
ಚಿಕನ್ (Chicken) ಇಲ್ಲದೆ ನಾನ್‌ವೆಜ್ ಪ್ರಿಯರಿಗೆ ಭಾನುವಾರ ಪರಿಪೂರ್ಣ ಆಗೋದೇ ಇಲ್ಲ. ಚಿಕನ್ ಫ್ರೈ, ಬಿರಿಯಾನಿ, ಚಿಕನ್ ಸೂಪ್ ಅಂತೆಲ್ಲಾ ವೆರೈಟಿ ಅಡುಗೆಗಳನ್ನು ಮಾಡಿ ಸವಿಯುತ್ತಾರೆ. ಇದರಲ್ಲಿ ಕೆಲವರು ಬ್ರಾಯ್ಲರ್ ಕೋಳಿಯನ್ನು ತಿಂದ್ರೆ, ಇನ್ನೂ ಅನೇಕರು ನಾಟಿ ಕೋಳಿಯನ್ನು ತಿನ್ನಲು ಇಷ್ಟಪಡುತ್ತಾರೆ. ಈಗಂತೂ ಹೆಚ್ಚಾಗಿ ಬ್ರಾಯ್ಲರ್ ಕೋಳಿಗಳನ್ನೇ ಬಳಸಲಾಗುತ್ತದೆ. ಆದರೆ ಇವೆರಡರಲ್ಲಿ ಯಾವುದರ ಸೇವನೆ ಆರೋಗ್ಯಕ್ಕೆ ಉತ್ತಮ, ಯಾವುದರಲ್ಲಿ ಪೌಷ್ಟಿಕಾಂಶ ಹೆಚ್ಚಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಬ್ರಾಯ್ಲರ್ ಕೋಳಿಗಳು ಕಡಿಮೆ ಬೆಲೆಗೆ ಲಭ್ಯವಿದೆ ನಿಜ. ಆದರೆ ಇವುಗಳನ್ನು ಕೃತಕವಾಗಿ ಬೆಳೆಸಲಾಗುತ್ತದೆ. ಇವುಗಳ ಸಾಕಾಣೆಯ ಸಮಯದಲ್ಲಿ ಇವುಗಳಿಗೆ ಹಾರ್ಮೋನು, ಪ್ರತಿಜೀವಕಗಳನನ್ನು ಬಳಸಲಾಗುತ್ತದೆ. ಆದ್ದರಿಂದ ಇದನ್ನು ಹೆಚ್ಚು ಸೇವನೆ ಮಾಡುವ ಜನ ಹೆಚ್ಚಿನ ಕೊಲೆಸ್ಟ್ರಾಲ್, ರೋಗ ನಿರೋಧಕ ಶಕ್ತಿಯ ಕೊರತೆ, ಹಾರ್ಮೋನು ಅಸಮತೋಲನ, ಬ್ಯಾಕ್ಟೀರಿಯಾ ಅಸಮತೋಲನದಂತಹ ಅನೇಕ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ಈ ಬ್ರಾಯ್ಲರ್‌ಗಳಿಗೆ ಹೋಲಿಸಿದರೆ ನಾಟಿ ಕೋಳಿ ಆರೋಗ್ಯಕ್ಕೆ ಉತ್ತಮ. ಗ್ರಾಮೀಣ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆಸಲಾಗುವ ನಾಟಿ ಕೋಳಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ.
ನಿಸ್ಸಂದೇಹವಾಗಿ, ನಾಟಿ ಕೋಳಿ ಬ್ರಾಯ್ಲರ್ ಕೋಳಿಗಿಂತ ಉತ್ತಮವಾಗಿದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಈ ತರಕಾರಿಗಳನ್ನು ಫ್ರಿಡ್ಜ್‌ನಲ್ಲಿ ಇಡುವ ತಪ್ಪನ್ನು ಮಾಡಲೇಬೇಡಿ
ನಾಟಿಕೋಳಿ ಮಾಂಸವು ಪ್ರೋಟೀನ್, ವಿಟಮಿನ್ ಬಿ-ಕಾಂಪ್ಲೆಕ್ಸ್, ಡಿ, ಇ, ಸತು, ಕಬ್ಬಿಣ ಮತ್ತು ಸೆಲೆನಿಯಮ್‌ನಂತಹ ಖನಿಜಗಳಿಂದ ಸಮೃದ್ಧವಾಗಿದೆ. ಇವು ಸ್ನಾಯುಗಳು, ಮೂಳೆಗಳು, ರೋಗನಿರೋಧಕ ಶಕ್ತಿ ಮತ್ತು ಚಯಾಪಚಯ ಕ್ರಿಯೆಯನ್ನು ಬಲಪಡಿಸುತ್ತವೆ. ಇದರಲ್ಲಿ ಕೊಬ್ಬು ಕಡಿಮೆ. ಪೋಷಕಾಂಶಗಳು ಅಧಿಕವಾಗಿರುತ್ತದೆ. ಇದು ತೂಕ ನಿರ್ವಹಣೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಒಮೆಗಾ-3,6 ಕೊಬ್ಬಿನಾಮ್ಲಗಳಿವೆ. ಇದರಲ್ಲಿ ಕೊಬ್ಬಿನ ಅಂಶವೂ ಕಡಿಮೆ. ಇದು ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿರುವ ಕಬ್ಬಿಣವು ರಕ್ತಹೀನತೆಯನ್ನು ತಡೆಯುತ್ತದೆ ಎಂದು ತಜ್ಞರು ಹೇಳುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ