AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಚಾಣಕ್ಯರ ಪ್ರಕಾರ ಹುಡುಗಿಯರಿಗೆ ಈ ರೀತಿಯ ಹುಡುಗ್ರು ಇಷ್ಟವಾಗೋದಂತೆ

ಆಚಾರ್ಯ ಚಾಣಕ್ಯರು ರಾಜಕೀಯ ವಿಷಯಗಳು ಮಾತ್ರವಲ್ಲ ನಮ್ಮ ಜೀವನಕ್ಕೆ ಬೇಕಾಗಿರುವಂತಹ ಅಗತ್ಯ ಉಪದೇಶಗಳನ್ನು ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಸ್ನೇಹ, ದಾಂಪತ್ಯ ಜೀವನ, ಹಣ ಗಳಿಕೆಯ ದಾರಿ, ಶ್ರೀಮಂತಿಕೆ ಹೀಗೆ ಪ್ರತಿಯೊಂದು ವಿಚಾರಗಳ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಅವರು ಹೆಣ್ಣು ಮಕ್ಕಳಿಗೆ ಯಾವ ರೀತಿಯ ಹುಡುಗರು ಇಷ್ಟವಾಗ್ತಾರೆ, ಹೆಣ್ಮಕ್ಳಿಗೆ ಹುಡುಗರ ಯಾವ ಗುಣ ಇಷ್ಟವಾಗುತ್ತದೆ ಎಂಬ ಸೀಕ್ರೆಟ್‌ ವಿಚಾರಗಳ ಬಗ್ಗೆಯೂ ಹೇಳಿದ್ದಾರೆ. ಈ ವಿಷಯದ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Chanakya Niti: ಚಾಣಕ್ಯರ ಪ್ರಕಾರ ಹುಡುಗಿಯರಿಗೆ ಈ ರೀತಿಯ ಹುಡುಗ್ರು ಇಷ್ಟವಾಗೋದಂತೆ
ಸಾಂದರ್ಭಿಕ ಚಿತ್ರImage Credit source: Getty Images
ಮಾಲಾಶ್ರೀ ಅಂಚನ್​
|

Updated on: Oct 04, 2026 | 7:56 PM

Share

ಗಂಡ್ಮಕ್ಳು (men) ಸಾಮಾನ್ಯವಾಗಿ ಹುಡುಗಿಯ ರೂಪವನ್ನು ನೋಡಿ ಆಕೆಯನ್ನು ಇಷ್ಟಪಡುತ್ತಾರೆ. ಅದರಲ್ಲೂ ಆಕೆಯ ವ್ಯಕ್ತಿತ್ವ ಇಷ್ಟವಾದರೆ ಆಕೆಯನ್ನು ಜೀವನ ಸಂಗಾತಿಯನ್ನಾಗಿ ಮಾಡುವ ಬಯಕೆಯೂ ಅವರಿಗಿರುತ್ತದೆ. ಇನ್ನೂ ಹುಡುಗರು ಹುಡುಗಿಯ ಗುಣವನ್ನು ನೋಡಿ ಇಷ್ಟಪಟ್ಟರೆ ಹುಡುಗಿಯರು ಮಾತ್ರ ಹುಡಗನಲ್ಲಿ ಆಸ್ತಿ, ಅಂತಸ್ತು ಇದೆಯೇ ಎಂಬುದನ್ನೇ ನೋಡ್ತಾರೆ ಎಂದು ಅನೇಕರು ಹೇಳ್ತಾರೆ. ಆದ್ರೆ ನಿಜಕ್ಕೂ ಹುಡುಗಿಯರು ಹಣವಂತ, ಸಿರಿವಂತ ಹುಡುಗನನ್ನೇ ಇಷ್ಟ ಪಡೋದಾ? ಹುಡುಗರ ಯಾವ ಗುಣಗಳು ಹುಡುಗಿಯರನ್ನು ಆಕರ್ಷಿಸುತ್ತದೆ ಎಂಬುದರ ರಹಸ್ಯವನ್ನು ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಸಿಕೊಟ್ಟಿದ್ದಾರೆ. ಹಾಗಿದ್ದರೆ ಚಾಣಕ್ಯರ ಪ್ರಕಾರ  ಹುಡುಗಿಯರಿಗೆ ಎಂತಹ ಹುಡುಗರು ಇಷ್ಟವಾಗ್ತಾರೆ ಎಂಬುದನ್ನು ನೋಡೋಣ ಬನ್ನಿ.

ಗೌರವಯುತವಾಗಿ  ಮಾತನಾಡುವ ಗುಣ:

ಹುಡುಗಿಯರು ಕೇವಲ ಅಂದಚಂದ ನೋಡಿ ಹುಡುಗರತ್ತ ಆಕರ್ಷಿತರಾಗುವುದಿಲ್ಲ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಹುಡುಗಿಯರು ಮಹಿಳೆಯರನ್ನು ಗೌರವಿಸುವ ಮತ್ತು ತಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಹುಡುಗರನ್ನು ಇಷ್ಟಪಡುತ್ತಾರೆ. ಹೌದು ಹುಡುಗಿಯರು ತಮ್ಮನ್ನು ಕೀಳಾಗಿ ಕಾಣದ, ಎಲ್ಲರ ಮುಂದೆ ತಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುವ ಹುಡುಗ ಹುಡುಗರತ್ತ ಹೆಣ್ಮಕ್ಳು ಹೆಚ್ಚು ಆಕರ್ಷಿತರಾಗುತ್ತಾರೆ. ಅಲ್ಲದೆ ಅಂತಹ ಹುಡುಗರೊಂದಿಗೆ ಸಂತೋಷದಿಂದ ಮತ್ತು ಶಾಂತಿಯುತವಾಗಿ ಜೀವನವನ್ನು ಕಳೆಯಬಹುದು ಎಂದು ನಂಬುತ್ತಾರೆ.

ನೇರ ನುಡಿಯ ಹುಡುಗರೆಂದರೆ ಹೆಣ್ಮಕ್ಳಿಗೆ ಇಷ್ಟ:

ಚಾಣಕ್ಯರು  ಹೇಳುವಂತೆ ಹುಡುಗಿಯರು ಮುಕ್ತವಾಗಿ ಮಾತನಾಡುವ ಹುಡುಗರನ್ನು ಇಷ್ಟಪಡುತ್ತಾರೆ. ಹುಡುಗಿಯರು ತಮ್ಮ ಹೃದಯವನ್ನು ಗೆಲ್ಲಲು ಯಾವುದೇ ಸುಳ್ಳನ್ನು ಹೇಳದೆ, ನಾಟಕ ಮಾಡದೆ ಪ್ರಾಮಾಣಿಕವಾಗಿರುವ ಮತ್ತು ಯಾವುದೇ ನೇರವಾಗಿ ಮಾತನಾಡುವ ಆದರೆ ಕಠಿಣವಾಗಿ ವರ್ತಿಸದ, ಬದಲಿಗೆ ಶಾಂತವಾಗಿ ಸತ್ಯವನ್ನೇ ಮಾತನಾಡುವ ಹುಡುಗರತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಒಟ್ಟಾರೆಯಾಗಿ ಚಾಣಕ್ಯರ ಪ್ರಕಾರ ಪ್ರಾಮಾಣಿಕವಾಗಿರುವ, ಸ್ಪಷ್ಟವಾಗಿ ಮಾತನಾಡುವ ಮತ್ತು ಇತರರ ಭಾವನೆಗಳನ್ನು ಗೌರವಿಸುವ ಹುಡುಗರ ಬಗ್ಗೆ ಹೆಣ್ಮಕ್ಳು ಹೆಚ್ಚು ಆಸಕ್ತಿ ಹೊಂದಿರುತ್ತಾರೆ.

ಕೋಪ ನಿಯಂತ್ರಣ ಗುಣ:

ಚಾಣಕ್ಯರ ಪ್ರಕಾರ  ತಮ್ಮ ಕೋಪವನ್ನು ನಿಯಂತ್ರಿಸಬಲ್ಲ, ಕೋಪದಲ್ಲಿ ಕೆಟ್ಟ ಪದಗಳನ್ನಾಡದ, ಕೋಪದಲ್ಲಿ ಇನ್ನೊಬ್ಬರ ಭಾವನೆಗಳಿಗೆ ನೋವು ಮಾಡದ ಹುಡುಗರನ್ನು ಇಷ್ಟಪಡುತ್ತಾರೆ. ಅದೇ ಹುಡುಗಿಯರು ಸುಲಭವಾಗಿ ಕೋಪಗೊಳ್ಳುವ, ಚುಚ್ಚು ಮಾತುಗಳನ್ನಾಡುವ ಹುಡುಗರನ್ನು ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಲು ಎಂದಿಗೂ ಇಷ್ಟಪಡುವುದಿಲ್ಲ.

ಜವಾಬ್ದಾರಿಯುತ ಪುರುಷ:

ಆಚಾರ್ಯ ಚಾಣಕ್ಯರು ಜವಾಬ್ದಾರಿಯುತ ಪುರುಷನನ್ನು ಸಮಾಜ ಮತ್ತು ಕುಟುಂಬದ ಬೆನ್ನೆಲುಬು ಎಂದು ಪರಿಗಣಿಸಿದ್ದಾರೆ. ತನ್ನ ಕರ್ತವ್ಯಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಮಹಿಳೆಯರಿಗೆ ಮಾನಸಿಕ ಮತ್ತು ಭಾವನಾತ್ಮಕ ಭದ್ರತೆಯನ್ನು ಒದಗಿಸಬಲ್ಲ ಪುರುಷನನ್ನೇ ಮಹಿಳೆಯರು ಹೆಚ್ಚು ಇಷ್ಟಪಡೋದು.

ಇದನ್ನೂ ಓದಿ: ಸುರಕ್ಷತೆಯ ದೃಷ್ಟಿಯಿಂದ ಮಹಿಳೆಯರು ತಮ್ಮ ಬ್ಯಾಗ್‌ನಲ್ಲಿ ಈ ವಸ್ತುಗಳನ್ನು ಇಟ್ಟುಕೊಳ್ಳುವುದು ಅತ್ಯಗತ್ಯ

ಹಾಸ್ಯಪ್ರಜ್ಞೆ ಮತ್ತು ಸಕಾರಾತ್ಮಕ ಚಿಂತನೆ:

ಆಚಾರ್ಯ ಚಾಣಕ್ಯ ಹೇಳುವಂತೆ, ಬಿಕ್ಕಟ್ಟಿನ ಸಮಯದಲ್ಲೂ ತಾಳ್ಮೆ ಮತ್ತು ನಗುವನ್ನು ಕಾಯ್ದುಕೊಳ್ಳುವ, ಸಕಾರಾತ್ಮಕ ಮನಸ್ಥಿತಿ ಮತ್ತು ಹಾಸ್ಯಪ್ರಜ್ಞೆಯನ್ನು ಹೊಂದಿರುವ ಹುಡುಗರು ಹೆಣ್ಮಕ್ಳಿಗೆ ಇಷ್ಟವಾಗ್ತಾರೆ.

ಶಾಂತ ಮನಸ್ಥಿತಿಯ ಹುಡುಗರು ಹೆಣ್ಮಕ್ಳಿಗೆ ಇಷ್ಟವಾಗುತ್ತಾರೆ:

ಕಷ್ಟದ ಸಮಯದಲ್ಲಿ ಶಾಂತ ಮನಸ್ಥಿತಿಯಲ್ಲಿ ಯೋಚಿಸಿ ಸಮಸ್ಯೆಗಳನ್ನು ಪರಿಹರಿಸುವ ಹುಡುಗರತ್ತ ಹುಡುಗಿಯರು ಆಕರ್ಷಿತರಾಗುತ್ತಾರೆ. ಹುಡುಗಿಯರ ಸಮಸ್ಯೆಗಳನ್ನು ಕೋಪಗೊಳ್ಳತೆ ಶಾಂತವಾಗಿ ಆಲಿಸುವ ಮತ್ತು ಅವರ ಭಾವನೆಗಳನ್ನು ಮುಂಚಿತವಾಗಿ ಅರ್ಥಮಾಡಿಕೊಳ್ಳುವ ಹುಡುಗ ಜೀವನ ಸಂಗಾತಿಯಾಗಿ ಬರಬೇಕು ಎಂದು ಬಯಸುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಫ್ಲೈದುಬೈ ಪ್ರಕರಣ: ಸಹ ಪೈಲಟ್ ಕೃತ್ಯವನ್ನು ಶ್ಲಾಘಿಸಿದ ಅಲ್-ಖೈದಾ
ಫ್ಲೈದುಬೈ ಪ್ರಕರಣ: ಸಹ ಪೈಲಟ್ ಕೃತ್ಯವನ್ನು ಶ್ಲಾಘಿಸಿದ ಅಲ್-ಖೈದಾ
ನೆಲದ ಮೇಲೆ ಕುಳಿತು ಉಪಹಾರ ಸೇವಿಸಿದ ವಿಜಯೇಂದ್ರ
ನೆಲದ ಮೇಲೆ ಕುಳಿತು ಉಪಹಾರ ಸೇವಿಸಿದ ವಿಜಯೇಂದ್ರ