AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರವಿಂದ್ ಕೇಜ್ರಿವಾಲ್ ವಾಸವಾಗಿದ್ದ ಸರ್ಕಾರಿ ಬಂಗಲೆಯ ಬಾತ್​ರೂಂ ನವೀಕರಣಕ್ಕೆ 15 ಕೋಟಿ ದುಂದುವೆಚ್ಚ!

ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನೀಡಲಾಗಿದ್ದ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿಸಲಾಗಿದೆ. ಇದೀಗ ಆ ಬಂಗಲೆಯ ದಾಸ್ತಾನು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಕೇಜ್ರಿವಾಲ್ ಮನೆಯಲ್ಲಿ ಉಪಯೋಗಿಸುತ್ತಿದ್ದ ಬಾತ್​ರೂಂಗೆ 15 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಲಾಗಿದೆ. ಕೇಜ್ರಿವಾಲ್ ಕುಟುಂಬದ ಐಷಾರಾಮಿ ಜೀವನದ ವಿವರಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿವೆ.

ಅರವಿಂದ್ ಕೇಜ್ರಿವಾಲ್ ವಾಸವಾಗಿದ್ದ ಸರ್ಕಾರಿ ಬಂಗಲೆಯ ಬಾತ್​ರೂಂ ನವೀಕರಣಕ್ಕೆ 15 ಕೋಟಿ ದುಂದುವೆಚ್ಚ!
ಅರವಿಂದ್ ಕೇಜ್ರಿವಾಲ್
ಸುಷ್ಮಾ ಚಕ್ರೆ
|

Updated on: Oct 21, 2024 | 5:55 PM

Share

ನವದೆಹಲಿ: ಅರವಿಂದ್ ಕೇಜ್ರಿವಾಲ್ ಅವರು ರಾಜೀನಾಮೆ ನೀಡಿ, ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ ನಂತರ ಪಿಡಬ್ಲ್ಯುಡಿ ಸಿಎಂ ಬಂಗಲೆಯ ದಾಸ್ತಾನು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಹಿಂದಿನ ಬಂಗಲೆ ನಂ. 6, ಫ್ಲಾಗ್​ಸ್ಟಾಫ್ ರಸ್ತೆಯ ದಾಸ್ತಾನು ಪಟ್ಟಿಯ ವಿವರಗಳು ವೈರಲ್ ಆಗಿವೆ. ಕೇಜ್ರಿವಾಲ್ ಅವರ ಸರ್ಕಾರಿ ಬಂಗಲೆಯಲ್ಲಿ ಬಾತ್​ರೂಂಗೆ 15 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಲಾಗಿತ್ತು. ಅದರಲ್ಲಿ ಸ್ವಯಂಚಾಲಿತ ಹಾಗೂ ಸೆನ್ಸಾರ್​ನಿಂದ ಕೆಲಸ ಮಾಡುವ ಟಾಯ್ಲೆಟ್​ ಸೀಟ್​ ಅಳವಡಿಸಲಾಗಿತ್ತು.

5.6 ಕೋಟಿ ರೂ. ಕರ್ಟನ್ಸ್, ಅಲಂಕಾರಿಕ ವಸ್ತುಗಳನ್ನು ದೆಹಲಿ ಮಾಜಿ ಸಿಎಂ ಕೇಜ್ರಿವಾಲ್ ಅವರ ಶೀಶ್ ಮಹಲ್​ನಲ್ಲಿ ಬಳಸಲಾಗಿತ್ತು. ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಮತ್ತು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕೈಗೊಂಡ ಕೆಲವು ದುಬಾರಿ ಫಿಟ್ಟಿಂಗ್‌ಗಳು ಮತ್ತು ನವೀಕರಣಗಳನ್ನು ದಾಸ್ತಾನು ತೋರಿಸುತ್ತದೆ. ಉದಾಹರಣೆಗೆ, 64 ಲಕ್ಷ ರೂಪಾಯಿ ವೆಚ್ಚದ 16 ಅತ್ಯಾಧುನಿಕ ಟಿವಿಗಳು, 15 ಕೋಟಿ ರೂಪಾಯಿ ವೆಚ್ಚದ ನೀರು ಸರಬರಾಜು ಮತ್ತು ನೈರ್ಮಲ್ಯ ವಸ್ತುಗಳು, 10-12 ಲಕ್ಷ ರೂಪಾಯಿಗಳ ಟಾಯ್ಲೆಟ್ ಸೀಟ್‌ಗಳು ಇದ್ದವು.

ಇದನ್ನೂ ಓದಿ: ಹರ್ಯಾಣದಲ್ಲಿ ಖಾತೆ ತೆರೆಯಲು ಎಎಪಿ ವಿಫಲ; ದೊಡ್ಡ ಪಾಠದ ಬಗ್ಗೆ ಕೇಜ್ರಿವಾಲ್ ಹೇಳಿದ್ದೇನು?

ಅರವಿಂದ್ ಕೇಜ್ರಿವಾಲ್ ಅವರ ಮನೆಯನ್ನು ಅತ್ಯಂತ ದುಬಾರಿ ಫಿಟ್ಟಿಂಗ್‌ಗಳು ಮತ್ತು ವಸ್ತುಗಳೊಂದಿಗೆ ನವೀಕರಿಸಲಾಗಿದೆ. ಇದಕ್ಕೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತೀವ್ರ ಟೀಕಾಪ್ರಹಾರ ನಡೆಸಿದ್ದು, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ “ಆಮ್ ಆದ್ಮಿ” ಅಲ್ಲ, ಅವರು ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದೆ.

ಅರವಿಂದ್ ಕೇಜ್ರಿವಾಲ್ ಅವರು ವಾಸವಾಗಿದ್ದ ಮನೆಯ ಒಟ್ಟು ಬಿಲ್ಟ್-ಅಪ್ ವಿಸ್ತೀರ್ಣ 21,000 ಚದರ ಅಡಿ. ದಾಸ್ತಾನು ಅರವಿಂದ್ ಕೇಜ್ರಿವಾಲ್ ಅವರು ಕೈಗೊಂಡ ಕೆಲವು ದುಬಾರಿ ಫಿಟ್ಟಿಂಗ್‌ಗಳು ಮತ್ತು ನವೀಕರಣಗಳನ್ನು ತೋರಿಸುತ್ತದೆ. ಉದಾಹರಣೆಗೆ 4-6 ಕೋಟಿ ರೂಪಾಯಿ ವೆಚ್ಚದಲ್ಲಿ ಮೋಟಾರು ಬಳಸಿ ಕಿಟಕಿ ಪರದೆ ಹಾಕಲಾಗಿದೆ. 64 ಲಕ್ಷ ವೆಚ್ಚದ 16 ಅತ್ಯಾಧುನಿಕ ಟಿವಿಗಳನ್ನು ಹಾಕಲಾಗಿದೆ. ರೂ.10 ಲಕ್ಷ ವೆಚ್ಚದ ರಿಕ್ಲೈನರ್ ಸೋಫಾಗಳು, ರೂ.19.5 ಲಕ್ಷದ ಸ್ಮಾರ್ಟ್ ಎಲ್ಇಡಿ ಟರ್ನ್ಟೇಬಲ್ ಡೌನ್ಲೈಟ್​ಗಳು, ರೂ.9 ಲಕ್ಷದ ಅಡುಗೆಮನೆಯ ಓವನ್, ರೂ.15 ಕೋಟಿ ವೆಚ್ಚದ ಸುಪೀರಿಯರ್ ವಾಟರ್ ಸಪ್ಲೈ ಮತ್ತು ಸ್ಯಾನಿಟರಿ ಅಳವಡಿಕೆಗಳು, ರೂ.36 ಲಕ್ಷದವರೆಗಿನ ಅಲಂಕಾರಿಕ ಪಿಲ್ಲರ್​ಗಳು. ಟಾಯ್ಲೆಟ್ ಸೀಟುಗಳು 10-12 ಲಕ್ಷ ರೂ.ದ್ದಾಗಿದೆ.

ಇದನ್ನೂ ಓದಿ: ಜೈಲಿನಲ್ಲಿ ಇನ್ಸುಲಿನ್ ಕೊಡದಿದ್ದರೆ ನಾನು ಸಾಯುತ್ತಿದ್ದೆ: ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್ ಮನೆಯ ನವೀಕರಣಕ್ಕೆ ಕೋಟ್ಯಂತರ ರೂ. ದುಂದುವೆಚ್ಚ ಮಾಡಲಾಗಿದೆ ಎಂಬ ವಿಷಯ ಭಾರೀ ಚರ್ಚೆಯಾಗುತ್ತಿದೆ. ಆ ಬಂಗಲೆಯಲ್ಲಿ ಉತ್ತಮ ನೀರು ಸರಬರಾಜು ಮತ್ತು ನೈರ್ಮಲ್ಯ ಸ್ಥಾಪನೆಗೆ 15 ಕೋಟಿ ರೂ., ಎಸ್​ಎಸ್​ ರೇಲಿಂಗ್, ಮೆಟ್ಟಿಲು ಹೊದಿಕೆ (ಹಿತ್ತಾಳೆ, ಶವರ್ ಎನ್‌ಕ್ಲೋಸರ್ ಇತ್ಯಾದಿ)ಗೆ 1.2 ಕೋಟಿ ರೂ., 80 ಕಿಟಕಿ ಪರದೆಗಳಿಗೆ 5.6 ಕೋಟಿ ರೂ., 16 ಅಲ್ಟ್ರಾ ಸ್ಲಿಮ್ ಸ್ಮಾರ್ಟ್ 4ಕೆ ಟಿವಿ, ವಾಯ್ಸ್ ಕಂಟ್ರೋಲ್ಡ್​ಗೆ 64 ಲಕ್ಷ ರೂ., ಸ್ಮಾರ್ಟ್ ಎಲ್ಇಡಿ – 19.5 ಲಕ್ಷ ರೂ., ಫ್ರೀಸ್ಟ್ಯಾಂಡಿಂಗ್ ಲುಮಿನರಿ – 9.2 ಲಕ್ಷ ರೂ., OSADA ಫುಲ್ ಬಾಡಿ ಮಸಾಜ್ ಚೇರ್- 4 ಲಕ್ಷ ರೂ., ರಿಕ್ಲೈನರ್ ಸೋಫಾಗಳು – 10 ಲಕ್ಷ ರೂ., 8 ಮೋಟರೈಸ್ಡ್ ರಿಕ್ಲೈನರ್ ಸೋಫಾಗಳು- 10 ಲಕ್ಷ ರೂ., ಬೋಸ್ ಧ್ವನಿವರ್ಧಕ – 4.5 ಲಕ್ಷ ರೂ., 73 ಲೀಟರ್ ಸ್ಟೀಮ್ ಓವನ್ – 9 ಲಕ್ಷ ರೂ., 50 ಲೀಟರ್ ಮೈಕ್ರೋವೇವ್ ಓವನ್ – 6 ಲಕ್ಷ ರೂ., 3 ಹಾಟ್ ವಾಟರ್ ಜನರೇಟರ್ (ಏರ್ ಟು ವಾಟರ್ ಹೀಟ್ ಪಂಪ್) – 22.5 ಲಕ್ಷ ರೂ. ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ