ಒಂದು ದೇಶವು ಅಭಿವೃದ್ಧಿಯಾಗಬೇಕಾದರೆ ಎಲ್ಲಾ ಇಲಾಖೆಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸಬೇಕು. ತಮ್ಮ ಕೆಲಸ ಕಾರ್ಯಕ್ರಮಗಳಲ್ಲಿ ಸಣ್ಣ ಪುಟ್ಟ ತಪ್ಪಾದರೂ ದೇಶದ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತವನ್ನು ತಂದೊಡ್ದುತ್ತದೆ. ಈ ಇಲಾಖೆಯು ತೆರಿಗೆ ಸಂಗ್ರಹಿಸಲು, ಕಳ್ಳಸಾಗಾಣಿಕೆ ತಡೆಗಟ್ಟಲು, ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಕೆಲಸವನ್ನು ಮಾಡುತ್ತದೆ. ತೆರಿಗೆಗಳ ಪಾವತಿ, ಆಮದು ಮತ್ತು ರಫ್ತುಗಳಿಗೆ ಸಂಬಂಧ ಪಟ್ಟ ನಿಯಮಗಳು ಸರಿಯಾಗಿ ಪಾಲನೆಯಾಗುತ್ತಿದೆಯೇ ಎನ್ನುವುದನ್ನು ಗಮನಿಸಿರುತ್ತದೆ. ಈ ಇಲಾಖೆಯ ನೌಕರರ ಕೆಲಸವನ್ನು ಶ್ಲಾಘಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಫೆಬ್ರವರಿ 24 ರಂದು ಇಡೀ ದೇಶಾದ್ಯಂತ ಕೇಂದ್ರ ಅಬಕಾರಿ ದಿನವನ್ನಾಗಿ ಆಚರಿಸುತ್ತ ಬರಲಾಗುತ್ತಿದೆ. ಈ ಅಬಕಾರಿ ಇಲಾಖೆಯ ನೌಕರರು ತಮ್ಮ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸುವಂತೆ ಉತ್ತೇಜಿಸಲು ಹಾಗೂ ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸುತ್ತಿರುವ ಇಲಾಖೆಯಲ್ಲಿರುವ ಅಧಿಕಾರಿಗಳನ್ನು ಗೌರವಿಸುವ ದಿನವು ಆಗಿದೆ.
ಕೇಂದ್ರ ಅಬಕಾರಿ ದಿನದಂದು 1994ರ ಫೆಬ್ರವರಿ 24 ರಂದು ಜಾರಿಗೆ ಬಂದ ಕೇಂದ್ರ ಅಬಕಾರಿ ಮತ್ತು ಉಪ್ಪು ಕಾಯಿದೆಯನ್ನು ನೆನಪಿಸುವ ಸಲುವಾಗಿ ಆಚರಿಸಲಾಗುತ್ತದೆ. ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಅಡಿಯಲ್ಲಿ ಸಂಸ್ಥೆಯ ಒಂದು ಭಾಗವಾಗಿದೆ ಈ ಹಿಂದೆ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯು ಈ ಹಿಂದೆ ಕೇಂದ್ರ ಅಬಕಾರಿ ಮತ್ತು ಸುಂಕ ಎಂದು ಕರೆಯಲಾಗುತ್ತಿತ್ತು. ಕಸ್ಟಮ್ ಮತ್ತು ಕೇಂದ್ರೀಯ ಅಬಕಾರಿ, ಕೇಂದ್ರ ಜಿಎಸ್ಟಿ ಇಲಾಖೆಯು ಸುಂಕ ಕಾನೂನುಗಳನ್ನು ಜಾರಿಗೊಳಿಸುವ ಜವಾಬ್ದಾರಿಯು ಈ ಇಲಾಖೆಯ ಮೇಲಿದೆ. ಈ ಇಲಾಖೆಯನ್ನು ಕಂದಾಯ ಇಲಾಖೆ, ಹಣಕಾಸು ಸಚಿವಾಲಯವು ನೋಡಿಕೊಳ್ಳುತ್ತವೆ.
ಇದನ್ನೂ ಓದಿ: ಕೈಯ ರಂಗು ಹೆಚ್ಚಿಸುವ ಮದರಂಗಿಯಲ್ಲಿದೆ ಔಷಧೀಯ ಗುಣ, ಇಲ್ಲಿದೆ ಸರಳ ಮನೆ ಮದ್ದು
ದೇಶದ ಕೈಗಾರಿಕಾ ಅಭಿವೃದ್ಧಿಯಲ್ಲಿ ಕೇಂದ್ರ ಅಬಕಾರಿ ಇಲಾಖೆ ಪ್ರಮುಖ ಪಾತ್ರ ವಹಿಸುತ್ತದೆ. ತೆರಿಗೆ ಲೆಕ್ಕಾಚಾರದಲ್ಲಿ ಸ್ವಲ್ಪ ಏರುಪೇರಾದರೂ ದೇಶದ ಆರ್ಥಿಕತೆಗೆ ನಷ್ಟವಾಗುತ್ತದೆ. ಹೀಗಾಗಿ ಕೇಂದ್ರ ಅಬಕಾರಿ ಇಲಾಖೆಯ ಅಧಿಕಾರಿಗಳ ಜವಾಬ್ದಾರಿಯು ದೊಡ್ಡ ಮಟ್ಟದಲ್ಲಿದೆ. ಇದೀಗ ತೆರಿಗೆ ಪಾವತಿಯನ್ನು ಸುಲಭಗೊಳಿಸಲು ಸಚಿವಾಲಯವು ತೆರಿಗೆ ವ್ಯವಸ್ಥೆಯನ್ನು ಸುಧಾರಿಸಿದ್ದು, ನೂತನ ತಂತ್ರಜ್ಞಾನವನ್ನು ಬಳಸಲಾಗಿದೆ. ಕೇಂದ್ರೀಯ ಅಬಕಾರಿ ದಿನದಂದು ‘ಕೇಂದ್ರೀಯ ಅಬಕಾರಿ ಮತ್ತು ಕಸ್ಟಮ್ಸ್ ಮಂಡಳಿಯ ಮಹತ್ವದ ಬಗ್ಗೆ ದೇಶದ ಜನತೆಗೆ ತಿಳಿಸಿಕೊಡುವುದಾಗಿದೆ. ಈ ಅಬಕಾರಿ ದಿನದಂದು, ಮಂಡಳಿಯಿಂದ ವಿಚಾರಗೋಷ್ಠಿಗಳು, ಕಾರ್ಯಾಗಾರಗಳು, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾಗೃತಿ ಕಾರ್ಯಕ್ರಮಗಳು, ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳು ನಡೆಯುತ್ತವೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ