Chanakya Niti: ಪುರುಷರಲ್ಲಿ ಈ ಅಭ್ಯಾಸಗಳಿದ್ದರೆ, ಮನೆಯ ನೆಮ್ಮದಿಯೇ ಹಾಳಾಗುತ್ತದೆ ಎನ್ನುತ್ತಾರೆ ಚಾಣಕ್ಯ

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ನಮ್ಮ ಜೀವನಕ್ಕೆ ಬೇಕಾದ ಪ್ರತಿಯೊಂದು ಅಂಶಗಳನ್ನು ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಅವರು ಈ ಕೆಲವು ಅಭ್ಯಾಸಗಳನ್ನು ಹೊಂದಿರುವ ಪುರುಷರು ತಮ್ಮ ಮನೆಗಳನ್ನು ತಾವೇ ನಾಶಪಡಿಸುತ್ತಾರೆ, ಅವರಿಂದ ಮನೆಯ ಶಾಂತಿ ಮತ್ತು ನೆಮ್ಮದಿಯೇ ಹಾಳಾಗುತ್ತದೆ ಎಂದಿದ್ದಾರೆ. ಹಾಗಿದ್ರೆ ಪುರುಷರ ಯಾವ ಅಭ್ಯಾಸಗಳು ಮನೆಯ ನೆಮ್ಮದಿಯನ್ನು ಹಾಳು ಮಾಡುತ್ತದೆ ಎಂಬುದನ್ನು ನೋಡೋಣ ಬನ್ನಿ.

Chanakya Niti: ಪುರುಷರಲ್ಲಿ ಈ ಅಭ್ಯಾಸಗಳಿದ್ದರೆ, ಮನೆಯ ನೆಮ್ಮದಿಯೇ ಹಾಳಾಗುತ್ತದೆ ಎನ್ನುತ್ತಾರೆ ಚಾಣಕ್ಯ
ಚಾಣಕ್ಯ ನೀತಿ
Image Credit source: Pinterest

Updated on: Dec 13, 2025 | 7:18 PM

ನಮ್ಮ ಅಭ್ಯಾಸಗಳು (habits) ಸಹ ನಮ್ಮ ಏಳ್ಗೆ, ಅವನತಿಯನ್ನು ನಿರ್ಧರಿಸುತ್ತವೆ. ಒಳ್ಳೆಯ ಅಭ್ಯಾಸಗಳು ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುವಂತೆ, ಕೆಟ್ಟ ಅಭ್ಯಾಸಗಳಿಂದ ಜೀವನವೇ ಹಾಳಾಗುತ್ತದೆ. ಅದರಲ್ಲೂ ಪುರುಷರ ಈ ಕೆಲವೊಂದು ಅಭ್ಯಾಸಗಳು ಇಡೀ ಮನೆಯ ನೆಮ್ಮದಿಯನ್ನೇ ಹಾಳು ಮಾಡುತ್ತದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಹೌದು ಪುರುಷರಲ್ಲಿ ಈ ಕೆಲವೊಂದು ಅಭ್ಯಾಸಗಳಿದ್ದರೆ, ಅವರ ಅಭ್ಯಾಸಗಳ ಕಾರಣದಿಂದಲೇ ಅವರ ಮನೆಯ ನೆಮ್ಮದಿಯೇ ಹಾಳಾಗುತ್ತದೆ ಎಂದಿದ್ದಾರೆ. ಹಾಗಿದ್ರೆ ಆ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಮನೆಯ ಶಾಂತಿ, ನೆಮ್ಮದಿ ಹಾಳಾಗಲು ಕಾರಣ ಪುರುಷರ ಈ ಅಭ್ಯಾಸಗಳು:

ಹೆಂಡತಿಯನ್ನು ಅಗೌರವಿಸುವ ವ್ಯಕ್ತಿ: ಚಾಣಕ್ಯರ ಪ್ರಕಾರ, ತನ್ನ ಹೆಂಡತಿಯನ್ನು ಗೌರವಿಸದ ಪುರುಷನು ತನ್ನ ಮನೆಯನ್ನು ಎಂದಿಗೂ ಶಾಂತಿ ಮತ್ತು ನೆಮ್ಮದಿಯಿಂದ ಇಡಲು ಸಾಧ್ಯವಿಲ್ಲ. ಗಂಡನಾದವನು ಹೆಂಡತಿಯನ್ನು ಪದೇ ಪದೇ ಅವಮಾನಿಸುವುದು, ಅವಳ ಭಾವನೆಗಳನ್ನು ನಿರ್ಲಕ್ಷಿಸುವುದು ಇವೆಲ್ಲವು ಆಕೆಯ ಭಾವನೆಗಳಿಗೆ ನೋವುಂಟುಮಾಡುತ್ತದೆ. ಇದರಿಂದ ಮನೆಯು ಉದ್ವಿಗ್ನತೆ, ಸಂಘರ್ಷ ಮತ್ತು ನಕಾರಾತ್ಮಕತೆಯಿಂದ ತುಂಬಿರುತ್ತದೆ ಎನ್ನುತ್ತಾರೆ ಚಾಣಕ್ಯ.

ಅನೈತಿಕ ಸಂಬಂಧ:  ಚಾಣಕ್ಯರು  ಹೇಳುವಂತೆ, ಗಂಡನಾದವನು ನಿಷ್ಠನಾಗಿರಬೇಕು. ಪುರುಷನಾದವನು ಅನೈತಿಕ ಸಂಬಂಧವನ್ನು ಹೊಂದಿದರೆ, ಇದರಿಂದ ಸಂಸಾರ ಹಾಳಾಗುತ್ತದೆ. ಇದು ಕುಟುಂಬದ ಖ್ಯಾತಿ, ಗೌರವ ಮತ್ತು ಸ್ಥಿರತೆಯನ್ನು ನಾಶಮಾಡುತ್ತವೆ.

ಸಾಲ ಮಾಡುವವರು: ಕೆಲವು ಪುರುಷರು ತಮ್ಮ ಖರ್ಚುಗಳನ್ನು ಪೂರೈಸಲು ಪದೇ ಪದೇ ಹಣವನ್ನು ಸಾಲ ಪಡೆಯುತ್ತಾರೆ. ಚಾಣಕ್ಯರ ಪ್ರಕಾರ, ತನ್ನ ಆರ್ಥಿಕ ಜವಾಬ್ದಾರಿಗಳನ್ನು ಪೂರೈಸಲು ಸಾಧ್ಯವಾಗದ ಮತ್ತು ನಿರಂತರವಾಗಿ ಸಾಲ ಮಾಡುವ ವ್ಯಕ್ತಿ ತನ್ನ ಕುಟುಂಬವನ್ನು  ತೊಂದರೆಗೆ ಸಿಲುಕಿಸುತ್ತಾನೆ. ಅಲ್ಲದೆ ಈ ಅಭ್ಯಾಸವು ಕುಟುಂಬವನ್ನು ಆರ್ಥಿಕವಾಗಿ ದುರ್ಬಲಗೊಳಿಸುವುದಲ್ಲದೆ, ಮಾನಸಿಕ ಒತ್ತಡ ಮತ್ತು ಸಂಘರ್ಷಕ್ಕೂ ಕಾರಣವಾಗುತ್ತದೆ.

ಇದನ್ನೂ ಓದಿ: ಚಾಣಕ್ಯರ ಪ್ರಕಾರ ಬುದ್ಧಿವಂತ ಜನರಲ್ಲಿ ಮಾತ್ರ ವಿಶೇಷ ಗುಣಗಳಿರುವುದಂತೆ

ಜವಾಬ್ದಾರಿಗಳಿಂದ ಓಡಿಹೋಗುವ ವ್ಯಕ್ತಿ: ತನ್ನ ಕುಟುಂಬದ ಜವಾಬ್ದಾರಿಗಳಿಂದ ಹಿಂದೆ ಸರಿಯುವ, ಓಡಿಹೋಗುವ ವ್ಯಕ್ತಿಯಿಂದ ಕುಟುಂಬದ ನೆಮ್ಮದಿ ಹಾಳಾಗುತ್ತದೆ, ಆತ ಕುಟುಂಬವನ್ನು ಸರಿಯಾಗಿ ನಿರ್ವಹಿಸಲು ಸಹ ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:16 pm, Sat, 13 December 25