Kannada News Lifestyle Chanakya Niti : How-parents should behave with their adolescent son? Kannada News
Chanakya Niti: ವಯಸ್ಸಿಗೆ ಬಂದ ಮಗನ ಮುಂದೆ ತಾಯಿಯ ವರ್ತನೆ ಹೇಗಿರಬೇಕು? ಈ ವಿಷಯ ತಿಳಿದಿರಲಿ
ಮಕ್ಕಳನ್ನು ಬೆಳೆಸುವುದು ಎಷ್ಟು ಕಷ್ಟವೋ, ಹದಿಹರೆಯದ ಮಗನನ್ನು ನೋಡಿಕೊಳ್ಳುವುದು ಇನ್ನಷ್ಟು ಕಷ್ಟದಾಯಕ. ಹೀಗಾಗಿ ಎದೆ ಎತ್ತರಕ್ಕೆ ಬೆಳೆದ ಮಗನ ಬಳಿ ತಾಯಿಯಾದವಳು ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಚಾಣಕ್ಯನು ತಿಳಿಸಿದ್ದಾನೆ. ಅದಲ್ಲದೇ, ತಮ್ಮ ಇತಿಮಿತಿಗಳಿಂದ ಮಗನ ಭವಿಷ್ಯವನ್ನು ಹೇಗೆ ರೂಪಿಸಬೇಕೆಂದು ತಾಯಂದಿರಿಗೆ ಪ್ರಮುಖ ಸಲಹೆಗಳನ್ನು ನೀಡಿದ್ದು, ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾಂದರ್ಭಿಕ ಚಿತ್ರ
Follow us on
ಮಕ್ಕಳು ಬಹುಬೇಗ ಬೆಳೆದು ದೊಡ್ಡವರಾಗಿ ಬಿಡುತ್ತಾರೆ. ನಮ್ಮ ಕಣ್ಣ ಮುಂದೆ ಆಡಿ ಬೆಳೆಯುತ್ತಿದ್ದ ಮಕ್ಕಳು ನೋಡನೋಡುತ್ತಿದ್ದಂತೆ ಎದೆಯೆತ್ತರಕ್ಕೆ ಬೆಳೆದಾಗ ಇಷ್ಟು ಬೇಗ ಮಕ್ಕಳು ದೊಡ್ಡದವರಾಗಿ ಬಿಟ್ಟರಾ ಎಂದೆನಿಸುತ್ತದೆ. ಹದಿಹರೆಯದ ವಯಸ್ಸಿನಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬದಲಾಗುತ್ತಾರೆ. ಹೀಗಾಗಿ ತಾಯಿಯಾದವಳು ವಯಸ್ಸಿಗೆ ಬಂದ ಮಗನ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದಿರಬೇಕು, ಯಾವ ರೀತಿ ನಡೆದುಕೊಳ್ಳಬೇಕು ಎನ್ನುವ ಸಲಹೆಗಳನ್ನು ಚಾಣಕ್ಯನು ನೀಡಿದ್ದಾನೆ.
ಹದಿಹರೆಯದ ಮಗನನ್ನು ಬೆಳೆಸುವಾಗ ಎಚ್ಚರಿಕೆಯಿಂದ ಇರುವುದು ಬಹಳ ಮುಖ್ಯ. ಸಣ್ಣ ಪುಟ್ಟ ವಿಷಯಕ್ಕೆ ಗದರುವುದು, ಬೈಯುವುದು ಹಾಗೂ ಹೊಡೆಯುವುದನ್ನು ಹೆತ್ತ ತಾಯಿ ಮಾಡಬಾರದು. ಈ ಕುಟುಂಬದಲ್ಲಿ ತನಗೂ ಪ್ರಮುಖ ಸ್ಥಾನವಿದೆ ಎಂಬ ಭಾವನೆ ಬರುವಂತೆ ಮನೆಯ ವಾತಾವರಣವು ಇರಬೇಕು.
ಮಕ್ಕಳ ವಿಷಯದಲ್ಲಿ ಮುದ್ದು ಅತಿಯೂ ಆಗಬಾರದು. ಪ್ರೀತಿಸಬೇಕು ನಿಜ, ಈ ವೇಳೆಯಲ್ಲಿ ವಿವೇಚನೆಯಿಂದ ನೋಡಿಕೊಳ್ಳಬೇಕು. ಮಗ ಕೇಳಿದ್ದನ್ನೆಲ್ಲಾ ಕೊಡಿಸುವುದು ಸರಿಯಲ್ಲ. ಅಲ್ಪ ಸ್ವಲ್ಪ ಕೂಡಿಟ್ಟ ಹಣದಲ್ಲಿ ಮಕ್ಕಳಿಗೆ ವಸ್ತುಗಳನ್ನು ಕೊಡಿಸಿದರೂ ಅದರ ಬೆಲೆ ಮಕ್ಕಳಿಗೆ ಅರ್ಥವಾಗುವುದಿಲ್ಲ. ಯಾವ ಸಮಯದಲ್ಲಿ ಯಾವುದು ಅಗತ್ಯವಾಗಿದೆಯೋ ಅದನ್ನು ಕೊಡಿಸುವುದುಸುವುದು ಉತ್ತಮ ಎನ್ನುತ್ತಾನೆ ಚಾಣಕ್ಯ.
ಹದಿಹರೆಯದ ವಯಸ್ಸಿಗೆ ಕಾಲಿಟ್ಟ ಮಗನನ್ನು ಹತ್ತಿರ ಮಲಗಿಸಿಕೊಳ್ಳುವುದು ಸರಿಯಲ್ಲ. ಈ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸುವುದು ಅಗತ್ಯವಂತೆ.
ಪೋಷಕರು ಪ್ರಾಯಕ್ಕೆ ಬಂದ ಮಗನಿಗೆ ಸಲಿಗೆ ನೀಡುವುದು ಸರಿಯಲ್ಲ. ಓದುವ ವಯಸ್ಸಿನಲ್ಲಿ ಆತನ ಸ್ನೇಹಿತರು ಹಾಗೂ ಅವರ ಗುಣನಡತೆ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಎದೆ ಎತ್ತರಕ್ಕೆ ಬೆಳೆದ ಮಗನ ಮುಂದೆ ಗಂಡ- ಹೆಂಡತಿ ಸರಸ ಆಡಬಾರದು. ಇದರಿಂದ ಮಗನ ಮನಸ್ಸು ಚಂಚಲವಾಗುವ ಸಾಧ್ಯತೆಯೇ ಹೆಚ್ಚು. ತಾನೂ ಹೀಗೆ ಮಾಡಿದರೆ ತಪ್ಪೇನು ಎನ್ನುವ ಭಾವನೆಯಡಿಯಲ್ಲಿ ಮಗನು ಹಾದಿ ತಪ್ಪುವ ಸಂದರ್ಭವು ಹೆಚ್ಚು ಎನ್ನಬಹುದು.
ವಯಸ್ಸಿಗೆ ಬಂದ ಮಗನ ಮುಂದೆ ತಂದೆ ತಾಯಿಯರಿಬ್ಬರೂ ಜಗಳ ಆಡುವುದು ಸರಿಯಲ್ಲ. ಮಕ್ಕಳ ಎದುರಲ್ಲಿ ಒಬ್ಬರನ್ನೊಬ್ಬರು ಬೈಯುವುದರಿಂದ ಹೆತ್ತವರ ಮೇಲೆ ಕೆಟ್ಟ ಭಾವನೆ ಬರುತ್ತದೆ. ಆದರೆ ನಿಮ್ಮ ಜಗಳ ಗಳು ಮಗನ ಮನಸ್ಸಿನಲ್ಲಿ ದಾಂಪತ್ಯದ ಬಗ್ಗೆ ಕಹಿ ಭಾವನೆಯನ್ನು ಮೂಡಿಸಲು ಬಹುದು.
ಮಗನಿಗೆ ಓದುವ ಮನಸ್ಸಿದ್ದರೆ ಸಾಧ್ಯವಾದಷ್ಟು ಓದಲು ಬಿಡಿ. ಶಿಕ್ಷಣದ ವಿಚಾರದಲ್ಲಿ ಮಕ್ಕಳನ್ನು ಯಾವುದೇ ಕಾರಣಕ್ಕೂ ತಡೆಯಬಾರದು. ಓದನ್ನು ಅರ್ಧಕ್ಕೆ ನಿಲ್ಲಿಸಿದರೆ ಮಕ್ಕಳ ಭವಿಷ್ಯವೇ ಹಾಳಾಗುತ್ತದೆ. ಹೀಗಾಗಿ ಮಕ್ಕಳಿಗೆ ಶಿಕ್ಷಣ ಹಾಗೂ ಆಸಕ್ತಿಯಿರುವ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸಿ ಎನ್ನುತ್ತಾನೆ ಚಾಣಕ್ಯ.
ಮಗನಿಗೆ ತಮ್ಮ ಅಂತಸ್ತಿಗೆ ತಕ್ಕ ಹುಡುಗಿಯೊಂದಿಗೆ ಮದುವೆ ಮಾಡುವುದು ಸೂಕ್ತ. ಅತಿ ಶ್ರೀಮಂತರು ಅಥವಾ ಅತಿ ಬಡವರ ಮನೆಯಿಂದ ಮದುವೆ ಮಾಡಿಸಿ ಸೊಸೆಯನ್ನು ತರುವುದು ಸರಿಯಲ್ಲ. ಶ್ರೀಮಂತ ಮನೆಯ ಹೆಣ್ಣು ಸೊಸೆಯಾಗಿ ಬಂದರೆ ಆಕೆಯನ್ನು ನಿಭಾಯಿಸಿಕೊಂಡು ಹೋಗುವುದು ಕಷ್ಟ. ಅದಲ್ಲದೇ, ಬಡತನ ಮನೆಯ ಹೆಣ್ಣಾದರೆ ಆಕೆಯ ಮನೆಯವರನ್ನು ನೀವೇ ನೋಡಿಕೊಳ್ಳಬೇಕಾಗುವುದು. ಹೀಗಾಗಿ ಈ ವಿಷಯದಲ್ಲಿ ಮಗನ ಅಭಿಪ್ರಾಯವನ್ನು ಕೇಳುವುದು ಉತ್ತಮ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ