:

ಬ್ಲೆಂಡರ್ ತೆಗೆದುಕೊಂಡು ಅದಕ್ಕೆ ಈಗಾಗಲೇ ತೊಳೆದಿಟ್ಟ ಪುದೀನಾ ಸೊಪ್ಪನ್ನು ಹಾಕಿ. ಇದರೊಂದಿಗೆ ಹಸಿ ಮೆಣಸಿನಕಾಯಿ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಈಗ ಇದನ್ನು ಒಂದು ಚಿಕ್ಕ ಪಾತ್ರೆಗೆ ಹಾಕಿ ಮತ್ತು ಇದಕ್ಕೆ ಕತ್ತರಿಸಿದ ಈರುಳ್ಳಿ ಮತ್ತು ತುರಿದ ಸೌತೆಕಾಯಿಯನ್ನು ಸೇರಿಸಿ.

ಹಂತ 3:

ಕೊನೆಯದಾಗಿ, ಸ್ವಲ್ಪ ಜೀರಿಗೆ ಪುಡಿ, ಉಪ್ಪು ಮತ್ತು ಮೆಣಸಿನ ಪುಡಿಯನ್ನು ಸಿಂಪಡಿಸಿ. ನಂತರ ಪುದೀನ ಎಲೆಗಳಿಂದ ಅಲಂಕರಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ