
ಪತಂಜಲಿ ಸಂಸ್ಥಾಪಕ ಮತ್ತು ಯೋಗ ಗುರು ಬಾಬಾ ರಾಮದೇವ್ (Baba Ramdev) ತಮ್ಮ ಆಯುರ್ವೇದ ಪರಿಹಾರಗಳಿಗೆ ವಿಶ್ವಾದ್ಯಂತ ಹೆಸರುವಾಸಿಯಾಗಿದ್ದಾರೆ. 60 ನೇ ವಯಸ್ಸಿನಲ್ಲಿಯೂ ಸಹ ನೀವು ಯುವಕರು ಮತ್ತು ಸದೃಢರಾಗಿರಲು ಸಾಧ್ಯ. ಆದರೆ ಆರೋಗ್ಯಕರ ದಿನಚರಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂಬುದು ಅವರ ಸಲಹೆ. ಆರೋಗ್ಯವಾಗಿರಲು ಆಹಾರ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಒತ್ತಿ ಹೇಳುವ ಅವರು, ಸಾಕಷ್ಟು ತರಕಾರಿಗಳನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಹಂಚಿಕೊಂಡ ವೀಡಿಯೊವೊಂದರಲ್ಲಿ, ಅವರು ಸೋರೆಕಾಯಿ ತರಕಾರಿಯ ಪ್ರಯೋಜನಗಳನ್ನು ವಿವರಿಸಿದ್ದಾರೆ. ಸೋರೆಕಾಯಿಯನ್ನು ಕೇವಲ ಒಂದಲ್ಲ, ಹಲವು ರೋಗಗಳಿಗೆ ಚಿಕಿತ್ಸೆಗೆ ಬಳಸಬಹುದು. ಹೈ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರಿಂದ ಹಿಡಿದು ರಕ್ತದೊತ್ತಡವನ್ನು ನಿಯಂತ್ರಿಸುವವರೆಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
ಸೋರೆಕಾಯಿ ಯಾವ ರೋಗಗಳನ್ನು ನಿಯಂತ್ರಿಸಬಹುದು, ಇದರಲ್ಲಿ ಏನೇನು ವಿಶೇಷ ಔಷಧೀಯ ಅಂಶಗಳಿವೆ, ನಮ್ಮ ಆಹಾರದಲ್ಲಿ ಸೋರೆಕಾಯಿ ಹೇಗೆಲ್ಲಾ ಬಳಸಬಹುದು ಎಂಬುದರ ವಿವರ ಇಲ್ಲಿದೆ.
ಸೋರೆಕಾಯಿ ನಮ್ಮ ಹೊಟ್ಟೆಗೆ ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಜೀರ್ಣಿಸಿಕೊಳ್ಳಲು ಸುಲಭವಾಗಿರುವ ಈ ತರಕಾರಿಯಲ್ಲಿ ಭರ್ಜರಿ ಪೋಷಕಾಂಶಗಳಿವೆ. 100 ಗ್ರಾಂ ಸೋರೆಕಾಯಿಯಲ್ಲಿ ಶೇಕಡಾ 92-96 ರಷ್ಟು ನೀರು ಇರುತ್ತದೆ. ಶೇ 14-15ರಷ್ಟು ಕ್ಯಾಲೋರಿ ಇರುತ್ತದೆ. 3.5 ಗ್ರಾಂ ಕಾರ್ಬೋಹೈಡ್ರೇಟ್‌ಗಳು, 0.51 ಗ್ರಾಂ ಫೈಬರ್ ಮತ್ತು 0.6 ಗ್ರಾಂ ಪ್ರೋಟೀನ್ ಇರುತ್ತದೆ. ಇದು ವಿಟಮಿನ್ ಸಿ ಅನ್ನು ಸಹ ಒಳಗೊಂಡಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಬಿ ಕಾಂಪ್ಲೆಕ್ಸ್, ಕಣ್ಣುಗಳಿಗೆ ಅಗತ್ಯವಾದ ವಿಟಮಿನ್ ಎ (ಬೀಟಾ-ಕ್ಯಾರೋಟಿನ್), ಪೊಟ್ಯಾಸಿಯಮ್ (ರಕ್ತದೊತ್ತಡ ನಿಯಂತ್ರಣಕ್ಕೆ 170-180 ಮಿಲಿಗ್ರಾಂ), ಕ್ಯಾಲ್ಸಿಯಂ (ಬಲವಾದ ಮೂಳೆಗಳಿಗೆ 2026 ಮಿಲಿಗ್ರಾಂ), ಮೆಗ್ನೀಸಿಯಮ್ (ಸ್ನಾಯುಗಳಿಗೆ 10-11 ಮಿಲಿಗ್ರಾಂ), ರಂಜಕ (12-13 ಮಿಲಿಗ್ರಾಂ), ಕಬ್ಬಿಣ (0.30-0.4 ಮಿಲಿಗ್ರಾಂ) ಮತ್ತು ಅಲ್ಪ ಸೋಡಿಯಂ (ಹೃದಯ ಸ್ನೇಹಿ) ಅನ್ನು ಸಹ ಒಳಗೊಂಡಿದೆ. ಇದಷ್ಟೇ ಅಲ್ಲದೇ, ಅನೇಕ ಆ್ಯಂಟಿ ಆಕ್ಸಿಡೆಂಟ್ಸ್ ಮತ್ತು ಪೋಷಕಾಂಶಗಳನ್ನು ಸಹ ಒಳಗೊಂಡಿರುತ್ತದೆ.
ಇದನ್ನೂ ಓದಿ: ರಕ್ತಹೀನತೆ ನಿವಾರಿಸುವ, ಮೈ ಬೆಚ್ಚಗಾಗಿಸುವ ನೈಸರ್ಗಿಕ ವಿಧಾನಗಳು: ಬಾಬಾ ರಾಮದೇವ್ ಶಿಫಾರಸು
ಯೋಗ ಗುರು ಬಾಬಾ ರಾಮ್‌ದೇವ್ ಅವರ ಪ್ರಕಾರ, ಸೋರೆಕಾಯಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಅಥವಾ ನಿವಾರಿಸುವಲ್ಲಿ ಅತ್ಯಂತ ಪ್ರಯೋಜನಕಾರಿಯಾಗಿದೆ. ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ, ಅದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಬಹುದು. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿರುವ ಜನರು ಸಹ ಇದನ್ನು ತಿನ್ನುವುದರಿಂದ ಪ್ರಯೋಜನ ಪಡೆಯಬಹುದು. ಸೋರೆಕಾಯಿಯನ್ನು ಸರಿಯಾದ ರೀತಿಯಲ್ಲಿ ಸೇವಿಸುವುದರಿಂದ ಮೂತ್ರಪಿಂಡ ಮತ್ತು ಹೊಟ್ಟೆಯ ಕಾಯಿಲೆಗಳ ಅಪಾಯವನ್ನೂ ಕಡಿಮೆ ಮಾಡಬಹುದು. ಹೊಟ್ಟೆಯ ಸಮಸ್ಯೆಗಳಿರುವ ಜನರು ಖಂಡಿತವಾಗಿಯೂ ಸೋರೆಕಾಯಿಯನ್ನು ತಿನ್ನಬೇಕು ಎಂದು ಬಾಬಾ ರಾಮ್‌ದೇವ್ ಹೇಳುತ್ತಾರೆ.
ಬಾಬಾ ರಾಮದೇವ್ ಪ್ರಕಾರ ಸೋರೆಕಾಯಿ ಕೇವಲ ತರಕಾರಿಯಲ್ಲ, ಅದು ಪ್ರಬಲ ಔಷಧ. ಸೋರೆಕಾಯಿಯನ್ನು ದೇವರ ಪ್ರಸಾದವಾಗಿ ಮತ್ತು ಪ್ರಮುಖ ಔಷಧವಾಗಿ ತಿನ್ನಲು ಅವರು ಶಿಫಾರಸು ಮಾಡುತ್ತಾರೆ, ಏಕೆಂದರೆ ಇದು ಅದರ ರುಚಿ ಮತ್ತು ಔಷಧೀಯ ಗುಣಗಳನ್ನು ಹೆಚ್ಚಿಸುತ್ತದೆ. ಸೋರೆಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ವಿವಿಧ ಕಾಯಿಲೆಗಳು ಸುಧಾರಿಸಬಹುದು. ಈ ರೀತಿಯಾಗಿ, ನೀವು ಆರೋಗ್ಯಕರ ಜೀವನವನ್ನು ನಡೆಸಬಹುದು.
ಹುರಿದ ಸೋರೆಕಾಯಿ: ನೀವು ಸೋರೆಕಾಯಿಯನ್ನು ಸರಳ ತರಕಾರಿಯಾಗಿ ತಿನ್ನಬಹುದು. ಸ್ವಲ್ಪ ಎಣ್ಣೆಯಲ್ಲಿ ಸೋರೆಕಾಯಿ ತುಂಡುಗಳನ್ನು ಹುರಿದು, ಅದಕ್ಕೆ ಕೆಲವು ಮಸಾಲೆಗಳನ್ನು ಸೇರಿಸಿ. ಇದು ತೂಕ ನಷ್ಟ ಮತ್ತು ಎಸಿಡಿಟಿ ಅಥವಾ ಎದೆಯುರಿಯಿಂದ ಪರಿಹಾರ ಸೇರಿದಂತೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಇದಕ್ಕೆ ಪ್ರೋಟೀನ್ ಅಂಶ ಸೇರ್ಪಡೆ ಮಾಡಬೇಕೆಂದರೆ ಚನಾ ಡಾಲ್ (ಕಡಲೆಕಾಳು) ಅನ್ನೂ ಸೇರಿಸಬಹುದು. ಈ ತಿನಿಸಿನಲ್ಲಿ ಪ್ರೋಟೀನ್ ಮತ್ತು ಫೈಬರ್‌ನ ಅತ್ಯುತ್ತಮ ಕಾಂಬಿನೇಶನ್ ಸಿಗುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಮೈ ಬೆಚ್ಚಗಿಡುವ ಕಾಕಡ ಸಿಂಗಿ; ಆಯುರ್ವೇದ ಔಷಧ ಬಗ್ಗೆ ಬಾಬಾ ರಾಮದೇವ್ ಮಾಹಿತಿ
ಸೋರೆಕಾಯಿ ಸೂಪ್: ಚಳಿಗಾಲದಲ್ಲಿ ಮೈ ಬೆಚ್ಚಗಾಗಿಸಲು ಸೋರೆಕಾಯಿ ಸೂಪ್ ಕುಡಿಯಬಹುದು. ಇದು ಫೈಬರ್‌ನ ಉತ್ತಮ ಮೂಲವಾಗಿದೆ ಮತ್ತು ಜೀರ್ಣಿಸಿಕೊಳ್ಳಲು ಸುಲಭ. ಇದು ಹೊಟ್ಟೆ ಮತ್ತು ಇತರ ಅಂಗಗಳನ್ನು ಡೀಟಾಕ್ಸಿಫೈಗೊಳಿಸುತ್ತದೆ..
ಸೋರೆಕಾಯಿ ರಸ: ಇತ್ತೀಚಿನ ದಿನಗಳಲ್ಲಿ ಹಸಿರು ತರಕಾರಿ ರಸಗಳನ್ನು ಕುಡಿಯುವ ಪ್ರವೃತ್ತಿ ಗಮನಾರ್ಹವಾಗಿ ಹೆಚ್ಚಾಗಿದೆ. ಇದರಲ್ಲಿ ಹಸಿ ಸೋರೆಕಾಯಿ ರಸವೂ ಸೇರಿದೆ. ಹಸಿ ಸೋರೆಕಾಯಿಯನ್ನು ಪುಡಿಮಾಡಿ, ಸೋಸಿ, ಸರಿಯಾದ ಪ್ರಮಾಣದಲ್ಲಿ ಪ್ರತಿದಿನ ಕುಡಿಯಿರಿ. ಇದು ಮೂತ್ರಪಿಂಡ ಮತ್ತು ಯಕೃತ್ತನ್ನು ನಿರ್ವಿಷಗೊಳಿಸುತ್ತದೆ. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವುದರ ಜೊತೆಗೆ, ಇದು ತೂಕ ಇಳಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ.
ಇನ್ನಷ್ಟು ಲೈಫ್ಸ್ಟೈಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ