ಚಳಿಗಾಲದಲ್ಲಿ ಗೀಸರ್ ಬಳಸುವಾಗ ಈ ವಿಷಯದಲ್ಲಿ ಎಚ್ಚರವಿರಲಿ!

ಚಳಿಗಾಲದಲ್ಲಿ ಗೀಸರ್ ಬಳಕೆ ಹೆಚ್ಚು. ಈ ವೇಳೆ ಕೆಲವು ಜನರು ಗೀಸರ್ ಆಫ್ ಮಾಡುವುದನ್ನೇ ಮರೆಯುತ್ತಾರೆ. ಈ ರೀತಿ ಮಾಡುವುದು ತಪ್ಪು. ನಿಮಗೂ ಈ ಅಭ್ಯಾಸವಿದ್ದರೆ ಅದರಿಂದ ಪ್ರಾಣಕ್ಕೇ ಅಪಾಯವಾಗಬಹುದು ಎಚ್ಚರ! ಚಳಿಗಾಲದಲ್ಲಿ ಗೀಸರ್ ಬಳಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮುಖ್ಯವಾದ ಮಾಹಿತಿ ಇಲ್ಲಿದೆ.

ಚಳಿಗಾಲದಲ್ಲಿ ಗೀಸರ್ ಬಳಸುವಾಗ ಈ ವಿಷಯದಲ್ಲಿ ಎಚ್ಚರವಿರಲಿ!
ಗೀಸರ್
Follow us
ಸುಷ್ಮಾ ಚಕ್ರೆ
|

Updated on: Nov 18, 2024 | 7:49 PM

ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತಕ್ಕೆ ಹೋಲಿಸಿದರೆ ಉತ್ತರ ಭಾರತದಲ್ಲಿ ಚಳಿ ಹೆಚ್ಚಾಗಿರುತ್ತದೆ. ಚಳಿಗಾಲದಲ್ಲಿ ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳಲ್ಲೂ ಚಳಿ ವಿಪರೀತವಾಗಿಯೇ ಇರುತ್ತದೆ. ಆದರೆ, ಈ ಬಾರಿ ಚಳಿ ಶುರುವಾಗಲು ವಾಡಿಕೆಗಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದು, ಈಗ ಈ ನವೆಂಬರ್ ತಿಂಗಳಿನಲ್ಲಿಯೇ ಚಳಿ ಶುರುವಾಗಿದೆ.

ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡುವ ಅಭ್ಯಾಸ ಇರುವವರಿಗೆ ಚಳಿಗಾಲದಲ್ಲಿ ತಣ್ಣೀರಿನಿಂದ ಸ್ನಾನ ಮಾಡುವುದು ತುಂಬಾ ಕಷ್ಟದ ಕೆಲಸ. ಅದಕ್ಕಾಗಿಯೇ ಜನರು ನೀರನ್ನು ಬಿಸಿ ಮಾಡಲು ಗೀಸರ್ ಅನ್ನು ಬಳಸುತ್ತಾರೆ. ಆದರೆ ಗೀಸರ್ ಬಳಸುವಾಗ ನೀವು ತುಂಬಾ ಜಾಗರೂಕರಾಗಿರಬೇಕು. ಗೀಸರ್ ನಿಂದಾಗಿ ಅಪಘಾತಗಳೂ ಸಂಭವಿಸುತ್ತಿರುವುದು ಹಲವು ಬಾರಿ ಕಂಡು ಬಂದಿದೆ. ಅದಕ್ಕಾಗಿಯೇ ಗೀಸರ್ ಬಳಸುವಾಗ ನೀವು ಯಾವ ವಿಷಯಗಳತ್ತ ಗಮನ ಹರಿಸಬೇಕು ಎಂಬುದರ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ ವಾಸವಾಗಿದ್ದ ಸರ್ಕಾರಿ ಬಂಗಲೆಯ ಬಾತ್​ರೂಂ ನವೀಕರಣಕ್ಕೆ 15 ಕೋಟಿ ದುಂದುವೆಚ್ಚ!

ದೀರ್ಘಕಾಲದವರೆಗೆ ಗೀಸರ್ ಆನ್ ಇಡಬೇಡಿ:

ನೀವು ಗೀಸರ್ ಅನ್ನು ಆನ್ ಮಾಡಿದಾಗ ಕೆಲವೇ ನಿಮಿಷಗಳಲ್ಲಿ ನೀರು ಬಿಸಿಯಾಗುತ್ತದೆ. ಇದರಿಂದಾಗಿ ನೀವು ಸುಲಭವಾಗಿ ಸ್ನಾನ ಮಾಡಬಹುದು. ಆದರೆ ಅನೇಕ ಬಾರಿ ಜನರು ಅದನ್ನು ಆನ್ ಮಾಡಿದ ನಂತರ ಅದನ್ನು ದೀರ್ಘಕಾಲದವರೆಗೆ ಆಫ್ ಮಾಡುವುದಿಲ್ಲ. ಗೀಸರ್ ದೀರ್ಘಕಾಲ ಆನ್ ಆಗಿರುತ್ತದೆ. ಅಂತಹ ಸಂದರ್ಭದಲ್ಲಿ ಕೆಲವೊಮ್ಮೆ ಗೀಸರ್ ಕೂಡ ಸ್ಫೋಟಗೊಳ್ಳುತ್ತದೆ. ಅದಕ್ಕಾಗಿಯೇ ನೀವು ಗೀಸರ್ ಬಳಸುವಾಗ ಅದು ದೀರ್ಘಕಾಲ ಆನ್ ಇರದಂತೆ ನೋಡಿಕೊಳ್ಳಿ. ನೀರು ಬಿಸಿಯಾದ ಕೂಡಲೆ ಗೀಸರ್ ಆಫ್ ಮಾಡುವುದು ಬಹಳ ಮುಖ್ಯ.

ಪ್ರಮಾಣೀಕೃತ ಕಂಪನಿಯಿಂದ ಮಾತ್ರ ಖರೀದಿಸಿ:

ಸಾಮಾನ್ಯವಾಗಿ ಜನರು ಸ್ವಲ್ಪ ಹಣವನ್ನು ಉಳಿಸಲು ಅಗ್ಗದ ಗೀಸರ್​ಗಳನ್ನು ಖರೀದಿಸುತ್ತಾರೆ. ಇದು ನಂತರ ಅವರಿಗೆ ಬಹಳಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಏಕೆಂದರೆ, ಸ್ಥಳೀಯ ಕಂಪನಿಗಳ ಗೀಸರ್‌ಗಳಲ್ಲಿ ಸುರಕ್ಷತಾ ಮಾನದಂಡಗಳ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುವುದಿಲ್ಲ. ಅಂತಹ ಗೀಸರ್‌ಗಳು ಹಾಳಾಗುವ ಸಾಧ್ಯತೆಗಳು ಹೆಚ್ಚು. ಅವುಗಳಲ್ಲಿ ಅಪಘಾತದ ಭಯವೂ ಇರುತ್ತದೆ. ಅದಕ್ಕಾಗಿಯೇ ನೀವು ಗೀಸರ್ ಖರೀದಿಸುವಾಗ ಪ್ರಮಾಣೀಕೃತ ಕಂಪನಿಯಿಂದ ಗೀಸರ್ ಖರೀದಿಸುತ್ತಿದ್ದೀರಾ ಎಂದು ಪರಿಶೀಲಿಸಿ.

ಇದನ್ನೂ ಓದಿ: Tech Tips: ಶುರುವಾಗುತ್ತಿದೆ ಚಳಿಗಾಲ, 5 ಸಾವಿರಕ್ಕಿಂತ ಕಡಿಮೆ ಬೆಲೆಯ ಉತ್ತಮ ಗೀಸರ್ ಇಲ್ಲಿದೆ ನೋಡಿ

ಬಾತ್​ರೂಂ ಮೇಲ್ಭಾಗದಲ್ಲಿ ಗೀಸರ್ ಅಳವಡಿಸಿಕೊಳ್ಳಿ:

ಬಾತ್​ರೂಂನಲ್ಲಿ ಗೀಸರ್ ಅನ್ನು ಸರಿಯಾದ ಸ್ಥಳದಲ್ಲಿ ಅಳವಡಿಸುವುದು ಬಹಳ ಮುಖ್ಯ. ಏಕೆಂದರೆ ಗೀಸರ್‌ನಿಂದ ಉಂಟಾಗುವ ಹೆಚ್ಚಿನ ಅಪಘಾತಗಳು ಗೀಸರ್‌ ಮೇಲೆ ನೀರು ಬೀಳುವುದರಿಂದ ಸಂಭವಿಸುತ್ತವೆ. ಅದಕ್ಕಾಗಿಯೇ ನೀವು ಸ್ನಾನಗೃಹದ ಮೇಲ್ಭಾಗದಲ್ಲಿ ನೀರು ತಲುಪಲು ಸಾಧ್ಯವಾಗದ ಸ್ಥಳದಲ್ಲಿ ಗೀಸರ್ ಅನ್ನು ಅಳವಡಿಸಬೇಕು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ