ನಟಿ ವಿಜಯಲಕ್ಷ್ಮಿ ಸಹೋದರಿ ಉಷಾ ಆರೋಗ್ಯ ಮತ್ತಷ್ಟು ಗಂಭೀರ

ಕನ್ನಡದ ನಾಗಮಂಡಲ, ಸೂರ್ಯವಂಶ ಮೊದಲಾದ ಖ್ಯಾತ ಚಿತ್ರಗಳಲ್ಲಿ ಅಭಿನಯಿಸಿರುವ ವಿಜಯಲಕ್ಷ್ಮಿ ಅವರ ಸಹೋದರಿ ಉಷಾ ಅನಾರೋಗ್ಯದಿಂದ ಬಳಲುತ್ತಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ನಟಿ ವಿಜಯಲಕ್ಷ್ಮಿ ಅವರು ಚಿತ್ರರಂಗದಲ್ಲಿ ಆ್ಯಕ್ಟಿವ್​ ಆಗಿಲ್ಲ. ಆದರೆ, ಇತ್ತೀಚೆಗೆ ಅವರು ಸುದ್ದಿಯಲ್ಲಿದ್ದಾರೆ. ಅವರ ಸಹೋದರಿ ಉಷಾ ಅವರಿಗೆ ಅನಾರೋಗ್ಯ ಕಾಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಉಷಾ ಆರೋಗ್ಯ ಗಂಭೀರವಾಗಿದೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. 

ಕನ್ನಡದ ನಾಗಮಂಡಲ, ಸೂರ್ಯವಂಶ ಮೊದಲಾದ ಖ್ಯಾತ ಚಿತ್ರಗಳಲ್ಲಿ ಅಭಿನಯಿಸಿರುವ ವಿಜಯಲಕ್ಷ್ಮಿ ಅವರ ಸಹೋದರಿ ಉಷಾ ಅನಾರೋಗ್ಯದಿಂದ ಬಳಲುತ್ತಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕಳೆದ ಹದಿನೈದು ವರ್ಷಗಳಿಂದ ತಮಿಳುನಾಡಿನಲ್ಲಿರುವ ಈರ್ವರೂ ಸೋದರಿಯರೂ ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಉಷಾ ಅವರಿಗೆ ಜಯಪ್ರದಾ ಅವರ ಅಣ್ಣ ರಾಜ್​ಬಾಬು ಅವರಿಂದ ವಿಚ್ಛೇದನ ಪಡೆಯಲು ಪ್ರಯತ್ನಿಸುತ್ತಿದ್ದರೂ ಇನ್ನೂ ಸಾಧ್ಯವಾಗಿಲ್ಲ.

‘ಉಷಾ ತುಂಬಾ ವೀಕ್​​ ಆಗಿದ್ದಾರೆ. ಎರಡು ಮೂರು ದಿನದಿಂದ ನೆನಪು ಮಾಡಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಮಾತನಾಡೋಕೆ ಆಗುತ್ತಿಲ್ಲ. ಸರ್ಜರಿ ಆದ ನಂತರ ಇಷ್ಟೆಲ್ಲ ಆಗಿದೆ. ಡಾಕ್ಟರ್​ ಜೊತೆ ಮಾತಾಡಿ ನನಗೆ ಸಾಕಾಗಿದೆ. ಯಾರೂ ಕೂಡ ಅವರು ಮಾಡಿರುವ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ. ಈಗ ಉಷಾ ಅವರಿಗೆ ಬೇರೆ ಕಡೆ ಚಿಕಿತ್ಸೆ ಕೊಡಿಸೋಕೆ ನಮ್ಮ ಬಳಿ ದುಡ್ಡಿಲ್ಲ. ನಾವೀಗ ಬಹಳ ನೋವಿನಲ್ಲಿ ಇದ್ದೇವೆ. ದಯವಿಟ್ಟು ನಮಗೆ ಆರ್ಥಿಕವಾಗಿ ಸಹಾಯ ಮಾಡಿ’ ಎಂದು ವಿಜಯಲಕ್ಷ್ಮೀ ಶಿವರಾಜ್​ಕುಮಾರ್ ಬಳಿ ಮನವಿ ಮಾಡಿದ್ದರು.

ಇದನ್ನೂ ಓದಿ: ಚಿಂತಾಜನಕ ಸ್ಥಿತಿಯಲ್ಲಿ ‘ಸೂರ್ಯವಂಶ’ ನಟಿ ವಿಜಯಲಕ್ಷ್ಮೀ ಸಹೋದರಿ; ಸಹಾಯಕ್ಕಾಗಿ ಶಿವಣ್ಣನಿಗೆ ಮನವಿ

Click on your DTH Provider to Add TV9 Kannada