
ಬೇಕಾದಷ್ಟು ಹಣ, ಆಸ್ತಿ, ಶ್ರೀಮಂತಿಕೆ ಇದ್ರೆ ಮಾತ್ರ ಜೀವನದಲ್ಲಿ ಸಂತೋಷವಾಗಿರಲು ಸಾಧ್ಯ, ಇದ್ಯಾವುದು ಇಲ್ಲದಿದ್ದರೆ ಸಂತೋಷವಾಗಿರಲು ಸಾಧ್ಯವೇ ಇಲ್ಲವೆಂದು ಹಲವರು ಅಂದುಕೊಳ್ಳುತ್ತಾರೆ. ಆದ್ರೆ ಆಚಾರ್ಯ ಚಾಣಕ್ಯರ (Acharya Chanakya) ಪ್ರಕಾರ ಈ ಮೂರು ಸಂಗತಿಗಳನ್ನು ಹೊಂದಿರುವ ವ್ಯಕ್ತಿಗಳೇ ಈ ಭೂಮಿಯ ಮೇಲಿನ ನಿಜವಾದ ಅದೃಷ್ಟವಂತರಂತೆ, ಅವರು ಭೂಮಿಯ ಮೇಲೆಯೇ ಸ್ವರ್ಗ ಸುಖವನ್ನು ಕಾಣುತ್ತಾರಂತೆ. ಅಷ್ಟಕ್ಕೂ ಆ ಅದೃಷ್ಟವಂತ ವ್ಯಕ್ತಿಗಳು ಯಾರೆಂಬುದನ್ನು ನೋಡೋಣ ಬನ್ನಿ.
ಸದ್ಗುಣಶೀಲ ಮಕ್ಕಳನ್ನು ಹೊಂದಿರುವ ಪೋಷಕರು: ಆಚಾರ್ಯ ಚಾಣಕ್ಯರ ಪ್ರಕಾರ, ಸದ್ಗುಣಶೀಲ ಮಕ್ಕಳನ್ನು ಹೊಂದಿರುವ ಪೋಷಕರು ಅತ್ಯಂತ ಅದೃಷ್ಟವಂತರು. ಏಕೆಂದರೆ ಇಂತಹ ಮಕ್ಕಳು ಹೆತ್ತವರನ್ನು ಖುಷಿಯಾಗಿ ನೋಡಿಕೊಳ್ಳುತ್ತಾರೆ. ಅವರ ಮೇಲೆ ಅಪಾರವಾದ ಗೌರವವನ್ನೂ ಹೊಂದಿರುತ್ತಾರೆ. ಇಂತಹ ಪೋಷಕರು ನೋವಿನಲ್ಲಿ ಕೊರಗುವುದಿಲ್ಲ, ಅವರು ಭೂಮಿಯ ಮೇಲೆ ಸ್ವರ್ಗದ ಸಂತೋಷವನ್ನು ಅನುಭವಿಸುತ್ತಾರೆ ಎನ್ನುತ್ತಾರೆ ಚಾಣಕ್ಯ.
ಯೋಗ್ಯ ಹೆಂಡತಿಯನ್ನು ಪಡೆದವರು: ಚಾಣಕ್ಯ ಹೇಳುವಂತೆ ಹೆಂಡತಿ ಕೇವಲ ಜೀವನ ಸಂಗಾತಿಯಲ್ಲ, ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿಯ ಅಡಿಪಾಯ. ತನ್ನ ಗಂಡನನ್ನು ಅರ್ಥಮಾಡಿಕೊಳ್ಳುವ, ಬೆಂಬಲಿಸುವ, ಗೌರವದಿಂದ ನಡೆಸಿಕೊಳ್ಳುವ, ಗಂಡನ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿ ನಿಲ್ಲುವ ಹೆಂಡತಿಯನ್ನು ಪಡೆದ ವ್ಯಕ್ತಿ ಯ ಜೀವನವು ಸಂತೋಷದಿಂದ ತುಂಬಿರುತ್ತಂತೆ.
ಇದನ್ನೂ ಓದಿ: ಈ ಅಮೂಲ್ಯ ಸಂಗತಿಗಳನ್ನು ಕಳೆದುಕೊಂಡರೆ ಮರಳಿ ಪಡೆಯಲು ಸಾಧ್ಯವಿಲ್ಲ
ಸಂತೃಪ್ತ ಜೀವನ ನಡೆಸುವವರು: ಯಾವುದಕ್ಕೂ ದುರಾಸೆ ಪಡದೆ, ಇತರರ ಬಗ್ಗೆ ಅಸೂಯೆ ಪಡೆದೆ, ತನ್ನಲ್ಲಿ ಏನಿದೆ ಅದರಲ್ಲಿಯೇ ಖುಷಿ ಕಾಣುತ್ತಾ ಸಂತೃಪ್ತ ಜೀವನ ನಡೆಸುವ ವ್ಯಕ್ತಿ ಯಾವಾಗಲೂ ಸಂತೋಷದಿಂದ ಇರುತ್ತಾರೆ, ಆತ ಜೀವನದ ಬಗ್ಗೆ ದುಃಖ ಪಡುವುದಿಲ್ಲ. ಆದ್ದರಿಂದ ಇರುವುದರಲ್ಲಿಯೇ ತೃಪ್ತಿ ಪಡಬೇಕು ಎನ್ನುತ್ತಾರೆ ಚಾಣಕ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ