ಗರಿ ಗರಿ ದೋಸೆ ಸಿಗುವ ಬೆಂಗಳೂರಿನ ಟಾಪ್‌ 10 ಹೋಟೆಲ್‌ಗಳಿವು

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 19, 2024 | 2:33 PM

ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ರೆಡ್ಡಿಟ್‌ನಲ್ಲಿ ಬಳಕೆದಾರರು ಹಲವಾರು ಕುತೂಹಲಕಾರಿ ವಿಷಯಗಳ ಬಗ್ಗೆ ಚರ್ಚೆಗಳನ್ನು ನಡೆಸುತ್ತಿರುತ್ತಾರೆ. ಇದೀಗ ಇಲ್ಲೊಬ್ಬ ರೆಡ್ಡಿಟ್‌ ಬಳಕೆದಾರ ನಮ್ಮ ಬೆಂಗಳೂರಿನಲ್ಲಿ ಯಾವ್ಯಾವ ಹೋಟೇಲ್‌ಗಳಲ್ಲಿ ಗರಿ ಗರಿಯಾದ ದಿ ಬೆಸ್ಟ್‌ ದೋಸೆ ಸಿಗುತ್ತದೆ ಎಂಬ ರ್‍ಯಾಂಕ್‌ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಈ ಟಾಪ್‌ 10 ಲಿಸ್ಟ್‌ನಲ್ಲಿ ಯಾವ್ಯಾವ ಹೋಟೆಲ್‌ಗಳು ಸ್ಥಾನವನ್ನು ಪಡೆದುಕೊಂಡಿದೆ ಎಂಬುದನ್ನು ನೋಡೋಣ.

ಗರಿ ಗರಿ ದೋಸೆ ಸಿಗುವ ಬೆಂಗಳೂರಿನ ಟಾಪ್‌ 10 ಹೋಟೆಲ್‌ಗಳಿವು
ಸಾಂದರ್ಭಿಕ ಚಿತ್ರ
Follow us on

ದೋಸೆ ಎಂದ್ರೆ ಯಾರಿಗೆ ಇಷ್ಟ ಇರಲ್ಲ ಹೇಳಿ. ದಕ್ಷಿಣ ಭಾರತದ ಪ್ರಮುಖ ಉಪಹಾರಗಳಲ್ಲಿ ಒಂದಾದ ದೋಸೆಯನ್ನು ಬಹುತೇಕ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಅದರಲ್ಲೂ ಹೋಟೆಲ್‌ಗಳಲ್ಲಿ ಸಿಗುವ ಗರಿಗರಿಯಾದ ದೋಸೆಯನ್ನು ಕಾಯಿ ಚಟ್ನಿ ಮತ್ತು ಸಾಂಬರ್‌ ಜೊತೆ ಸವಿಯುವ ಮಜಾನೇ ಬೇರೆ. ಹೆಚ್ಚಿನವರು ದೋಸೆ ತಿನ್ನಲೆಂದೇ ತಮ್ಮಿಷ್ಟದ ಹೋಟೆಲ್‌ಗೆ ಹೋಗುವವರಿದ್ದಾರೆ. ಅದರಲ್ಲೂ ನಮ್ಮ ಬೆಂಗಳೂರಿನಲ್ಲಿ ಹಲವಾರು ದೋಸೆ ಸ್ಪಾಟ್‌ಗಳಿಗೆ. ಇವುಗಳಲ್ಲಿ ದಿ ಬೆಸ್ಟ್‌ ದೋಸೆ ಸಿಗುವ ಹೋಟೆಲ್‌ಗಳು ಯಾವುವು ಎಂಬುದನ್ನು ರೆಡ್ಡಿಟ್‌ ಬಳಕೆದಾರರೊಬ್ಬರು ಪಟ್ಟಿ ಮಾಡಿದ್ದು, ಈ ರ್‍ಯಾಂಕ್‌ ಪಟ್ಟಿಯನ್ನು ರೆಡ್ಡಿಟ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಟಾಪ್‌ 10 ಲಿಸ್ಟ್‌ನಲ್ಲಿ ಯಾವ್ಯಾವ ಹೋಟೆಲ್‌ಗಳು ಸ್ಥಾನವನ್ನು ಪಡೆದುಕೊಂಡಿದೆ ಎಂಬುದನ್ನು ನೋಡೋಣ.

Lambu_Atta ಹೆಸರಿನ ರೆಡ್ಡಿಟ್‌ ಖಾತೆಯಲ್ಲಿ ಬೆಂಗಳೂರಿನಲ್ಲಿ ದೋಸೆ ಸವಿಯಲು ಅತ್ಯುತ್ತಮ ಸ್ಥಳ ಯಾವುದು ಎಂಬುದನ್ನು ಪಟ್ಟಿ ಮಾಡಿದೆ. ಈ ಪಟ್ಟಿಯಲ್ಲಿ ಯಾವ್ಯಾವ ಹೋಟೆಲ್‌ ಯಾವ ಯಾವ ಸ್ಥಾನವನ್ನು ಪಡೆದಿದೆ ಎಂಬುದನ್ನು ನೋಡೋಣ.

ಬೈ 2 ಕಾಫಿ:

ಬೆಂಗಳೂರಿನ ಬೈ 2 ಕಾಫಿ ಭೋಜನ ಶಾಲೆ ಫಸ್ಟ್‌ ರ್‍ಯಾಂಕ್‌ ಪಡೆದುಕೊಂಡಿದೆ. ಇಲ್ಲಿನ ಗರಿಗರಿಯಾದ ಮೃದುವಾದ ದೋಸೆಯನ್ನು ಚಟ್ನಿಯೊಂದಿಗೆ ಸವಿಯುವ ಖುಷಿಯೇ ಬೇರೆ ಎಂದು ರೆಡ್ಡಿಟ್ ಬಳಕೆದಾರರು ಹೇಳಿದ್ದಾರೆ. ಜೊತೆಗೆ ಇಲ್ಲಿನ ದೋಸೆಗೆ 9/10, ಮಸಾಲೆಗೆ 8.5/10 ಮತ್ತು ನಾನು ತಿಂದಿರುವ ಬೆಸ್ಟ್‌ ಚಟ್ನಿಗಳಲ್ಲಿ ಒಂದು ಎನ್ನುತ್ತಾ ಇಲ್ಲಿನ ಚಟ್ನಿಗೆ 8.5/10 ರೇಟಿಂಗ್ಸ್‌ ನೀಡಿದ್ದಾರೆ.

ಬೆಂಗಳೂರು ತಿಂಡೀಸ್:

ರೆಡ್ಡಿಟ್‌ ಬಳಕೆದಾರರ ರ್‍ಯಾಂಕ್‌ ಪಟ್ಟಿಯಲ್ಲಿ ಸೌತ್‌ ಇಂಡಿಯನ್‌ ಫುಡ್‌ ರೆಸ್ಟೋರೆಂಟ್‌ಗಳಲ್ಲಿ ಒಂದಾದ ಬೆಂಗಳೂರು ತಿಂಡೀಸ್‌ ರೆಸ್ಟೋರೆಂಟ್‌ 2 ನೇ ಸ್ಥಾನವನ್ನು ಪಡೆದುಕೊಂಡಿದೆ. ಇವರು ಇಲ್ಲಿನ ದೋಸೆಗೆ 8.5/10 ಹಾಗೂ ಅದರೊಳಗಿನ ಮಸಾಲಕ್ಕೆ ವಿಶೇಷವಾಗಿ ಮಸಾಲದಲ್ಲಿದ್ದ ಮೆಣಸಿಕಾಯಿ ಹಾಗೂ ಕರಿಬೇವಿನ ಘಮಕ್ಕೆ 9/10 ಹಾಗೂ ಕಾಯಿ ಚಟ್ನಿಗೆ 8/10 ರೇಟಿಂಗ್ಸ್‌ ನೀಡಿದ್ದಾರೆ.

#19 ಗಲ್ಲಿ ಫುಡ್ಸ್:

ರೆಡ್ಡಿಟ್‌ ಬಳಕೆದಾರರ ರ್‍ಯಾಂಕ್‌ಪಟ್ಟಿಯಲ್ಲಿ ಗಲ್ಲಿ ಫುಡ್ಸ್‌ ರೆಸ್ಟೋರೆಂಟ್‌ 3 ನೇ ಸ್ಥಾನ ಪಡೆದುಕೊಂಡಿದೆ. ರೆಡ್ಡಿಟರ್‌ ಇಲ್ಲಿ ಸಿಗುವ ದಾವಣಗೆರೆ ಬೆಣ್ಣೆ ದೋಸೆ ದೀ ಬೆಸ್ಟ್‌ ಎಂದು ಹೇಳಿದ್ದಾರೆ. ಈ ದೋಸೆಯನ್ನು ಸವಿಯುವ ಮಜಾನೇ ಬೇರೆ ಎನ್ನುತ್ತಾ ಇಲ್ಲಿನ ಬೆಣ್ಣೆ ದೋಸೆಗೆ 8/10, ಮಸಾಲೆಯುಕ್ತ ಚಟ್ನಿಗೆ 8.5/10 ರೇಟಿಂಗ್ಸ್‌ ನೀಡಿದ್ದಾರೆ.

ಇದನ್ನೂ ಓದಿ: Tech Tips: ಶುರುವಾಗುತ್ತಿದೆ ಚಳಿಗಾಲ, 5 ಸಾವಿರಕ್ಕಿಂತ ಕಡಿಮೆ ಬೆಲೆಯ ಉತ್ತಮ ಗೀಸರ್ ಇಲ್ಲಿದೆ ನೋಡಿ

ಉಮೇಶ್‌ ದೋಸೆ ಪಾಯಿಂಟ್:

ಗರಿಗರಿಯಾದ ದೋಸೆ ಸಿಗುವ ಶೇಷಾದ್ರಿಪುರಂನ ಉಮೇಶ್‌ ದೋಸೆ ಪಾಯಿಂಟ್‌ ರೆಸ್ಟೋರೆಂಟ್‌ 4 ನೇ ಸ್ಥಾನವನ್ನು ಪಡೆದುಕೊಂಡಿದೆ. ರೆಡ್ಡಿಟರ್‌ ಇಲ್ಲಿ ಸಿಗುವ ಗರಿಗರಿ ಹಾಗೂ ಮೃದುವಾದ ದೋಸೆಗೆ 8/10 ಹಾಗೂ ಚಟ್ನಿಗೆ 6/10 ರೇಟಿಂಗ್ಸ್‌ ನೀಡಿದ್ದಾರೆ.

ರಾಮೇಶ್ವರಂ ಕೆಫೆ:

ಬಹಳ ಸುದ್ದಿಯಲ್ಲಿರುವ ರಾಮೇಶ್ವರಂ ಕೆಫೆ ರ್‍ಯಾಂಕ್‌ ಪಟ್ಟಿಯಲ್ಲಿ 5 ನೇ ಸ್ಥಾನವನ್ನು ಪಡೆದುಕೊಂಡಿದೆ. ರೆಡ್ಡಿಟ್‌ ಬಳಕೆದಾರರು ಇಲ್ಲಿ ದೋಸೆ ಕ್ರಿಸ್ಪಿಯಾಗಿದ್ದರೂ ಅತಿಯಾಗಿ ಬೆಂದಂತೆ ಕಾಣಿಸಿತು. ಆದ್ದರಿಂದ ಇಲ್ಲಿನ ದೋಸೆಗೆ 7/10 ಹಾಗೂ ಚಟ್ನಿಗೆ 6/10 ರೇಟಿಂಗ್ಸ್‌ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಮುಳಬಾಗಲ್ ದೋಸೆ ಕಾರ್ನರ್:

ನಮ್ಮ ಬೆಂಗಳೂರಿನ ಮುಳಬಾಗಲ್‌ ದೋಸೆ ಕಾರ್ನರ್‌ 6 ನೇ ಸ್ಥಾನವನ್ನು ಪಡೆದುಕೊಂಡಿದೆ. ರೆಡ್ಡಿಟ್‌ ಬಳಕೆದಾರರು ಇಲ್ಲಿ ಸಿಗುವ ಗರಿಗರಿಯಾದ ದೋಸೆಗೆ 9/10, ದೋಸೆಯ ಪೊಡಿ ಮಿಶ್ರಣಕ್ಕೆ 7.5/10 ಹಾಗೂ ಚಟ್ನಿಗೆ 3.5/10 ರೇಟಿಂಗ್ಸ್‌ ನೀಡಿದ್ದಾರೆ.

ಐಡಿಸಿ:

ಐಡಿಸಿ ರೆಸ್ಟೋರೆಂಟ್‌ ಏಳನೇ ಸ್ಥಾನ ಪಡೆದುಕೊಂಡಿದೆ. ಇಲ್ಲಿನ ಪೊಡಿ ಮಸಾಲೆ ಮಿಶ್ರಣದ ದೋಸೆ ವಿನ್ಯಾಸದಲ್ಲಿ ಚೆನ್ನಾಗಿದ್ದರೂ ಅದರ ರುಚಿ ಅಷ್ಟು ಇಷ್ಟವಾಗಿಲ್ಲ ಎಂದು ರೆಡ್ಡಿಟಗ ಬಳಕೆದಾರರು ಹೇಳಿದ್ದಾರೆ. ಹೀಗೆ ಇವರು ಇಲ್ಲಿನ ದೋಸೆಗೆ 6.5/10 ಹಾಗೂ ಸಾಂಬರ್‌, ಚಟ್ನಿಗೆ 5/10 ರೇಟಿಂಗ್ಸ್‌ ನೀಡಿದ್ದಾರೆ.

ಉಡುಪಿ ಫುಡ್‌ ಹಬ್:

ಈ ಹೋಟೆಲ್‌ ಉತ್ತಮ ರೇಟಿಂಗ್ಸ್‌ ಇದ್ದ ಕಾರಣ ನಾನು ಈ ಹೋಟೆಲ್‌ಗೆ ದೋಸೆ ಸವಿಯಲು ಹೋಗಿದ್ದೆ ಎಂದು ರೆಡ್ಡಿಟ್‌ ಬಳಕೆದಾರರು ಹೇಳಿದ್ದಾರೆ. ಇವರು ನೀಡಿದ ರ್‍ಯಾಂಕ್‌ ಪಟ್ಟಿಯಲ್ಲಿ ಈ ರೆಸ್ಟೋರೆಂಟ್‌ 8 ನೇ ಸ್ಥಾನವನ್ನು ಪಡೆದಿದೆ. ಇಲ್ಲಿನ ದೋಸೆ ಗರಿಗರಿಯಾಗಿ ಮತ್ತು ಸುವಾಸನೆಭರಿತವಾಗಿದ್ದರಿಂದ ಇದಕ್ಕೆ 7/10 ರೇಟಿಂಗ್ಸ್‌ ನೀಡಿದ್ದಾರೆ.

ನಂದಿ ಉಪಹಾರ:

ನಂದಿ ಉಪಹಾರ ರೆಸ್ಟೋರೆಂಟ್‌ 9 ಸ್ಥಾನವನ್ನು ಪಡೆದುಕೊಂಡಿದ್ದು, ದೋಸೆಯೊಳಗಿನ ಮಾಸಾಲೆ ತುಂಬಾನೆ ಸಪ್ಪೆಯಾಗಿತ್ತು. ಮತ್ತು ಅಷ್ಟು ಸುವಾಸನೆ ಕೂಡಾ ಇರಲಿಲ್ಲ ಆದ್ದರಿಂದ ಇಲ್ಲಿನ ದೋಸೆಗೆ 6/10 ಹಾಗೂ ಮಸಾಲಕ್ಕೆ 4/10 ರೇಟಿಂಗ್ಸ್‌ ನೀಡಿದೆ ಎಂದು ರೆಡ್ಡಿಟ್‌ ಬಳಕೆದಾರರು ಹೇಳಿದ್ದಾರೆ.

ಜನಾರ್ಧನ್‌ ಹೋಟೆಲ್:

ಹಲವು ವರ್ಷಗಳ ಹಿಂದೆ ಇಲ್ಲಿಗೊಮ್ಮೆ ಭೇಟಿ ನೀಡಿದ್ದೆ. ಆದ್ರೆ ಈಗ ಇಲ್ಲಿನ ದೋಸೆಯ ರುಚಿಯ ವಿಚಾರವಾಗಿ ತುಂಬಾ ನಿರಾಸೆಯಾಗಿದೆ ಎನ್ನುತ್ತಾ ರೆಡ್ಡಿಟರ್‌ 10 ನೇ ರ್‍ಯಾಂಕ್‌ ನೀಡಿದ್ದಾರೆ. ಇಲ್ಲಿನ ಸ್ವಲ್ಪ ಹುಳಿ ಮತ್ತು ತುಂಬಾನೇ ದಪ್ಪವಾಗಿದ್ದರಿಂದ 2/10 ರೇಟಿಂಗ್ಸ್‌ ನೀಡಿದ್ದಾರೆ. ಮತ್ತು ಚಟ್ನಿಗೆ 4/10 ನೀಡಿದ್ದಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ