Cancer fatigue treatment: ಕ್ಯಾನ್ಸರ್​ನಿಂದ ಆಯಾಸವೋ ಆಯಾಸ, ಇದನ್ನು ಹೇಗೆ ನಿಭಾಯಿಸುವುದು? ಇಲ್ಲಿದೆ ತಜ್ಞರ ಸಲಹೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 13, 2023 | 1:23 PM

ಕ್ಯಾನ್ಸರ್ ಸಂಬಂಧಿತ ಆಯಾಸವು ನಿಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಬಹುದು ಮತ್ತು ಕೆಲವು ಜನರು ಕ್ಯಾನ್ಸರ್​​ನಿಂದ ಜಯಿಸಿದ ಬಳಿಕವೂ ತಿಂಗಳುಗಳು ಅಥವಾ ವರ್ಷಗಳವರೆಗೆ ಈ ರೀತಿಯ ಆಯಾಸವನ್ನು ಅನುಭವಿಸಬಹುದು. ಕ್ಯಾನ್ಸರ್ ಆಯಾಸದ ಬಗ್ಗೆ ನೀವು ತಿಳಿದುಕೊಳ್ಳಿ.

Cancer fatigue treatment: ಕ್ಯಾನ್ಸರ್​ನಿಂದ ಆಯಾಸವೋ ಆಯಾಸ, ಇದನ್ನು ಹೇಗೆ ನಿಭಾಯಿಸುವುದು? ಇಲ್ಲಿದೆ ತಜ್ಞರ ಸಲಹೆ
ಸಾಂದರ್ಭಿಕ ಚಿತ್ರ
Image Credit source: google image
Follow us on

ಕ್ಯಾನ್ಸರ್ ಸಂಬಂಧಿತ ಆಯಾಸವು ನಿಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಬಹುದು ಮತ್ತು ಕೆಲವು ಜನರು ಕ್ಯಾನ್ಸರ್​​ನಿಂದ ಜಯಿಸಿದ ಬಳಿಕವೂ ತಿಂಗಳುಗಳು ಅಥವಾ ವರ್ಷಗಳವರೆಗೆ ಈ ರೀತಿಯ ಆಯಾಸವನ್ನು ಅನುಭವಿಸಬಹುದು. ಕ್ಯಾನ್ಸರ್ ಆಯಾಸದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಹಾಗೂ ನೀವು ಅದನ್ನು ಹೇಗೆ ಜಯಿಸಬಹುದು ಎಂಬುದರ ಕುರಿತು ತಜ್ಞರ ಸಲಹೆಗಳು ಇಲ್ಲಿವೆ. ಕ್ಯಾನ್ಸರ್ ಮತ್ತು ಕ್ಯಾನ್ಸರ್ ಚಿಕಿತ್ಸೆಯು ಒಬ್ಬರ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರಬಹುದು. ಅವು ಕ್ಯಾನ್ಸರ್ ಸಂಬಂಧಿತ ಆಯಾಸಕ್ಕೆ ಕಾರಣವಾಗಬಹುದು. ನೀವು ಸಾಕಷ್ಟು ವಿಶ್ರಾಂತಿ ಪಡೆಯುತ್ತಿದ್ದರೂ ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಬಳಲಿಕೆಗೆ ಒಳಗಾಗಬಹುದು, ಇದು ನಿಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಬಹುದು.

ಕ್ಯಾನ್ಸರ್ ಸಂಬಂಧಿತ ಆಯಾಸವು ಕ್ಯಾನ್ಸರ್ ಮತ್ತು ಅದರ ಚಿಕಿತ್ಸೆಯ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಕ್ಯಾನ್ಸರ್ ಆಯಾಸದಿಂದ ಬಳಲುತ್ತಿರುವ ಜನರು ಹಾಸಿಗೆಯಿಂದ ಏಳಲು, ನಡೆಯಲು, ಕುಳಿತುಕೊಳ್ಳಲು, ತಿನ್ನಲು ಮತ್ತು ಮಲಗಲು ಕಷ್ಟಪಡುತ್ತಾರೆ. ಆಯಾಸವು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುತ್ತದೆ ಮತ್ತು ರೋಗಿಯ ಒಟ್ಟಾರೆ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ.

ಏಷ್ಯನ್ ಇನ್‍ಸ್ಟಿಟ್ಯೂಟ್ ಕನ್ಸಲ್ಟೆಂಟ್ ಮೆಡಿಕಲ್ ಆಂಕೊಲಾಜಿಸ್ಟ್ ಮತ್ತು ಹೆಮಾಟೊ-ಆಂಕೊಲಾಜಿಸ್ಟ್ ಡಾ. ಸುಹಾನ್ ಆಗ್ರೆ ಹೇಳುವ ಪ್ರಕಾರ ಈ ಆಯಾಸವು ಹಲವಾರು ತಿಂಗಳುಗಳು ಅಥವಾ ವರ್ಷಗಳವರೆಗೆ ಕಂಡುಬರುತ್ತದೆ. ಕ್ಯಾನ್ಸರ್ ಅಥವಾ ಕ್ಯಾನ್ಸರ್ ಚಿಕಿತ್ಸೆಯಿಂದ ದಣಿದ ಕೆಲವರು ತಮ್ಮ ದೈನಂದಿನ ಕೆಲಸಗಳನ್ನು ಸುಲಭವಾಗಿ ಮಾಡಲು ಸಾಧ್ಯವಾಗುವುದಿಲ್ಲ, ಅವರು ತಮ್ಮ ಮನಸ್ಥಿತಿಯಲ್ಲಿ ಏರುಪೇರನ್ನು (ಮೂಡ್ ಸ್ವಿಂಗ್) ಹೊಂದಿರುತ್ತಾರೆ. ಇವರಿಗೆ ಚಿಕಿತ್ಸೆಯನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ. ಹತಾಶೆ, ಖಿನ್ನತೆ ಮತ್ತು ಆತಂಕವನ್ನು ಅನುಭವಿಸುತ್ತಾರೆ. ಇದಲ್ಲದೆ, ಕ್ಯಾನ್ಸರ್ ಸಂಬಂಧಿತ ಆಯಾಸವು ಅನೇಕ ಜನರಲ್ಲಿ ಸಾಮಾನ್ಯವಾಗಿದೆ.

ಇದನ್ನು ಓದಿ:Liver Cancer: ಲಿವರ್ ಕ್ಯಾನ್ಸರ್​ನ ವಿಧಗಳು, ಲಕ್ಷಣಗಳು, ಚಿಕಿತ್ಸೆಗಳ ವಿವರ ಇಲ್ಲಿದೆ

ಆರೋಗ್ಯ ತಜ್ಞರು ಕ್ಯಾನ್ಸರ್ ಆಯಾಸದ ಕಾರಣಗಳ ಬಗ್ಗೆ ಮಾತನಾಡುತ್ತಾ, ಕಿಮೊಥೆರಪಿ, ರೇಡಿಯೇಶನ್ ಥೆರಪಿ, ಇಮ್ಯುನೊಥೆರಪಿ ಮತ್ತು ಶಸ್ತ್ರಚಿಕಿತ್ಸೆಯಂತಹ ಕ್ಯಾನ್ಸರ್ ಚಿಕಿತ್ಸೆಗಳು ಆಯಾಸವನ್ನು ಉಂಟುಮಾಡಬಹುದು ಎಂದು ಹೇಳಿದ್ದಾರೆ. ರೋಗನಿರೋಧಕ ವ್ಯವಸ್ಥೆಯು ರೋಗದ ವಿರುದ್ಧ ಹೋರಾಡಲು ಸಾಧ್ಯವಾಗದ ಕಾರಣ ಎಲ್ಲಾ ರೀತಿಯ ಕ್ಯಾನ್ಸರ್ ಮತ್ತು ಕ್ಯಾನ್ಸರ್ ಚಿಕಿತ್ಸೆಗಳು ನಿಮ್ಮನ್ನು ಆಯಾಸಕ್ಕೆ ಗುರಿಯಾಗಿಸಬಹುದು ಎಂದು ಡಾ. ಸುಹಾಸ್ ಆಗ್ರೆ ಹೇಳುತ್ತಾರೆ.

ನೀವು ಕ್ಯಾನ್ಸರ್ ಆಯಾಸವನ್ನು ಹೇಗೆ ಜಯಿಸಬಹುದು ಎಂದರೆ ನೀವು ಕ್ಯಾನ್ಸರ್ ಆಯಾಸವನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ, ನೋವು, ವಾಕರಿಕೆ ಮತ್ತು ಖಿನ್ನತೆಯಂತಹ ರೋಗಲಕ್ಷಣಗಳನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುವ ಉಪಶಾಮಕ ಆರೈಕೆ ವೃತ್ತಿಪರರನ್ನು ಸಂಪರ್ಕಿಸುವುದು ಒಳ್ಳೆಯದು. ವಿವಿಧ ಅಧ್ಯಯನಗಳ ಪ್ರಕಾರ, ವ್ಯಾಯಾಮವು ನಿಮ್ಮ ಮನಸ್ಸು ಮತ್ತು ದೇಹವನ್ನು ವಿಶ್ರಾಂತಿ ಮಾಡುತ್ತದೆ. ಇದು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಯೋಗ, ನಡಿಗೆಯಂತಹ ಲಘು ವ್ಯಾಯಾಮದೊಂದಿಗೆ ಇತರ ದೈಹಿಕ ಚಟುವಟಿಕೆಯು ನಿಮಗೆ ನಿದ್ರೆ ಮತ್ತು ಉತ್ತಮ ಭಾವನೆಯನ್ನು ನೀಡುತ್ತದೆ. ಕಾಗ್ನಿಟಿವ್-ಬಿಹೇವಿಯರ್ ಥೆರಪಿ ಅಸ್ಥಿರ ಭಾವನೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಥೆರಪಿ ಒತ್ತಡವನ್ನು ನಿರ್ವಹಿಸಲು ಮತ್ತು ನಿದ್ರೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಮತೋಲಿತ ಆಹಾರ ಕ್ರಮವನ್ನು ಪಾಲಿಸಬೇಕು ಇದು ನಿಮಗೆ ಶಕ್ತಿಯನ್ನು ನೀಡುತ್ತದೆ. ಹಾಗೂ ಮನಸ್ಸನ್ನು ಶಾಂತಗೊಳಿಸಲು ಧ್ಯಾನ, ಮಸಾಜ್, ಸಂಗೀತ ಚಿಕಿತ್ಸೆಯನ್ನು ಆರಿಸಿಕೊಳ್ಳುವುದು ಅತ್ಯಗತ್ಯವಾಗಿರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:19 pm, Fri, 13 January 23