Bestie Detector Quiz : ನಿಮ್ಮ ಬೆಸ್ಟ್ ಫ್ರೆಂಡ್ ಯಾರು? ನಿಜವಾದ ಸ್ನೇಹಿತರು ಇವರೇ ನೋಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 15, 2024 | 3:29 PM

ಸ್ನೇಹ ಎನ್ನುವುದು ಇಬ್ಬರೂ ವ್ಯಕ್ತಿಗಳ ನಡುವಿನ ಸುಂದರವಾದ ಭಾವ. ಪವಿತ್ರವಾದ ಸ್ನೇಹಕ್ಕೆ ಜಾತಿ, ಮತ, ವಯಸ್ಸಿನ ಗಡಿ ಯಾವುದು ಇರುವುದಿಲ್ಲ. ಆದರೆ ಕೆಲವೊಂದು ಸ್ನೇಹ ಸಂಬಂಧಗಳು ಅವಶ್ಯಕತೆಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಕೆಲವೊಮ್ಮೆ ತಮ್ಮ ಸ್ನೇಹಿತರಲ್ಲಿ ಯಾರು ನಿಜವಾದ ಸ್ನೇಹಿತರು ಎನ್ನುವ ಸಂದೇಹ ಮೂಡಬಹುದು. ಒಂದು ವೇಳೆ ನೀವು ಕೂಡ ನಿಮ್ಮ ನಿಜವಾದ ಸ್ನೇಹಿತರು ಯಾರು ಎನ್ನುವ ಸಂದೇಹದಲ್ಲಿದ್ದರೆ ಈ ವಿಧಾನದ ಮೂಲಕ ನಿಮ್ಮ ಆತ್ಮೀಯ ಗೆಳೆಯರು ಯಾರು ಎನ್ನುವ ನಿರ್ಣಯಕ್ಕೆ ಬರಬಹುದು.

Bestie Detector Quiz : ನಿಮ್ಮ ಬೆಸ್ಟ್ ಫ್ರೆಂಡ್ ಯಾರು? ನಿಜವಾದ ಸ್ನೇಹಿತರು ಇವರೇ ನೋಡಿ
Follow us on

ಸ್ನೇಹ ಎನ್ನುವುದು ಎರಡಕ್ಷರವಲ್ಲ, ಅದೊಂದು ಸುಂದರ ಭಾವ. ಜೀವನದಲ್ಲಿ ಕಷ್ಟಕಾಲದಲ್ಲಿ ಜೊತೆ ನಿಂತು, ಭಾವನೆಗಳಿಗೆ ಸ್ಪಂಧಿಸುವವರೇ ನಿಜವಾದ ಸ್ನೇಹಿತರು. ಹೀಗಾಗಿ ಪ್ರತಿಯೊಬ್ಬರ ಜೀವನದಲ್ಲಿಯೂ ಸ್ನೇಹ ಎನ್ನುವುದು ಬಹಳ ಮುಖ್ಯವಾಗುತ್ತದೆದೆ. ಸ್ನೇಹಿತರೊಂದಿಗೆ ಮಾತ್ರ ನಾವು ನಾವಾಗಿರಲು ಸಾಧ್ಯ. ಸಂಬಂಧಿಗಳಿಗಿಂತಲೂ ಹೆಚ್ಚಾಗಿ ಜೀವದ ಕೊನೆವರೆಗೆ ಇರುವವರೇ ಈ ಸ್ನೇಹಿತರು. ಆದರೆ ಎಲ್ಲಾ ಗೆಳೆಯರು ಜೀವನ ಕೊನೆಯವರೆಗೂ ಇರುವುದಕ್ಕೂ ಸಾಧ್ಯವಿಲ್ಲ. ನಿಮ್ಮ ನಿಜವಾದ ಫ್ರೆಂಡ್ಸ್ ಯಾರು ಎಂದು ತಿಳಿದುಕೊಳ್ಳಲು ಬೆಸ್ಟಿ ಡಿಟೆಕ್ಟರ್ ರಸಪ್ರಶ್ನೆಯಿಂದ ಸಾಧ್ಯವಾಗುತ್ತದೆ. ಈ ರಸಪ್ರಶ್ನೆಯು ನಿಮ್ಮ ಸ್ನೇಹದ ನಿಜವಾದ ಆಳವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಅದಲ್ಲದೇ ನಿಮ್ಮ ಸ್ನೇಹಿತನು “ಬೆಸ್ಟೀ” ಎಂದು ಪದಕ್ಕೆ ಅರ್ಹರಾಗಿದ್ದಾರೆಯೆ ಎಂಬುದನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ.

ನಿಮ್ಮ ಉತ್ತಮ ಸ್ನೇಹಿತ ಯಾರು ಎಂದು ತಿಳಿಯುವುದು ಹೇಗೆ?

1. ನಿಮ್ಮ ಸ್ನೇಹಿತರೊಂದಿಗೆ ಸಂಭಾಷಣೆಯನ್ನು ಯಾವ ಎಮೋಜಿ ಉತ್ತಮವಾಗಿದೆ ವಿವರಿಸುತ್ತದೆ?

a) 😂

b) 🙄

c) ❤️

2. ನೀವು ಮುಂಜಾನೆ 3 ಗಂಟೆಗೆ ನಿಮ್ಮ ಸ್ನೇಹಿತರಿಗೆ ಸಂದೇಶ ಕಳುಹಿಸಿದರೆ ಅವರ ಪ್ರತಿಕ್ರಿಯೆ ಏನಾಗಿರುತ್ತದೆ?

ಎ) “ನೀನು ಯಾಕೆ ಎದ್ದಿದ್ದೀಯಾ? ಎಂದು ಕೇಳ್ತಾರೆ.

ಬಿ) ಬೆಳಗ್ಗೆ ತನಕ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ.

c) “ ಏನಾದ್ರು ಸಮಸ್ಯೆ ಆಗಿದ್ಯಾ?” ಎಂದು ಕೇಳ್ತಾರೆ.

3. ನೀವು ಏನಾದರೂ ಯೋಜನೆಗಳನ್ನು ರೂಪಿಸಿದಾಗ ಅವರು ಎಷ್ಟು ಬಾರಿ ಅದರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ

ಎ) ಹೆಚ್ಚಿನ ಎಲ್ಲಾ ಸಂದರ್ಭಗಳಲ್ಲಿ ಮಾಡ್ತಾರೆ.

ಬಿ) ಕೆಲವೇ ಕೆಲವು ಸಲ ಸಾಂದರ್ಭಿಕ ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳುತ್ತಾರೆ.

ಸಿ ) ಅಪರೂಪಕ್ಕೊಮ್ಮೆ.

4. ತುಂಬಾ ದಿನಗಳ ಬಳಿಕ ಒಬ್ಬರನ್ನೊಬ್ಬರು ಭೇಟಿಯಾದಾಗ ನೀವು ಮೊದಲು ಮಾಡುವ ಕೆಲಸ ಏನು?

ಎ) ದೂರದಿಂದಲೇ ಜೋರಾಗಿ ಹಾಯ್ ಎಂದು ಕಿರುಚುವುದು.

ಬಿ) ಪರಸ್ಪರ ತಬ್ಬಿಕೊಳ್ಳುವುದು.

ಸಿ) ಸುಮಾರು ವರ್ಷಗಳ ಬಳಿಕ ಭೇಟಿಯಾಗಿದ್ದೇವೆಯೋ ಎಂಬಂತೆ ಒಬ್ಬರೊನ್ನೊಬ್ಬರು ತಬ್ಬಿಕೊಂಡು ಖುಷಿಯನ್ನು ವ್ಯಕ್ತಪಡಿಸುವುದು.

ಇದನ್ನೂ ಓದಿ: ಹೆತ್ತವರೇ ಮಕ್ಕಳ ಆರೋಗ್ಯ ನಿಮ್ಮ ಕೈಯಲ್ಲಿ, ಲಸಿಕೆ ಹಾಕಿಸಿ ಜಾಗೃತಿ ಮೂಡಿಸಿ

5. ನೀವು ಮಾಡಿದ ಹಾಸ್ಯಗಳನ್ನು ನಿಮ್ಮ ಸ್ನೇಹಿತರು ಎಷ್ಟು ಬಾರಿ ನೆನಪಿಸಿಕೊಂಡು ಒಳಗೊಳಗೇ ನಗುತ್ತಾರೆ.

ಎ) ಇದು ಒಂದು ಹಾಸ್ಯವೇ ಎನ್ನುವಂತೆ ಭಾವಿಸ್ತಾರೆ.

ಬಿ) ಕೆಲವೊಮ್ಮೆ ನೆನಪಿಸಿಕೊಂಡು ನಗುತ್ತಾರೆ.

ಸಿ) ಪ್ರತಿ ಬಾರಿಯೂ ಹಾಸ್ಯವನ್ನು ನೆನಪಿಸಿಕೊಳ್ತಾ ಕಾಲೆಳೆಯುತ್ತಾರೆ.

6. ನೀವು ಬೇಸರದಲ್ಲಿದ್ದಾಗ, ನಿಮ್ಮ ಸ್ನೇಹಿತ ಹೇಗೆ ಪ್ರತಿಕ್ರಿಯಿಸುತ್ತಾನೆ?

ಎ) ಈ ಬೇಸರದಿಂದ ಹೊರ ಬರಲು ಸಾಧ್ಯವಿದೆ ಎನ್ನುವ ಮಾತು.

ಬಿ) ಎಲ್ಲವನ್ನು ಕೇಳಿಸಿಕೊಳ್ಳುತ್ತಾರೆ. ಆದರೆ ಯಾವ ಭರವಸೆ ಮಾತುಗಳನ್ನು ಆಡಲ್ಲ.

ಸಿ) ಪ್ರತಿಯೊಂದು ಸಮಯದಲ್ಲಿ ನಿಮ್ಮ ಪಕ್ಕದಲ್ಲಿದ್ದು ನಿಮಗೆ ಸಾಂತ್ವನ ನೀಡುತ್ತಾರೆ.

7. ಫುಡ್ ಶೇರಿಂಗ್ ವಿಚಾರದಲ್ಲಿ ನಿಮ್ಮ ಸ್ನೇಹಿತರ ನಿಲುವೇನು?

ಎ) ಆಹಾರವನ್ನು ಹಂಚಿಕೊಳ್ಳದೇ ಒಬ್ಬರೇ ತಿನ್ನುವುದು.

ಬಿ) ಅಪರೂಪಕ್ಕೊಮ್ಮೆ ಹಂಚಿಕೊಂಡು ತಿನ್ನುವುದು.

ಸಿ) ಪ್ರತಿ ಬಾರಿಯೂ ತಿಂಡಿ ತಿನಿಸನ್ನು ಹಂಚಿಕೊಂಡೇ ತಿನ್ನುವುದು.

8. ನೀವು ಗಮನಾರ್ಹವಾದದ್ದನ್ನು ಸಾಧಿಸಿದಾಗ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ?

ಎ) ಸಹಜವಾಗಿ ಪ್ರತಿಕ್ರಿಯೆ ನೀಡುತ್ತಾರೆ.

ಬಿ) ಬೇಕೋ ಬೇಡವೋ ಎನ್ನುವಂತೆ ಅಭಿನಂದನೆಯನ್ನು ತಿಳಿಸುತ್ತಾರೆ.

ಸಿ) ತಮ್ಮ ಸಾಧನೆಯೇ ಎನ್ನುವಂತೆ ನಿಮ್ಮೊಂದಿಗೆ ಸಂಭ್ರಮಿಸುತ್ತಾರೆ.

9. ನಿಮ್ಮ ಸ್ನೇಹಿತನಿಗೆ ನಿಮ್ಮ ಇಷ್ಟದ ಐಸ್ ಕ್ರೀಮ್ ಪ್ಲೇವರ್ ಬಗ್ಗೆ ತಿಳಿದಿದೆಯೇ?

ಎ) ನೀವು ಐಸ್ ಕ್ರೀಮ್ ಅನ್ನು ಇಷ್ಟಪಡುತ್ತೀರಾ ಎಂಬುದೇ ಅವರಿಗೆ ತಿಳಿದಿಲ್ಲ.

ಬಿ) ಕೆಲವೊಮ್ಮೆ ಬಾರಿ ಗಮನಿಸಿರಬಹುದು.

ಸಿ) ಪ್ರತಿ ಬಾರಿಯೂ ನಿಮ್ಮ ಇಷ್ಟದ ಐಸ್ ಕ್ರೀಮ್ ಪ್ಲೇವರ್ ಆರ್ಡರ್ ಮಾಡ್ತಾರೆ.

10. ನಿಮ್ಮ ಸ್ನೇಹಿತರ ನಡುವೆ ಜಗಳ ಉಂಟಾದಾಗ ಅದನ್ನು ಹೇಗೆ ಪರಿಹರಿಸಿಕೊಳ್ಳುತ್ತೀರಿ?

ಎ) ತಮ್ಮದೇ ಸರಿ ಎನ್ನುವಂತೆ ವಾದ ಮಾಡುತ್ತಾರೆ.

ಬಿ ) ಪರಸ್ಪರ ಚುಚ್ಚು ಮಾತಿನಿಂದ ನೋಯಿಸುತ್ತಾರೆ.

ಸಿ) ಶಾಂತವಾಗಿ ಮಾತನಾಡಿ ಕೊನೆಗೆ ಕ್ಷಮೆಯಾಚಿಸುತ್ತಾರೆ.

ರಸಪ್ರಶ್ನೆಗಳ ಉತ್ತರವನ್ನು ಸ್ಕೋರ್ ಮಾಡುವುದು ಹೇಗೆ?

* ಪ್ರತಿ “ಎ” ಉತ್ತರವನ್ನು ಆಯ್ಕೆ ಮಾಡಿದ್ದರೆ 1 ಅಂಕ ನೀಡಿ.

* ಪ್ರತಿ “ಬಿ” ಆಯ್ಕೆ ಮಾಡಿದ್ದರೆ 2 ಅಂಕಗಳನ್ನು ನೀಡಿ.

* ಪ್ರತಿ “ಸಿ” ಆಯ್ಕೆ ಮಾಡಿಕೊಂಡಿದ್ದರೆ 3 ಅಂಕಗಳನ್ನು ನೀಡಿ.

* ಕೊನೆಗೆ ನಿಮ್ಮ ಆಯ್ಕೆಯ ಎ, ಬಿ ಹಾಗೂ ಸಿಯ ಎಲ್ಲಾ ಅಂಕಗಳನ್ನು ಲೆಕ್ಕಹಾಕಿ.

• 10-17 ಅಂಕಗಳು ಬಂದರೆ ನೀವು ಸ್ನೇಹಿತರೆಂದು ಕೊಂಡವರು ನಿಮ್ಮ ನಿಜವಾದ ಆತ್ಮೀಯ ಸ್ನೇಹಿತರಾಗಿಲ್ಲಬಹುದು.

• 18-24 ಅಂಕಗಳು ಬಂದರೆ ನಿಮ್ಮ ಸ್ನೇಹಿತ ನಿಮ್ಮ ಆತ್ಮೀಯರಾಗಲು ಬಹಳ ಹತ್ತಿರದಲ್ಲಿದ್ದಾರೆ ಎಂದರ್ಥ.

• 25-30 ಅಂಕಗಳು ಬಂದರೆ, ನೀವು ನಿಜವಾದ ಉತ್ತಮ ಸ್ನೇಹಿತನನ್ನು ಕಂಡುಕೊಂಡಿದ್ದೀರಿ! ಈ ಸ್ನೇಹವನ್ನು ಮುಂದುವರೆಸಿ ಎನ್ನುವುದನ್ನು ಸೂಚಿಸುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ