AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Wedding Rituals: ಮದುವೆಯಲ್ಲಿ ಹೆಚ್ಚಾಗಿ ವಧು ಕೆಂಪು ಬಣ್ಣದ ಸೀರೆ ಉಡೋದು ಯಾಕೆ ಗೊತ್ತಾ?

ಹಿಂದೂ ಮದುವೆಗಳಲ್ಲಿ ವಧು ಹೆಚ್ಚಾಗಿ ಕೆಂಪು ಬಣ್ಣದ ಸೀರೆ ಉಟ್ಟಿರುವುದನ್ನು ನೀವು ನೋಡಿರುತ್ತೀರಿ. ಯಾವುದೇ ಟ್ರೆಂಡ್​ ಬಂದರೂ ವಧುವಿನ ಸೀರೆಯ ವಿನ್ಯಾಸದಲ್ಲಿ ಬದಲಾವಣೆಯಾದರೂ, ಅದರ ಬಣ್ಣದಲ್ಲಿ ಇಂದಿಗೂ ಕೆಂಪು ಮೊದಲ ಆದ್ಯತೆಯಲ್ಲಿದೆ. ಆದ್ದರಿಂದ ಕೆಂಪು ಬಣ್ಣವನ್ನು ಆಯ್ಕೆ ಮಾಡಲು ಕಾರಣವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Wedding Rituals: ಮದುವೆಯಲ್ಲಿ ಹೆಚ್ಚಾಗಿ ವಧು ಕೆಂಪು ಬಣ್ಣದ ಸೀರೆ ಉಡೋದು ಯಾಕೆ ಗೊತ್ತಾ?
ಕೆಂಪು ಸೀರೆ
ಅಕ್ಷತಾ ವರ್ಕಾಡಿ
|

Updated on: Dec 13, 2025 | 11:56 AM

Share

ಹಿಂದೂ ಧರ್ಮದ 16 ಸಂಸ್ಕಾರಗಳಲ್ಲಿ(ಷೋಡಶ) ಮದುವೆಯೂ ಒಂದು. ಪ್ರತಿ ಯುವತಿಯ ಜೀವನದಲ್ಲಿ ಇದು ಒಂದು ವಿಶೇಷ ಕ್ಷಣ. ಮದುವೆಯ ಸಮಯದಲ್ಲಿ, ವಧು ಉಡುಪಿನಿಂದ ಹಿಡಿದು ಮೇಕಪ್‌ವರೆಗೆ ಎಲ್ಲದಕ್ಕೂ ವಿಶೇಷವಾಗಿ ಗಮನಹರಿಸಲಾಗುತ್ತದೆ. ಅದರಂತೆ ವಿವಿಧ ರೀತಿಯಾದ ಶಾಸ್ತ್ರಗಳನ್ನು, ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ. ಈ ಸಂಪ್ರದಾಯಗಳಲ್ಲೊಂದು ಕೆಂಪು ಬಣ್ಣದ ಸೀರೆ.

ಯಾವುದೇ ಫ್ಯಾಶನ್, ಟ್ರೆಂಡ್​ ಬಂದರೂನು ವಧುವಿನ ಸೀರೆಯ ವಿನ್ಯಾಸದಲ್ಲಿ ಬದಲಾವಣೆಯಾದರೂ, ಅದರ ಬಣ್ಣದಲ್ಲಿ ಇಂದಿಗೂ ಕೆಂಪು ಮೊದಲ ಆದ್ಯತೆಯಲ್ಲಿದೆ. ಹೌದು ಸಾಕಷ್ಟು ಮದುವೆಗಳಲ್ಲಿ ವಧು ಕೆಂಪು ಸೀರೆ ಉಟ್ಟಿರುವುದನ್ನು ನೀವು ನೋಡಿರುತ್ತೀರಿ. ಆದರೆ ಮದುವೆಯಂತಹ ಶುಭ ಮೂಹೂರ್ತಗಳಲ್ಲಿ ಕೆಂಪು ಬಣ್ಣವನ್ನು ಆಯ್ಕೆ ಮಾಡಲು ಕಾರಣವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕೆಂಪು ಬಣ್ಣದ ಮಹತ್ವ:

ಹಿಂದೂ ಧರ್ಮದಲ್ಲಿ, ಕೆಂಪು ಬಣ್ಣವನ್ನು ಸಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಬಣ್ಣವನ್ನು ಶಕ್ತಿ, ಪ್ರೀತಿ ಮತ್ತು ಶೌರ್ಯದ ಸಂಕೇತವೆಂದು ಸಹ ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ವಧುಗೆ ಕೆಂಪು ಬಣ್ಣದ ಸೀರೆಯನ್ನು ಉಡಿಸಲಾಗುತ್ತದೆ. ಇದಲ್ಲದೇ ಕೆಂಪು ಬಣ್ಣವು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ. ಸಂಪತ್ತಿನ ದೇವತೆ ಮತ್ತು ಲಕ್ಷ್ಮಿ ಕೂಡ ಯಾವಾಗಲೂ ಕೆಂಪು ಬಟ್ಟೆಗಳನ್ನು ಧರಿಸಿರುತ್ತಾಳೆ. ಮದುವೆಯ ನಂತರವೂ ವಧುವನ್ನು ಲಕ್ಷ್ಮಿ ದೇವಿಯ ಸಾಕಾರವೆಂದು ಪರಿಗಣಿಸಲಾಗುತ್ತದೆ. ಕೆಂಪು ಬಣ್ಣ ವಧುವಿಗೆ ಅದೃಷ್ಟ ಮತ್ತು ಸಮೃದ್ಧಿ ಬರುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಲಿಂಗ ಭೈರವಿ ದೇವಾಲಯದಲ್ಲಿ ಸಮಂತಾ ಸರಳ ವಿವಾಹ; ಇಲ್ಲಿನ ಇಂಟರೆಸ್ಟಿಂಗ್​ ಸಂಗತಿ ಮತ್ತು ವಿವಾಹ ಪ್ರಕ್ರಿಯೆಯ ವಿವರ ಇಲ್ಲಿದೆ

ಕೆಂಪು ಬಣ್ಣವನ್ನು ಧಾರ್ಮಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದಿಂದ ಶುಭವೆಂದು ಪರಿಗಣಿಸುವುದಲ್ಲದೆ, ಅದರ ಹಿಂದೆ ಮನೋವಿಜ್ಞಾನವೂ ಇದೆ. ಅನೇಕ ಜನರು ಕೆಂಪು ಬಣ್ಣವನ್ನು ಪ್ರೀತಿ, ಶಕ್ತಿ ಮತ್ತು ಶುಭದ ಸಂಕೇತವೆಂದು ಪರಿಗಣಿಸುತ್ತಾರೆ. ಅದಕ್ಕಾಗಿಯೇ ಮದುವೆಯಂತಹ ಶುಭ ಸಂದರ್ಭಗಳಲ್ಲಿ ಕೆಂಪು ಬಟ್ಟೆಗಳನ್ನು ಧರಿಸುವುದು ಒಳ್ಳೆಯ ಆರಂಭದ ಸಂಕೇತವೆಂದು ಹೇಳಲಾಗುತ್ತದೆ. ಇದಲ್ಲದೇ ಕೆಂಪು ಹೊಸ ಆರಂಭ, ಉತ್ಸಾಹ ಮತ್ತು ಅಭಿವೃದ್ಧಿಯನ್ನು ಪ್ರತಿನಿಧಿಸುತ್ತದೆ, ಸಂಪತ್ತನ್ನು ಹೆಚ್ಚಿಸುತ್ತದೆ. ಕೆಂಪು ಬಣ್ಣವು ಸಂತೋಷ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ