Food Tips: ಬೆಳಗ್ಗೆ ಚಹಾ ಅಥವಾ ಟೀಯ ಬದಲು ಬಾಳೆಹಣ್ಣಿನ ಸೇವನೆ ಉತ್ತಮ: ತಜ್ಞರ ಸಲಹೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 12, 2023 | 6:30 PM

ಹೆಚ್ಚಿನ ಜನರು ಬೆಳಿಗ್ಗೆ ಒಂದು ಕಪ್ ಚಹಾ ಅಥವಾ ಕಾಫಿ ಕುಡಿಯುತ್ತಾರೆ. ಆದರೆ ಅದರ ಬದಲಿಗೆ ಬಾಳೆಹಣ್ಣು, ನೆನೆಸಿದ ಬಾದಮಿ ಅಥವಾ ನೆನೆಸಿದ ಒಣದ್ರಾಕ್ಷಿಗಳನ್ನು ಸೇವಿಸಲು ತಜ್ಞರು ಸಲಹೆ ನೀಡುತ್ತಾರೆ.

Food Tips: ಬೆಳಗ್ಗೆ ಚಹಾ ಅಥವಾ ಟೀಯ ಬದಲು ಬಾಳೆಹಣ್ಣಿನ ಸೇವನೆ ಉತ್ತಮ: ತಜ್ಞರ ಸಲಹೆ
ಸಾಂದರ್ಭಿಕ ಚಿತ್ರ
Image Credit source: google image
Follow us on

ಹೆಚ್ಚಿನ ಜನರು ಬೆಳಿಗ್ಗೆ ಒಂದು ಕಪ್ ಚಹಾ ಅಥವಾ ಕಾಫಿ (Tea or coffee) ಕುಡಿಯುತ್ತಾರೆ. ಆದರೆ ಅದರ ಬದಲಿಗೆ ಬಾಳೆಹಣ್ಣು, (banana) ನೆನೆಸಿದ ಬಾದಮಿ ಅಥವಾ ನೆನೆಸಿದ ಒಣದ್ರಾಕ್ಷಿಗಳನ್ನು ಸೇವಿಸಲು ತಜ್ಞರು ಸಲಹೆ ನೀಡುತ್ತಾರೆ. ನೀವು ಬೆಳಗ್ಗೆ ಎದ್ದಾಗ ಏನು ತಿನ್ನುತೀರಿ ಅಥವಾ ಕುಡಿಯುತ್ತೀರಿ ಎಂಬುದು ನಿಜವಾಗಿಯೂ ಮುಖ್ಯವೆ? ಹೆಚ್ಚಿನ ಆರೋಗ್ಯ ತಜ್ಞರು ಮತ್ತು ಪೌಷ್ಟಿಕತಜ್ಞರು ದಿನದ ಮೊದಲ ಊಟವು ದಿನವನ್ನು ತೆಗೆದುಕೊಳ್ಳಲು ಸಾಕಷ್ಟು ಶಕ್ತಿಯನ್ನು ನೀಡುತ್ತದೆ ಎಂದು ಭಾವಿಸುತ್ತಾರೆ. ಕೊಬ್ಬು ಮತ್ತು ಪ್ರೋಟೀನ್‍ಗಳಿಂದ ಸಮೃದ್ಧವಾಗಿರುವು ಬೆಳಗ್ಗಿನ ಉಪಹಾರವು ದೇಹದಲ್ಲಿ ಕೆಟ್ಟ ಕೊಲೆಕ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಮತ್ತು ಅನಗತ್ಯ ಸಿಹಿ ಕಡುಬಯಕೆಗಳಿಂದ ನಿಮ್ಮನ್ನು ದೂರವಿರಿಸುತ್ತದೆ ಎಂದು ಅಧ್ಯಯನಗಳು ಸೂಚಿಸಿವೆ.

ಆದರೆ ನೀವು ಚಹಾ ಅಥವಾ ಕಾಫಿಯೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸುತ್ತಿದ್ದರೆ, ಪೌಷ್ಟಿಕ ತಜ್ಞೆ ರುಜುತಾ ದಿವೇಕರ್ ನಿಮ್ಮ ಆರೋಗ್ಯಕ್ಕೆ ಉತ್ತಮವಾದ ಆಯ್ಕೆಯನ್ನು ನೀಡುತ್ತಾರೆ. ತನ್ನ ಇತ್ತೀಚಿನ ಇನ್‍ಸ್ಟಾಗ್ರಾಂ ಪೋಸ್ಟ್‍ನಲ್ಲಿ ಚಹಾ ಅಥವಾ ಕಾಫಿಯ ಬದಲಿಗೆ ಬಾಳೆಹಣ್ಣು ಅಥವಾ ನೆನೆಸಿದ ಬಾದಾಮಿ ಅಥವಾ ನೆನೆಸಿದ ಒಣದ್ರಾಕ್ಷಿಗಳೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸುವ ಕುರಿತು ಅವರು ಹಂಚಿಕೊಂಡಿದ್ದಾರೆ.

ನೀವು ಜೀರ್ಣಕ್ರಿಯೆ, ಗ್ಯಾಸ್‍ನಿಂದ ಬಳಲುತ್ತಿದ್ದರೆ ಅಥವಾ ನಿಮಗೆ ಶಕ್ತಿ ಕೊರತೆಯಿದ್ದರೆ ಅಥವಾ ಊಟದ ನಂತರ ಕಡುಬಯಕೆ ಆಗುತ್ತಿದ್ದರೆ, ಮಲಬದ್ಧತೆಯಿದ್ದರೆ ಬಾಳೆಹಣ್ಣು ತಿನ್ನುವ ಮೂಲಕ ದಿನವನ್ನು ಪ್ರಾರಂಭಿಸಿ. ನೀವು ಬಾಳೆಹಣ್ಣನ್ನು ತಿನ್ನಲು ಇಷ್ಟಪಡದಿದ್ದರೆ ಯಾವುದಾದರೂ ಸೀಸನಲ್ ಹಣ್ಣನ್ನು ತಿನ್ನಬಹುದು ಎಂದು ಅವರು ಇನ್ಟಾಗ್ರಾಮ್ ಪೋಸ್ಟ್​ನಲ್ಲಿ ಹೇಳಿದ್ದಾರೆ.

ಇದನ್ನು ಓದಿ:Health Tips: ಈ ಆರೋಗ್ಯ ಸಮಸ್ಯೆ ಹೊಂದಿರುವವರು ಟೊಮೆಟೊ ಸೇವನೆ ನಿರಾಕರಿಸುವುದು ಉತ್ತಮ

ಬಾಳೆಹಣ್ಣು- ಜೀರ್ಣಕ್ರಿಯೆಯ ಸಮಸ್ಯೆ ಇರುವವರು ಅಥವಾ ಊಟದ ನಂತರ ಸಿಹಿ ತಿನ್ನಲು ಕಡುಬಯಕೆ ಆಗುವವರು ಬಾಳೆ ಹಣ್ಣು ತಿನ್ನಬೇಕು. ಹಾಗೂ ತಾಜಾ, ಸ್ಥಳೀಯ ತಳಿಗಳನ್ನು ಖರೀದಿಸಿದರೆ ಉತ್ತಮ. ವಾರಕ್ಕೆ ಕನಿಷ್ಟ 2-3 ಬಾರಿ ಖರೀದಿಸಿ ಮತ್ತು ಅದನ್ನು ತರಲು ಪ್ಲಾಸ್ಟಿಕ್ ಚೀಲದ ಬದಲು ಬಟ್ಟೆಯ ಚೀಲವನ್ನು ಉಪಯೋಗಿಸಿ ಎಂದು ಅವರು ಬರೆದಿದ್ದಾರೆ.

ನೆನೆಸಿದ ಒಣದ್ರಾಕ್ಷಿ- ನಿಮ್ಮ ಆರೋಗ್ಯದ ಸ್ಥಿತಿಯನ್ನು ಅವಲಂಬಿಸಿ ಮತ್ತೊಂದು ಆಯ್ಕೆ ನೆನೆಸಿದ ಒಣದ್ರಾಕ್ಷಿ. ನೀವು ಭಯಾನಕ PMS ಅಥವಾ ದಿನವಿಡೀ ಕಡಿಮೆ ಶಕ್ತಿ ಹೊಂದಿದ್ದರೆ ದಿನಕ್ಕೆ 6-7 ನೆನೆಸಿದ ದ್ರಾಕ್ಷಿ ತಿನ್ನಬೇಕು. ಅದರಲ್ಲೂ ಕಪ್ಪು ಒಣದ್ರಾಕ್ಷಿ ತುಂಬಾ ಉತ್ತಮ.

ನೆನೆಸಿದ ಬಾದಾಮಿ- ನೀವು ಇನ್ಸುಲಿನ್ ಪ್ರತಿರೋಧ, ಮಧುಮೇಹ, PCOD, ಕಡಿಮೆ ಫಲವತ್ತತೆ ಅಥವಾ ನಿದ್ರಾಹೀನತೆಯನ್ನು ಹೊಂದಿದ್ದರೆ 4-5 ನೆನೆಸಿಟ್ಟ ಬಾದಾಮಿ ತಿನ್ನುವುದು ಉತ್ತಮ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಎಂದು ರುಜುತಾ ದಿವೇಕರ್ ತಮ್ಮ ಇನ್ಟಾಗ್ರಾಮ್ ಪೋಸ್ಟ್​ನಲ್ಲಿ ಬರೆದಿದ್ದಾರೆ.

ಇದನ್ನು ಓದಿ: Weight Loss Tips: ಒಂದು ವಾರದಲ್ಲಿ ಒಂದು ಕೆಜಿ ತೂಕ ಇಳಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

ನಿಮ್ಮ ಬೆಳಗಿನ ದಿನಚರಿಯನ್ನು ಪಾಲಿಸಲು ರುಜುತಾ ದಿವೇಕರ್ ಅವರ ಇತರ ಸಲಹೆಗಳು:

1.ಉಪಹಾರ 10-15 ನಿಮಿಷಗಳ ಬಳಿಕ ಚಹಾ ಅಥವಾ ಕಾಫಿ ಸೇವಿಸಿದರೆ ಪರವಾಗಿಲ್ಲ.

2.ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರನ್ನು ಸೇವಿಸಿ ನಂತರ ಉಪಹಾರ ಮಾಡಿ.

3.ಉಪಹಾರವಾದ 10-15 ನಿಮಿಷಗಳ ಬಳಿಕ ನೀವು ವ್ಯಾಯಾಮ, ಯೋಗ ಇತ್ಯಾದಿಗಳನ್ನು ಮಾಡಬಹುದು.

4.ಒಣದ್ರಾಕ್ಷಿಯನ್ನು ನೆನೆಸಿಟ್ಟ ನೀರನ್ನು ಕುಡಿಯಬಹುದು

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:28 pm, Thu, 12 January 23