ಕೈಯ ರಂಗು ಹೆಚ್ಚಿಸುವ ಮದರಂಗಿಯಲ್ಲಿದೆ ಔಷಧೀಯ ಗುಣ, ಇಲ್ಲಿದೆ ಸರಳ ಮನೆ ಮದ್ದು
ಕೈಕೆಂಪಾಗಿಸುವ ಮದರಂಗಿ ಎಂದರೆ ಎಲ್ಲರಿಗೂ ಇಷ್ಟ. ಪುರಾತನ ಕಾಲದಿಂದಲೂ ಮದರಂಗಿಯನ್ನು ದೇಹ ಸೌಂದರ್ಯ ಅಲಂಕಾರದಲ್ಲಿ ಬಳಕೆ ಮಾಡುತ್ತಾ ಬಂದಿದ್ದಾರೆ. ಆದರೆ ಇಂದು ಮಾರ್ಪಡು ಹೊಂದಿದ್ದು, ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಮೆಹೆಂದಿ ಉತ್ಪನ್ನಗಳನ್ನು ನೋಡಬಹುದು. ಆದರೆ ಹಳ್ಳಿ ಕಡೆಗಳಲ್ಲಿ ಸಿಗುವ ಈ ಮದರಂಗಿ ಎಲೆಯಲ್ಲಿ ಔಷಧೀಯ ಗುಣವನ್ನು ಹೊಂದಿದ್ದು ಆರೋಗ್ಯ ಸಮಸ್ಯೆಗಳಿಗೆ ಮನೆ ಮದ್ದಾಗಿದೆ.
ಮೆಹಂದಿ, ಗೋರಂಟಿ ಹೀಗೆ ನಾನಾ ಹೆಸರುಗಳಿಂದ ಕರೆಯುವ ಈ ಮದರಂಗಿ ಹೆಂಗಳೆಯರಿಗೆ ಬಲು ಪ್ರಿಯ. ಮಹಿಳೆಯರ ನೆಚ್ಚಿನ ಮದರಂಗಿಯು ಶುಭದ ಸೂಚಕವಾಗಿದೆ. ಹೀಗಾಗಿ ಶುಭಸಮಾರಂಭಗಳಾದ ಮದುವೆ, ಹಬ್ಬ ಹರಿದಿನಗಳಲ್ಲಿ ಹೆಂಗಳೆಯರು ಕೈತುಂಬಾ ಮೆಹೆಂದಿಯನ್ನು ಹಚ್ಚಿ ಖುಷಿ ಪಡುತ್ತಾರೆ. ಈ ಮದರಂಗಿ ಕೇವಲ ಅಲಂಕಾರಿ ಬಣ್ಣದ ಸಸ್ಯವಾಗದೇ, ಮನೆ ಮದ್ದಿನಲ್ಲಿ
* ಮೆಹಂದಿ ಸೊಪ್ಪನ್ನು ಅರೆದು ತಲೆಗೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ಸ್ನಾನ ಮಾಡಿದರೆ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ
* ಮೆಹಂದಿ ಎಲೆಯ ರಸವನ್ನು ಮೈಗೆ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ಸ್ನಾನ ಮಾಡಿದರೆ ಸೆಕೆ ಗುಳ್ಳೆಯ ಉರಿಯು ಕಡಿಮೆಯಾಗುತ್ತದೆ.
* ಬಾಯಿಹುಣ್ಣಿನ ಸಮಸ್ಯೆಗೆ ಒಂದೆರಡು ಮೆಹಂದಿ ಎಲೆಯನ್ನು ಬಾಯಲ್ಲಿ ಜಗಿಯುತ್ತಿದ್ದರೆ ಈ ಸಮಸ್ಯೆಯು ಗುಣಮುಖ ಕಾಣುತ್ತದೆ.
* ಮೆಹಂದಿ ಎಲೆಯ ರಸಕ್ಕೆ ಅರಶಿನ ಪುಡಿ, ಲಿಂಬೆಯ ರಸವನ್ನು ಸೇರಿಸಿ ಹಚ್ಚಿದರೆ ಚರ್ಮ ರೋಗಗಳು ಮತ್ತು ಚರ್ಮದ ಕಲೆಗಳು ಮಾಯವಾಗುತ್ತವೆ.
* ರಕ್ತಶುದ್ದಿಯಾಗಲು ಮೆಹಂದಿ ಎಲೆಯ ರಸವನ್ನು ಸೇವಿಸುತ್ತಿರಬೇಕು.
* ಅಂಗೈ, ಅಂಗಾಲು ಉರಿಗೆ ಮದರಂಗಿ ಸೊಪ್ಪನ್ನು ನುಣ್ಣಗೆ ಅರೆದು, ನಿಂಬೆ ರಸವನ್ನು ಸೇರಿಸಿ ಈ ಮಿಶ್ರಣವನ್ನು ಹಚ್ಚುತ್ತಿದ್ದರೆ ಉರಿಯು ಕಡಿಮೆಯಾಗುತ್ತದೆ.
* ತಲೆಯಲ್ಲಿ ಹೇನು, ಸೀರು ನಿವಾರಣೆಗೆ ಹಸಿ ಅಥವಾ ಒಣಗಿದ ಒಂದು ಹಿಡಿ ಮದರಂಗಿ ಸೊಪ್ಪನ್ನು ಸ್ವಲ್ಪ ನೀರಿನೊಂದಿಗೆ ನುಣ್ಣಗೆ ಅರೆದು, ಅದಕ್ಕೆ ಕರ್ಪೂರವನ್ನು ಸೇರಿಸಿ ಈ ಮಿಶ್ರಣ ತಲೆಕೂದಲಿಗೆ ಹಚ್ಚುವುದು ಪರಿಣಾಮಕಾರಿ.
ಇದನ್ನೂ ಓದಿ: ಪಾದಗಳು ಕಪ್ಪಾಗದಂತೆ ನೋಡಿಕೊಳ್ಳುವುದು ಹೇಗೆ?
* ಬಿಳಿಕೂದಲು ಕಪ್ಪಾಗಲು ಮದರಂಗಿ ಕಾಯಿಯನ್ನು ನುಣ್ಣಗೆ ಅರೆದು, ನೀರಿಗೆ ಹಾಕಿ ಚೆನ್ನಾಗಿ ಕಾಯಿಸಿ ಕಷಾಯ ಮಾಡಿಕೊಳ್ಳಬೇಕು. ಆ ಬಳಿಕ ನೀಲಿ ದ್ರಾಕ್ಷಿಯನ್ನು ನುಣ್ಣಗೆ ರುಬ್ಬಿ ಕಷಾಯ ಮಾಡಿ, ಈ ಎರಡು ಮಿಶ್ರಣವನ್ನು ಚೆನ್ನಾಗಿ ಬೆರೆಸಿ ಹಚ್ಚುವುದು ಪರಿಣಾಮಕಾರಿ ಮನೆ ಮದ್ದಾಗಿದೆ.
* ಕಾಮಾಲೆ ಕಾಯಿಲೆಗೆ ಹಸಿ ಮದರಂಗಿ ಸೊಪ್ಪನ್ನು ಚೆನ್ನಾಗಿ ಜಜ್ಜಿ ಒಂದು ಬಟ್ಟಲು ನೀರಿನಲ್ಲಿ ಒಂದು ರಾತ್ರಿ ನೆನೆ ಹಾಕಿ, ಮುಂಜಾನೆಯ ವೇಳೆ ನೀರನ್ನು ಶುಭ್ರವಾದ ಬಟ್ಟೆಯಲ್ಲಿ ಶೋಧಿಸಿ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ಈ ಸಮಸ್ಯೆಯು ದೂರವಾಗುತ್ತದೆ.
* ಮೂಲವ್ಯಾಧಿ ನಿವಾರಣೆಗೆ ಹಸಿ ಮದರಂಗಿ ಸೊಪ್ಪನ್ನು ಚೆನ್ನಾಗಿ ಜಜ್ಜಿ ಬಟ್ಟೆಯಲ್ಲಿ ಸೋಸಿ, ಅದಕ್ಕೆ ಅರ್ಧ ಚಮಚ ರಸಕ್ಕೆ ಸುಟ್ಟ ಬಿಗಾರದ ಹುಡಿಯನ್ನು ಸೇರಿಸಿ ಬೆಳಿಗ್ಗೆ ಸೇವಿಸುವುದು ಉತ್ತಮ.
* ತಲೆಸುತ್ತುತ್ತಿದ್ದರೆ ಎರಡು ಗ್ರಾಂ ಮದರಂಗಿ ಬೀಜಗಳನ್ನು ನಯವಾಗಿ ಅರೆದು ಒಂದು ಚಮಚ ಶುದ್ಧ ಜೇನಿನಲ್ಲಿ ಮಿಶ್ರಣ ಮಾಡಿ ಸೇವಿಸಬೇಕು.
* ಗಜಕರ್ಣ, ಹುಳುಕಡ್ಡಿ ಮತ್ತು ದದ್ದುಗಳಿಗೆ ನಿವಾರಣೆಗೆ ಮದರಂಗಿ ಬೀಜವನ್ನು ಗಟ್ಟಿ ಮೊಸರಿನಲ್ಲಿ ಮೂರು ದಿನಗಳ ಕಾಲ ನೆನೆ ಹಾಕಬೇಕು. ಆ ಬಳಿಕ ಈ ಬೀಜವನ್ನು ಚೆನ್ನಾಗಿ ರುಬ್ಬಿ ಲೇಪಿಸಿದರೆ ಗುಣಮುಖವಾಗುತ್ತದೆ.
ಈ ಮನೆಮದ್ದು ಉಪಯೋಗಿಸುವ ಮುನ್ನ ತಜ್ಞರ ಬಳಿ ಚರ್ಚಿಸುವುದು ಉತ್ತಮ
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:49 pm, Thu, 22 February 24