Vijaya Lakshmi Pandit: ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಮೊದಲ ಮಹಿಳಾ ಅಧ್ಯಕ್ಷೆ ವಿಜಯಲಕ್ಷ್ಮಿ ಪಂಡಿತ್ ಅವರ ಬಗೆಗಿನ 7 ವಿಶೇಷ ಸಂಗತಿಗಳು

| Updated By: shruti hegde

Updated on: Aug 18, 2021 | 11:01 AM

Vijaya Lakshmi Pandit Birth Anniversary: ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಮೂಲಕ ವಿಶ್ವದ ಪ್ರಮುಖ ಮಹಿಳೆಯರಲ್ಲಿ ಒಬ್ಬರಾದರು. ತಮ್ಮ ಬುದ್ಧಿವಂತಿಕೆ ಮತ್ತು ಚತುರತೆಯಿಂದ ಗುರುತಿಸಿಕೊಂಡರು.

Vijaya Lakshmi Pandit: ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಮೊದಲ ಮಹಿಳಾ ಅಧ್ಯಕ್ಷೆ ವಿಜಯಲಕ್ಷ್ಮಿ ಪಂಡಿತ್ ಅವರ ಬಗೆಗಿನ 7 ವಿಶೇಷ ಸಂಗತಿಗಳು
Vijaya Lakshmi Pandit
Follow us on

ರಾಜಕಾರಣಿ, ಸ್ವಾತಂತ್ರ್ಯ ಹೋರಾಟಗಾರ್ತಿ ವಿಜಯಲಕ್ಷ್ಮಿ ಪಂಡಿತ್ ಅವರ ಜನ್ಮ ದಿನವಿಂದು. 1900 ಆಗಸ್ಟ್ 18 ರಂದು ಪ್ರಯಾಗರಾಜ್​ನಲ್ಲಿ (ಆಗಿನ ಅಲಹಾಬಾದ್) ಜನಿಸಿದರು. ಅವರು ಜವಹರ್​ಲಾಲ್​ ನೆಹರೂರವರ ಸಹೋದರಿ. ಭಾತರವು ಬ್ರಿಟಿಷ್ ಆಳ್ವಿಕೆಯಲ್ಲಿ ಸ್ವಾತಂತ್ರ್ಯ ಪಡೆಯಲು ಹೆಣಗಾಡುತ್ತಿರುವಾಗ ದೇಶಕ್ಕಾಗಿ ಹೋರಾಡಲು ಮುಂದಾದ ಹಲವಾರು ಮಹಿಳೆಯರಲ್ಲಿ ಪಂಡಿತ್ ಕೂಡಾ ಒಬ್ಬರು.

ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಮೂಲಕ ವಿಶ್ವದ ಪ್ರಮುಖ ಮಹಿಳೆಯರಲ್ಲಿ ಒಬ್ಬರಾದರು. ತಮ್ಮ ಬುದ್ಧಿವಂತಿಕೆ ಮತ್ತು ಚತುರತೆಯಿಂದ ಗುರುತಿಸಿಕೊಂಡರು. ಪಂಡಿತ್ ಅವರು 1990 ಡಿಸೆಂಬರ್ 1ರಂದು ಕೊನೆಯುಸಿರೆಳೆದರು.

ವಿಜಯಲಕ್ಷ್ಮಿ ಪಂಡಿತ್ ಅವರ 7 ವಿಶೇಷ ಸಂಗತಿಗಳು
ಪಂಡಿತ್ ಅವರು ಹುಟ್ಟಿದಾಕ್ಷಣ ಸ್ವರೂಪ್ ಕುಮಾರಿ ನೆಹರು ಎಂದು ಹೆಸರಿಡಲಾಯಿತು. ಬಳಿಕ ರಂಜಿತ್ ಸೀತಾರಾಮ್ ಪಂಡಿತ್ ಅವರನ್ನು ಮದುವೆಯಾದ ನಂತರ ಅವರ ಹೆಸರನ್ನು ವಿಜಯಲಕ್ಷ್ಮಿ ಪಂಡಿತ್ ಎಂದು ಬದಲಾಯಿಸಲಾಯಿತು

ಬ್ರಿಟೀಷರ ವಿರುದ್ಧ ದಂಗೆಯೆದ್ದ ನಂತರ 1932 ರಿಂದ 1933, 1940 ಮತ್ತು 1942 ರಿಂದ 1943 ರಲ್ಲಿ ಮೂರು ಬಾರಿ ಬ್ರಿಟಿಷರಿಂದ ಸೆರೆವಾಸ ಅನುಭವಿಸಿದರು

1937ರಲ್ಲಿ ಪಂಡಿತ್ ಅವರು ಯುನೈಟೆಡ್ ಪ್ರಾಂತ್ಯಗಳ ಶಾಸಕಾಂಗ ಸಭೆಯ ಸದಸ್ಯರಾಗಿ ಆಯ್ಕೆಯಾದರು. ನಂತರ ಅವರು 1939ರಲ್ಲಿ 2ನೇ ಜಾಗತಿಕ ಯುದ್ಧದ ನಡುವೆ ಬ್ರಿಟೀಷರ ವಿರುದ್ಧ ಪ್ರತಿಭಟನೆ ನಡೆಸಲು ರಾಜೀನಾಮೆ ನೀಡಿದರು

1941ರಿಂದ 1943ರವರೆಗೆ ಅಖಿಲ ಭಾರತ ಮಹಿಳಾ ಸಮ್ಮೇಳನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು

1953ರಲ್ಲಿ ಯುಎನ್ ಜನರಲ್ ಅಸೆಂಬ್ಲಿಯ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಮಹಿಳೆ

1962 ರಿಂದ 1964ರವರೆಗೆ ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು

1978ರಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗಕ್ಕೆ ಭಾರತದ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದರು

ಇದನ್ನೂ ಓದಿ:

ಗಣರಾಜ್ಯೋತ್ಸವ ವಿಶೇಷ | ಭಾರತದ ಸಂವಿಧಾನ ರಚನಾ ಸಮಿತಿಯಲ್ಲಿ ನಾರೀಶಕ್ತಿ

ನಟಿ ವಿಜಯಲಕ್ಷ್ಮಿ ಸಹೋದರಿ ಉಷಾ ಆರೋಗ್ಯ ಮತ್ತಷ್ಟು ಗಂಭೀರ

(Birth Anniversary know about 7 fact about Vijaya lakshmi pandit)