ನಾಯಿಗಳು ಕಾರ್, ಬೈಕನ್ನು ಅಟ್ಟಿಸಿಕೊಂಡು ಹೋಗುವುದೇಕೆ ಗೊತ್ತಾ?
ನಾಯಿಗಳು ಮನುಷ್ಯರನ್ನು ಅಟ್ಟಾಡಿಸಿಕೊಂಡು ಬಂದು ದಾಳಿ ನಡೆಸುವಂತೆ, ಅವುಗಳು ಕಾರ್, ಬೈಕ್‌ಗಳನ್ನು ಚಲಾಯಿಸಿಕೊಂಡು ಹೋದಾಗಲೂ ಬೊಗಳುತ್ತಾ ವಾಹನಗಳನ್ನು ಬೆನ್ನಟ್ಟಿಕೊಂಡು ಹೋಗುತ್ತವೆ. ಇಂತಹ ಸಾಕಷ್ಟು ಘಟನೆಗಳನ್ನು ನೀವು ಸಹ ನೋಡಿರಬಹುದಲ್ವಾ. ಅಷ್ಟಕ್ಕೂ ನಾಯಿಗಳು ವಾಹನಗಳನ್ನು ಬೆನ್ನಟ್ಟುವುದೇಕೆ, ಇದರ ಹಿಂದಿರುವ ಕಾರಣವಾದರೂ ಏನೆಂಬುದರ ಸಂಪೂರ್ಣ ಮಾಹಿತಿ ತಿಳಿಯಿರಿ.

ನಾಯಿಗಳನ್ನು (dogs) ಮನುಷ್ಯನ ಅತ್ಯತ್ತಮ ಸ್ನೇಹಿತ ಅಂತ ಕರಿತಾರೆ. ಅವುಗಳು ಮನುಷ್ಯರೊಂದಿಗೆ ತುಂಬಾನ ಫ್ರೆಂಡ್ಲಿಯಾಗಿ ವರ್ತಿಸುತ್ತವೆ. ಆದರೆ ಕೆಲವೊಂದು ಬಾರಿ ವಿಶೇಷವಾಗಿ ಈ ಬೀದಿ ನಾಯಿಗಳು ರಸ್ತೆ ಬದಿ ನಡೆದುಕೊಂಡು ಹೋಗುವವರನ್ನು ಅಟ್ಟಾಡಿಸಿಕೊಂಡು ಹೋಗಿ ಅವರ ಮೇಲೆ ದಾಳಿ ನಡೆಸುತ್ತವೆ. ಅಷ್ಟೇ ಅಲ್ಲದೆ ಯಾರಾದ್ರೂ ಬೈಕ್, ಕಾರು ಚಲಾಯಿಸಿಕೊಂಡು ಹೋದಾಗಲೂ ಅಲ್ಲಿರುವ ನಾಯಿಗಳು ಆ ವಾಹನಗಳನ್ನು ಬೊಗಳುತ್ತಾ ಬೆನ್ನಟ್ಟಿ ಹೋಗುತ್ತವೆ. ನಾಯಿಗಳ ಈ ಕಿತಾಪತಿಯಿಂದ ಅದೆಷ್ಟೋ ಅಪಘಾತಗಳು ಕೂಡ ಸಂಭವಿಸಿವೆ. ಅಷ್ಟಕ್ಕೂ ಈ ಶ್ವಾನಗಳು ಚಲಿಸುವ ವಾಹನಗಳನ್ನು ಅಟ್ಟಿಸಿಕೊಂಡು ಹೋಗುವುದೇಕೆ, ಇದರ ಹಿಂದಿರುವ ವೈಜ್ಞಾನಿಕ ಕಾರಣವಾದರೂ ಏನು ಎಂಬುದನ್ನು ತಿಳಿಯಿರಿ.
ನಾಯಿಗಳು ಚಲಿಸುವ ವಾಹನಗಳನ್ನು ಅಟ್ಟಿಸಿಕೊಂಡು ಹೋಗುವುದೇಕೆ?
ನಾಯಿಗಳನ್ನು ಬಹಳ ನಿಷ್ಠಾವಂತ ಪ್ರಾಣಿಗಳು ಎಂದು ಪರಿಗಣಿಸಲಾಗಿದ್ದರೂ ಅವು ಕೆಲವೊಮ್ಮೆ ಬದ್ಧ ವೈರಿಗಳಂತೆ ಚಲಿಸುವ ಬೈಕ್, ಸ್ಕೂಟರ್, ಕಾರುಗಳನ್ನು ಅಟ್ಟಿಸಿಕೊಂಡು ಹೋಗುತ್ತವೆ. ಈ ನಡವಳಿಕೆಯ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆಯಂತೆ. ಅದೇನೆಂದರೆ ವಾಹನದ ಟೈರ್‌ಗಳಿಂದ ಬರುವ ಇತರ ನಾಯಿಗಳ ವಾಸನೆಯು ಈ ಶ್ವಾನಗಳನ್ನು ಕೆರಳಿಸುತ್ತವೆ. ಹಾಗಾಗಿ ಅವು ಅಟ್ಟಿಸಿಕೊಂಡು ಬರುವುದು.
ವಾಸ್ತವವಾಗಿ, ಕಾಡು ಪ್ರಾಣಿಗಳಂತೆ ನಾಯಿಗಳು ಸಹ ಆಗಾಗ್ಗೆ ತಮ್ಮ ಪ್ರದೇಶವನ್ನು ಸ್ಥಾಪಿಸಿಕೊಳ್ಳುತ್ತವೆ. ಆದ್ದರಿಂದ, ಅವು ವಾಹನಗಳ ಟೈರ್‌ಗಳು, ಕಂಬಗಳು ಮತ್ತು ಗೋಡೆಗಳ ಮೇಲೆ ಮೂತ್ರ ವಿಸರ್ಜಿಸುತ್ತವೆ. ಈ ಮೂತ್ರ ವಿಸರ್ಜನೆಯ ವಾಸನೆಯ ಮೂಲಕ ತಮ್ಮ ಪ್ರದೇಶವನ್ನು ಗುರುತಿಸುತ್ತವೆ. ನಾಯಿಗಳು ವಾಸನೆಯ ತೀಕ್ಷ್ಣ ಪ್ರಜ್ಞೆಯನ್ನು ಹೊಂದಿರುತ್ತವೆ, ಇದು ಅವುಗಳಿಗೆ ಇತರ ನಾಯಿಗಳ ವಾಸನೆಯನ್ನು ತ್ವರಿತವಾಗಿ ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ. ವಾಹನವು ರಸ್ತೆಯ ಮೂಲಕ ಹಾದುಹೋದ ತಕ್ಷಣ, ಅಲ್ಲಿನ ನಾಯಿಗಳು ನಿಮ್ಮ ಟೈರ್‌ಗಳಿಂದ ಮತ್ತೊಂದು ನಾಯಿಯ ವಾಸನೆಯನ್ನು ತೆಗೆದುಕೊಂಡರೆ, ಅವು ತಕ್ಷಣ ನಿಮ್ಮ ವಾಹನವನ್ನು ಅಟ್ಟಿಸಿಕೊಂಡು ಬರುತ್ತವೆ. ನಾಯಿಗಳು ತಮ್ಮ ಪ್ರದೇಶದಲ್ಲಿ ಇತರ ಪ್ರದೇಶಗಳ ನಾಯಿಗಳು ಬರುವುದನ್ನು ಸಹಿಸುವುದಿಲ್ಲ. ನಿಮ್ಮ ವಾಹನದ ಟೈರ್‌ಗಳಲ್ಲಿ ಇತರ ಪ್ರದೇಶಗಳ ನಾಯಿಗಳ ವಾಸನೆಯನ್ನು ಗ್ರಹಿಸಿದ ತಕ್ಷಣ, ಅವು ಒಟ್ಟಾಗಿ ವಾಹನವನ್ನು ಬೆನ್ನಟ್ಟಲು ಪ್ರಾರಂಭಿಸುತ್ತವೆ.
ಇದನ್ನೂ ಓದಿ: ಸೀನು ಬರುವುದೇಕೆ? ಇದರ ಹಿಂದಿನ ವೈಜ್ಞಾನಿಕ ಕಾರಣವನ್ನು ತಿಳಿಯಿರಿ
ಹಳೆಯ ಗಾಯಗಳು ಸಹ ಕಾರಣವಾಗಬಹುದು:
ಕೆಲವೊಮ್ಮೆ ಭಾವನೆಗಳ ಕಾರಣದಿಂದಲೂ ನಾಯಿಗಳು ವಾಹನಗಳನ್ನು ಬೆನ್ನಟ್ಟುತ್ತವೆ. ಹೌದು ನಾಯಿಗಳು ಸೂಕ್ಷ್ಮ ಜೀವಿಗಳು. ಆದ ಕಾರಣದಿಂದ ತಮ್ಮ ಜೊತೆಗಾರ ವಾಹನ ಅಪಘಾತದಲ್ಲಿ ಮರಣ ಹೊಂದಿದರೆ ಅಥವಾ ಗಾಯಗೊಂಡರೆ, ಅದೇ ರೀತಿಯ ವಾಹನಗಳನ್ನು ಅವುಗಳು ಕೋಪದಲ್ಲಿ ಅಟ್ಟಾಡಿಸಿಕೊಂಡು ಹೋಗುತ್ತವೆ.
ನಾಯಿ ನಿಮ್ಮ ಬೈಕನ್ನು ಬೆನ್ನಟ್ಟಲು ಪ್ರಾರಂಭಿಸಿದರೆ, ವಾಹನದ ವೇಗವನ್ನು ಹೆಚ್ಚಿಸಬೇಡಿ, ಇದರಿಂದ ಅಪಘಾತ ಸಂಭವಿಸಬಹುದು. ನಾಯಿಗಳು ಸಾಮಾನ್ಯವಾಗಿ 100-200 ಮೀಟರ್‌ಗಳ ನಂತರ ಬೆನ್ನಟ್ಟುವುದನ್ನು ನಿಲ್ಲಿಸುತ್ತವೆ. ಮತ್ತು ಜೋರಾದ ಶಬ್ದಗಳಿಗೆ ಸ್ವಲ್ಪ ಹೆದರಿಸುತ್ತವೆ. ಹಾಗಾಗಿ ನಾಯಿ ನಿಮ್ಮ ಬೈಕನ್ನು ಬೆನ್ನಟ್ಟಲು ಪ್ರಾರಂಭಿಸಿದರೆ, ಕೆಲವು ಸೆಕೆಂಡುಗಳ ಕಾಲ ನಿರಂತರವಾಗಿ ಹಾರ್ನ್ ಮಾಡಿ ಆಗ ಅವು ಅಲ್ಲಿಂದ ಓಡಿ ಹೋಗುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:16 pm, Sat, 13 December 25




