ವಯಸ್ಸಾಗುತ್ತಿದ್ದಂತೆ ನಮ್ಮ ದೇಹವು ದುರ್ಬಲಗೊಳ್ಳುತ್ತದೆ, ಜತೆಗೆ ಮನಸ್ಸೂ ಕೂಡ ನೀವು ಹೇಳಿದಂತೆ ಕೇಳುವುದಿಲ್ಲ. ಯಾವುದೇ ರೀತಿಯ ರೋಗ ಅಥವಾ ನೋವನ್ನು ತಡೆದುಕೊಳ್ಳುವ ಶಕ್ತಿ ಮನಸ್ಸು ಹಾಗೂ ದೇಹಕ್ಕೆ ಇರುವುದಿಲ್ಲ. ನಿಮ್ಮ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಉತ್ತಮ ಆಹಾರವನ್ನು ಸೇವನೆ ಮಾಡುವುದು ಕೂಡ ಮುಖ್ಯವಾಗುತ್ತದೆ.
ನೀವು ಎಷ್ಟೇ ವ್ಯಾಯಾಮ, ವಾಕಿಂಗ್ ಮಾಡಿದರೂ ಕೂಡ ನಿಮ್ಮ ಆಹಾರ ಕ್ರಮ ಸರಿ ಇಲ್ಲದಿದ್ದರೆ ಅನೇಕ ಕಾಯಿಲೆಗಳು ನಿಮ್ಮನ್ನು ಕಾಡಬಹುದು.
ನಿಮ್ಮ ಆಹಾರದಲ್ಲಿ ಕ್ಯಾಲ್ಶಿಯಂ, ಆಂಟಿಆಕ್ಸಿಡೆಂಟ್ಸ್, ಫೈಟೊ ನ್ಯೂಟ್ರಿಯಂಟ್ಸ್, ಫ್ರೂಟ್ಸ್, ಸಲಾಡ್ಗಳನ್ನು ಸೇರಿಸಬೇಕು.
ನಾವು 50 ವರ್ಷ ತಲುಪಿದ ನಂತರ ನಮ್ಮ ಆರೋಗ್ಯ, ದೇಹ ಮತ್ತು ಯೋಗಕ್ಷೇಮಕ್ಕೆ ಮೊದಲ ಆದ್ಯತೆ ನೀಡಬೇಕು. ಎಲ್ಲಾ ಕಾಯಿಲೆಗಳು ಮತ್ತು ರೋಗಗಳು ನಾವು ತಿನ್ನುವ ಆಹಾರದ ಮೇಲೆ 80%, ವ್ಯಾಯಾಮದ ಮೇಲೆ 20% ಮತ್ತು 5% ಅವಲಂಬಿಸಿರುತ್ತದೆ ಎಂಬುದನ್ನು ಅರಿಯಬೇಕು.
ಉತ್ತಮ ಆಹಾರ ಸೇವನೆ ಮಾಡಿ
ನೀವು ಎಂಥಾ ಆಹಾರವನ್ನು ಸೇವನೆ ಮಾಡುತ್ತಿದ್ದೀರಿ ಎಂಬುದರ ಮೇಲೆ ನಿಮ್ಮ ಆರೋಗ್ಯ ಅವಲಂಬಿತವಾಗಿರುತ್ತದೆ. ನಿಮ್ಮ ಆಹಾರದಲ್ಲಿ ಧಾನ್ಯಗಳನ್ನು ಹೆಚ್ಚು ಸೇರಿಸಿ
⁃ ಬೀನ್ಸ್, ಇದು ನಿಮ್ಮ ವಿವಿಧ ಅಂಗಗಳ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
⁃ ಅಂಟುರಹಿತ ಧಾನ್ಯಗಳಾದ ಅಮರಂಥ್, ಓಟ್ಸ್, ರಾಗಿ ಇತ್ಯಾದಿ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ,
-ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಮತ್ತು ನಮ್ಮ ದೇಹಕ್ಕೆ ಸಾಕಷ್ಟು ಫೈಬರ್ ಯುಕ್ತ ಆಹಾರಗಳ ಸೇವನೆ ಇರಲಿ.
-ನಾರಿನಂಶವಿರುವ ಆಹಾರವಾಗಿರುವ ಸಲಾಡ್‌ಗಳು ಮಲಬದ್ಧತೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ.
-ಮಾಂಸವು ಕ್ಯಾನ್ಸರ್ ಕೋಶಗಳನ್ನು (ಕಾರ್ಸಿನೋಜೆನ್ಸ್) ಸಕ್ರಿಯಗೊಳಿಸುತ್ತದೆ ಮತ್ತು ಮೈದಾ, ಎಣ್ಣೆ ಮತ್ತು ಸಕ್ಕರೆಯಂತಹ ಸಂಸ್ಕರಿಸಿದ ಉತ್ಪನ್ನಗಳನ್ನು ನಿಮ್ಮ ಆಹಾರದಿಂದ ದೂರವಿಡಬೇಕು.
– ಸೂರ್ಯನು ನಮ್ಮ ಆಹಾರದ ಅವಿಭಾಜ್ಯ ಅಂಗವಾಗಿದೆ. ಇದು ವಿಟಮಿನ್ ಡಿ 3 ಅನ್ನು ದೇಹದಲ್ಲಿ ಉತ್ಪತ್ತಿಯಾಗಲು ಸಹಾಯ ಮಾಡುತ್ತದೆ.- ನೀರು: ಸಾಕಷ್ಟು ಪಾನೀಯಗಳು ಮತ್ತು ಕಲ್ಲಂಗಡಿ ಹಣ್ಣು, ಕಿತ್ತಳೆ ಮುಂತಾದ ನೀರು ಭರಿತ ಆಹಾರಗಳು ನಮ್ಮನ್ನು ಹೈಡ್ರೀಕರಿಸುತ್ತದೆ.- ನಡಿಗೆ: ನಡೆಯುವುದರಿಂದ ಪಾದಗಳಿಗೆ ಉತ್ತಮ ವ್ಯಾಯಾಮವಾಗುತ್ತದೆ, ರಕ್ತ ಸಂಚಾರ ಉತ್ತಮವಾಗುತ್ತದೆ, ಮನಸ್ಸನ್ನು ಕ್ರಿಯಾಶೀಲವಾಗಿರುತ್ತದೆ.