ಬಾತ್ ಟವೆಲ್‌ಗಳಲ್ಲಿ ವಿಶೇಷ ಪಟ್ಟಿ ಏಕಿರುತ್ತವೆ, ಅವುಗಳ ಕಾರ್ಯವಾದರೂ ಏನು ಗೊತ್ತಾ?
ಸ್ನಾನದ ನಂತರ ಮೈ ಒರೆಸಲು, ಆಗಾಗ್ಗೆ ಕೈ ಒರೆಸಿಕೊಳ್ಳಲು ನಾವು ಟವೆಲ್‌ಗಳನ್ನು ಬಳಸುತ್ತೇವೆ. ಒಟ್ಟಾರೆಯಾಗಿ ಹೇಳುವುದಾದರೆ ಟವೆಲ್‌ಗಳು ನಮ್ಮ ದೈನಂದಿನ ಜೀವನದ ಭಾಗವಾಗಿದೆ. ಬಹುತೇಕ ಈ ಎಲ್ಲಾ ಟವೆಲ್‌ಗಳ ಅಂಚಿನಲ್ಲಿ ಪಟ್ಟೆಗಳು ಇರುವುದನ್ನು ನೀವು ಗಮನಿಸಿರುತ್ತೀರಿ ಅಲ್ವಾ. ಅಷ್ಟಕ್ಕೂ ಆ ಗೆರೆಗಳು ಏಕಿರುತ್ತವೆ, ಅದರ ಕಾರ್ಯವಾದರೂ ಏನು ಗೊತ್ತಾ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರತಿಯೊಂದು ಮನೆಗಳಲ್ಲೂ ಸಹ ಟವೆಲ್‌ಗಳು (towels) ಇದ್ದೇ ಇರುತ್ತವೆ. ಸ್ನಾನದ ನಂತರ ಮೈ ಒರೆಸಿಕೊಳ್ಳಲು ಮಾತ್ರವಲ್ಲ, ಆಗಾಗ್ಗೆ ಕೈ ಒರೆಸಿಕೊಳ್ಳಲು ಸಹ ಟವೆಲ್‌ಗಳನ್ನೇ ಬಳಸುತ್ತೇವೆ. ನಮ್ಮ ದೈನಂದಿನ ಜೀವನದ ಅತೀ ಅವಶ್ಯಕ ವಸ್ತುವಾದ ಈ ಟವೆಲ್‌ಗಳಲ್ಲಿ ಪಟ್ಟೆಗಳು ಇರುವುದನ್ನು ನೀವು ಗಮನಿಸಿದ್ದೀರಾ? ಹೌದು ಟವೆಲ್‌ಗಳ ಎರಡೂ ಅಂಚಿನಲ್ಲೂ ಈ ಗೆರೆಗಳು ಇರುತ್ತವೆ. ಅಷ್ಟಕ್ಕೂ ಆ ಗೆರೆಗಳು ಏಕಿರುತ್ತವೆ, ಇದು ಬರೀ ಅಲಂಕಾರಕ್ಕಾಗಿಯೇ ಅಥವಾ ಬೇರೆ ಏನಾದರೂ ಉದ್ದೇಶ ಇದೆಯೇ ಎಂಬುದರ ಸಂಕ್ಷಿಪ್ತ ವಿವರ ಇಲ್ಲಿದೆ ನೋಡಿ.
ಟವೆಲ್‌ಗಳ ಅಂಚಿನಲ್ಲಿ ಗೆರೆಗಳು ಏಕಿರುತ್ತವೆ?
ಟವೆಲ್‌ಗಳ ಎರಡೂ ಅಂಚಿನಲ್ಲಿರುವ ಈ ಪಟ್ಟೆಗಳು ನಯವಾಗಿ, ನೇರವಾಗಿ ಮತ್ತು ಸ್ವಲ್ಪ ಬಿಗಿಯಾಗಿರುತ್ತದೆ. ಈ ಪಟ್ಟಿಯನ್ನು ಡಾಬಿ ಬಾರ್ಡರ್ (dobby border) ಎಂದು ಕರೆಯಲಾಗುತ್ತದೆ. ಇದು ಟವಲ್‌ನ ಅಂಚುಗಳಲ್ಲಿ ಕಂಡುಬರುವ ವಿಶೇಷ ರೀತಿಯ ನೇಯ್ಗೆಯಾಗಿದೆ. ಈ ಬಾರ್ಡರ್ ಟವಲ್ ವಿನ್ಯಾಸಕ್ಕೆ ವಿಶಿಷ್ಟ ನೋಟವನ್ನು ನೀಡುತ್ತದೆ. ಅಷ್ಟೇ ಅಲ್ಲದೆ ಇದು ಟವಲ್‌ನ ಅಂಚುಗಳಿಗೆ ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಎಳೆಗಳು ಸವೆಯುವುದನ್ನು ತಡೆಯುತ್ತದೆ.
ಟವೆಲ್‌ಗಳಲ್ಲಿರುವ ಡಾಬಿ ಬಾರ್ಡರ್‌ನ ಕಾರ್ಯಗಳೇನು?
ಟವೆಲ್‌ಗಳು ಬೇಗನೆ ಹರಿದು ಹೋಗುವುದನ್ನು ತಡೆಯುತ್ತದೆ: ಟವಲ್ ಸುತ್ತ ಈ ಪಟ್ಟಿ ಇಲ್ಲದಿದ್ದರೆ, ಸ್ವಲ್ಪ ಸಮಯದೊಳಗೆಯೇ ಟವೆಲ್‌ನ ಅಂಚುಗಳು ಸವೆಯಲು ಪ್ರಾರಂಭಿಸುತ್ತದೆ. ಈ ಪಟ್ಟಿಯು ಟವಲ್ ನ ಹಿಡಿತವನ್ನು ಬಲಪಡಿಸುತ್ತದೆ ಮತ್ತು ಅದನ್ನು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡುತ್ತದೆ. ನೀವು ಟವಲ್ ಅನ್ನು ಗಟ್ಟಿಯಾಗಿ ಹಿಂಡಿದರೂ ಅಥವಾ ಪದೇ ಪದೇ ತೊಳೆದರೂ, ಈ ಬಾರ್ಡರ್‌ಗಳು ಹರಿದು ಹೋಗುವುದನ್ನು ತಡೆಯುತ್ತದೆ.
ಇದು ನೀರನ್ನು ಹೀರಿಕೊಳ್ಳುವಲ್ಲಿಯೂ ಸಹಾಯ ಮಾಡುತ್ತದೆ: ಟವೆಲ್ ಮೇಲಿನ ಈ ಪಟ್ಟಿಯು ಸ್ವಲ್ಪ ಅಸಾಮಾನ್ಯವಾಗಿ ಕಾಣಿಸಬಹುದು, ಇದು ಟವೆಲ್ ದೇಹದಿಂದ ನೀರನ್ನು ಹೆಚ್ಚು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಇದನ್ನೂ ಓದಿ: ನಾಯಿಗಳು ಕಾರ್, ಬೈಕನ್ನು ಅಟ್ಟಿಸಿಕೊಂಡು ಹೋಗುವುದೇಕೆ ಗೊತ್ತಾ?
ಟವಲ್‌ಗೆ ಬಲ ನೀಡುತ್ತದೆ: ನಾವು ವಾರದಲ್ಲಿ ಹಲವಾರು ಬಾರಿ ಟವೆಲ್ ತೊಳೆಯುತ್ತೇವೆ. ಈ ರೀತಿ ಪದೇ ಪದೇ ತೊಳೆದಾಗ ಕೆಲವೊಂದು ವಸ್ತ್ರಗಳು ಹರಿದುಹೋಗುವ ಸಾಧ್ಯತೆ ಇರುತ್ತದೆ. ಆದರೆ ಈ ಪಟ್ಟಿ ಟವೆಲ್‌ಗೆ ಬಲ ನೀಡುತ್ತದೆ. ಒಗೆದ ನಂತರವೂ ಹಾನಿಗೊಳಗಾಗುವುದನ್ನು ತಪ್ಪಿಸುತ್ತದೆ.
ಟವೆಲ್‌ಗೆ ಸುಂದರ ನೋಟ ನೀಡುತ್ತದೆ: ಟವಲ್ ಮೇಲಿನ ಪಟ್ಟೆಯು ಅದರ ನೋಟವನ್ನು ಹೆಚ್ಚಿಸುತ್ತದೆ. ಇದು ಟವೆಲ್ ಸರಳವಾಗಿ ಕಾಣುವ ಬದಲು ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:22 pm, Sun, 14 December 25




