ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ ಅಥವಾ ಒಗಟಿನ ಆಟಗಳು ಬಹಳಷ್ಟು ಜನಪ್ರಿಯವಾಗುತ್ತಿದೆ. ಈ ಬ್ರೈನ್ ಟೀಸರ್‌ಗಳು ಕೇವಲ ಮೆದುಳಿಗೆ ಮಾತ್ರವಲ್ಲದೇ ಬುದ್ಧಿವಂತಿಕೆಗೂ ಸವಾಲೆಸುಗುತ್ತದೆ. ಮೇಲ್ನೋಟಕ್ಕೆ ಈ ಕೆಲವು ಪ್ರಶ್ನೆಗಳು ಟ್ರಿಕ್ಕಿ ಎನಿಸಿದರೂ ಉತ್ತರವು ಅಷ್ಟೇ ಸುಲಭವಾಗಿರುತ್ತದೆ. ಇಂತಹ ಒಗಟಿನ ಚಿತ್ರಗಳು ಬುದ್ಧಿವಂತಿಕೆಗೆ ಸವಾಲು ಹಾಕುವಂತಿರುತ್ತದೆ. ಇದೀಗ ಬ್ರೈನಿ ಕ್ವಿಜ್ ಹೆಸರಿನ ಖಾತೆಯಲ್ಲಿ ಈ ಒಗಟಿನ ಪ್ರಶ್ನೆಗಳನ್ನು ಶೇರ್ ಮಾಡಿಕೊಳ್ಳಲಾಗಿದೆ.
ಇದರಲ್ಲಿ 20 ವರ್ಷಗಳ ಹಿಂದೆ, ನನ್ನ ವಯಸ್ಸು 20 ಆಗಿತ್ತು. ಆದರೆ 20 ವರ್ಷಗಳ ನಂತರ, ನನ್ನ ವಯಸ್ಸು ಎಷ್ಟು?” ಎನ್ನುವ ಒಗಟಿನ ಪ್ರಶ್ನೆಯಿದೆ. ಈ ಪೋಸ್ಟ್ 2000 ಅಧಿಕ ವೀಕ್ಷಣೆಗಳನ್ನು ಕಂಡಿದ್ದ 100 ಕ್ಕೂ ಹೆಚ್ಚು ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, “ನಿಮಗೆ 60 ವರ್ಷ! ಗಣಿತ ಎಂದಿಗೂ ಸುಳ್ಳಲ್ಲ ಎಂದಿದ್ದಾರೆ.
ಮತ್ತೊಬ್ಬರು, “ಪ್ರಶ್ನೆಯನ್ನು ರೂಪಿಸಿದ ವಿಧಾನದಿಂದಾಗಿ ಈ ಒಗಟನ್ನು ಟ್ರಿಕ್ಕಿ ಮಾಡುತ್ತದೆ, ಆದರೆ ನೀವು ತಾರ್ಕಿಕವಾಗಿ ಯೋಚಿಸಿದರೆ ಉತ್ತರ ನೇರವಾಗಿರುತ್ತದೆ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು,” ಈ ಒಗಟನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ನಾನು ಎರಡು ಬಾರಿ ಓದಬೇಕಾಯಿತು, ಅದ್ಭುತ ಒಗಟು!” ಎಂದಿದ್ದಾರೆ. ಈ ಒಗಟಿನ ಪ್ರಶ್ನೆಗೆ ಹೀಗೆ ನೂರಾರು ಕಾಮೆಂಟ್ ಗಳು ಬಂದಿದೆ.
ಇದನ್ನೂ ಓದಿ: 2050ಕ್ಕೆ ಮುಸ್ಲಿಂ ರಾಷ್ಟ್ರವಾಗಿ ಹೊರಹೊಮ್ಮಲಿದೆ ಭಾರತ, ಹಿಂದೂತ್ವ ವಿಶ್ವದ 3ನೇ ಅತಿದೊಡ್ಡ ಧರ್ಮ: ವರದಿಯಲ್ಲಿ ಬಹಿರಂಗ
Your Brain TEST ❓ Quickly Answer 🤔 pic.twitter.com/yTTdRS4pP3
— Brainy quiz (@brainyquiz_) December 23, 2024
ಎಷ್ಟೇ ತಲೆ ಕೆಡಿಸಿಕೊಂಡರೂ ಈ ಒಗಟಿನ ಉತ್ತರವನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲವೇ. ಹಾಗಾದ್ರೆ ಹೆಚ್ಚು ಚಿಂತಿಸಬೇಡಿ 20 ವರ್ಷಗಳ ಹಿಂದೆ, ನನ್ನ ವಯಸ್ಸು 20 ಆಗಿತ್ತು. ಆದರೆ 20 ವರ್ಷಗಳ ನಂತರ, ನನ್ನ ವಯಸ್ಸು ಎಷ್ಟು?” ಎನ್ನುವ ಪ್ರಶ್ನೆಯ ಉತ್ತರ ಬಲು ಸುಲಭ. ಪ್ರಸ್ತುತ ಆ ವ್ಯಕ್ತಿಗೆ 40 ವರ್ಷ ಆಗಿದ್ದು, 20 ವರ್ಷಗಳ ನಂತರ ಆತನ ವಯಸ್ಸು 60 ವರ್ಷಗಳಾಗಿರುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ