‘ಪ್ರತಿನಿತ್ಯ ಸೋರೆಕಾಯಿ ರಸ ಕುಡಿದು ರಕ್ತದೊತ್ತಡ 40ಕ್ಕೆ ಇಳಿದಿತ್ತು’ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಬಳಿಕ ನಟಿಯ ಇನ್​ಸ್ಟಾಗ್ರಾಂ ಪೋಸ್ಟ್

| Updated By: shruti hegde

Updated on: Oct 11, 2021 | 2:27 PM

ಇನ್​ಸ್ಟಾಗ್ರಾಮ್​ ಜಾಗೃತಿ ಮೂಡಿಸುವ ಒಂದು ಅದ್ಭುತ ವೇದಿಕೆಯಾಗಿದೆ. ಸೋರೇಕಾಯಿಯಲ್ಲಿನ ವಿಷದ ಪ್ರಮಾಣ ಅತ್ಯಂತ ಭೀಕರ ಪರಿಣಾಮವನ್ನು ಉಂಟುಮಾಡುತ್ತದೆ. ಇದು ಆರೋಗ್ಯಕ್ಕೆ ತುಂಬಾ ಮಾರಕವಾಗಿದೆ ಎಂದು ತಾಹಿರಾ ಕಶ್ಯಪ್​ ಪೋಸ್ಟ್​ ಮಾಡಿದ್ದಾರೆ.

‘ಪ್ರತಿನಿತ್ಯ ಸೋರೆಕಾಯಿ ರಸ ಕುಡಿದು ರಕ್ತದೊತ್ತಡ 40ಕ್ಕೆ ಇಳಿದಿತ್ತು’ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಬಳಿಕ ನಟಿಯ ಇನ್​ಸ್ಟಾಗ್ರಾಂ ಪೋಸ್ಟ್
ಲೇಖಕಿ, ನಟಿ ಮತ್ತು ಚಲನಚಿತ್ರ ನಿರ್ಮಾಪಕಿ ತಾಹಿರಾ ಕಶ್ಯಪ್
Follow us on

ಲೇಖಕಿ, ನಟಿ ಮತ್ತು ಚಲನಚಿತ್ರ ನಿರ್ಮಾಪಕಿ ತಾಹಿರಾ ಕಶ್ಯಪ್ ಇನ್​ಸ್ಟಾಗ್ರಾಮ್​ನಲ್ಲಿ ಇತ್ತೀಚೆಗೆ ಸೋರೆಕಾಯಿ ರಸ ಸೇವಿಸಿ ಉಂಟಾದ ಆರೋಗ್ಯ ಸಮಸ್ಯೆಯನ್ನು ಪೋಸ್ಟ್ ಮೂಲಕ ಹೇಳಿಕೊಂಡಿದ್ದಾರೆ.  ಅವರು ಉದ್ದದ ಸೋರೆಕಾಯಿ ರಸವನ್ನು ಪ್ರತಿನಿತ್ಯ ಸೇವಿಸುತ್ತಿದ್ದರು. ಆ ಬಳಿಕ ನನ್ನ ರಕ್ತದೊತ್ತಡ 40ಕ್ಕೆ ಇಳಿದಿದೆ. ತೀವ್ರ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಇರಬೇಕಾದ ಪರಿಸ್ಥಿತಿ ಎದುರಾಯಿತು. ಚಿಕಿತ್ಸೆ ಬಳಿಕ ಇದೀಗ ನಾನು ಆರಾಮವಾಗಿದ್ದೇನೆ. ಬೇರೆಯವರಿಗೆ ಹೀಗೆ ಆಗದಂತೆ ಎಚ್ಚರಿಸಲು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಹಂಚಿಕೊಂಡಿರುವುದಾಗಿ ಅವರು ಹೇಳಿದ್ದಾರೆ.

ಇದನ್ನು ಕೇಳಿರಿ, ಇನ್​ಸ್ಟಾಗ್ರಾಮ್​ ಜಾಗೃತಿ ಮೂಡಿಸುವ ಒಂದು ಅದ್ಭುತ ವೇದಿಕೆಯಾಗಿದೆ! ಹಸಿರು ಉದ್ದದ ಸೋರೆಕಾಯಿಯಲ್ಲಿನ ವಿಷದ ಪ್ರಮಾಣ ಅತ್ಯಂತ ಭೀಕರ ಪರಿಣಾಮವನ್ನು ಉಂಟುಮಾಡುತ್ತದೆ. ಇದು ಆರೋಗ್ಯಕ್ಕೆ ತುಂಬಾ ಮಾರಕವಾಗಿದೆ. ಆರೋಗ್ಯದ ಹೆಸರಿನಲ್ಲಿ ರಸವನ್ನು ಅತಿಯಾಗಿ ಸೇವಿಸಬೇಡಿ ಎಂದು ಅವರು ಹೇಳಿದ್ದಾರೆ.

ವಿಡಿಯೋದಲ್ಲಿ ತಾಹಿರಾ ಕಶ್ಯಪ್ ಅರಿಶಿಣ, ಉದ್ದದ ಸೋರೇಕಾಯಿ ಮತ್ತು ಆಮ್ಲಾದ ಮಿಶ್ರಣವನ್ನು ಸೇವಿಸಿದ್ದೆ, ಪ್ರತಿನಿತ್ಯ ಸೋರೆಕಾಯಿ ರಸವನ್ನು ಸೇವಿಸುತ್ತಿದ್ದೆ ಎಂದು ಅವರು ಹೇಳಿದ್ದಾರೆ. ತುಂಬಾ ಕಹಿ ರುಚಿ ನೀಡುವ ಸೋರೇಕಾಯಿ ರಸವನ್ನು ಹೆಚ್ಚಾಗಿ ಸೇವಿಸಬೇಡಿ ಎಂದು ತಮ್ಮ ಹಿಂಬಾಲಕರ ಬಳಿ ಕೇಳಿಕೊಂಡಿದ್ದಾರೆ.

ತಾಹಿರಾ ಕಶ್ಯಪ್ ಪೋಸ್ಟ್ ಇಲ್ಲಿದೆ ನೋಡಿ;

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ತಾಹಿರಾ ಕಶ್ಯಪ್ ತಮ್ಮ ಮುಂಬರುವ ಚಿತ್ರ ಶರ್ಮಾಜಿ ಕೀ ಬೇಟೀ ಚಿತ್ರದ ಸೆಟ್​ಗೆ ಮರಳಿದ್ದಾರೆ. ಚಿತ್ರದ ನಿರ್ಮಾಪಕ ತನುಜ್ ಅವರು ಹಂಚಿಕೊಂಡ ಪೋಸ್ಟ್ ಇಲ್ಲಿದೆ ನೋಡಿ;