Chanakya Niti: ಮಹಿಳೆಯರು ಅಡುಗೆ ಮಾಡುವ ಸಂದರ್ಭದಲ್ಲಿ ಈ ಮೂರು ತಪ್ಪುಗಳನ್ನು ಎಂದಿಗೂ ಮಾಡಬಾರದಂತೆ

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಯಶಸ್ಸು ಸಾಧಿಸಲು, ಜ್ಞಾನ ಸಂಪಾದನೆಗೆ, ಸಂಪತ್ತು ಗಳಿಕೆಗೆ, ಸುಖ ದಾಂಪತ್ಯ ಜೀವನಕ್ಕೆ ಏನು ಮಾಡಬೇಕು, ಏನು ಮಾಡಬಾರದು ಹಲವು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಆಡುಗೆ ಮಾಡುವಾಗ ಮಹಿಳೆಯರು ಮುಖ್ಯವಾಗಿ ಈ ಮೂರು ತಪ್ಪುಗಳನ್ನು ಮಾಡಲೇಬಾರದು ಇದರಿಂದ ಮನೆಯ ಸಂತೋಷ, ಸಮೃದ್ಧಿ ಹಾಳಾಗುತ್ತದೆ ಎಂದ್ದಿದ್ದಾರೆ. ಹಾಗಿದ್ದರೆ ಆಡುಗೆ ಮಾಡುವ ಸಂದರ್ಭದಲ್ಲಿ ಮಹಿಳೆಯರು ಮಾಡುವ ಆ ತಪ್ಪುಗಳು ಯಾವುವು ಎಂಬುದನ್ನು ನೋಡೋಣ.

Chanakya Niti: ಮಹಿಳೆಯರು ಅಡುಗೆ ಮಾಡುವ ಸಂದರ್ಭದಲ್ಲಿ ಈ ಮೂರು ತಪ್ಪುಗಳನ್ನು ಎಂದಿಗೂ ಮಾಡಬಾರದಂತೆ
ಚಾಣಕ್ಯ ನೀತಿ
Image Credit source: freepik

Updated on: Oct 19, 2025 | 9:37 AM

ಅಡುಗೆ ಮನೆಯಲ್ಲಿ ಮಹಿಳೆಯರದ್ದೇ ಸಾಮ್ರಾಜ್ಯ. ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಅಡುಗೆ (cooking) ಕೆಲಸವನ್ನು ಮಹಿಳೆಯರೇ ಮಾಡುತ್ತಾರೆ. ಮನೆಯಿಂದ ಹೊರಗೆ ಹೋಗಿ ದುಡಿದರೂ, ಎಷ್ಟೇ ದುಃಖ-ನೋವಿದ್ದರೂ ಪ್ರತಿನಿತ್ಯ ಮನೆಯವರಿಗೆ ರುಚಿ ರುಚಿಯಾದ ಊಟವನ್ನು ಮಾಡಿ ಬಡಿಸುತ್ತಾರೆ.  ಹೀಗೆ ಅಡುಗೆ ಮಾಡುವಾಗ ಕೆಲವೊಂದು ತಪ್ಪುಗಳಾಗುತ್ತದೆ. ಈ  ತಪ್ಪುಗಳನ್ನು ಪದೇ ಪದೇ ಪುನರಾವರ್ತಿಸಿದರೆ, ಅದು ಕುಟುಂಬದ ಸಂತೋಷ ಮತ್ತು ಸಮೃದ್ಧಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹೌದು ಅಡುಗೆ ಮಾಡುವಾಗ ನೀವು ಈ ತಪ್ಪುಗಳನ್ನು ಮಾಡಿದರೆ ಅದು  ನಿಮ್ಮ ಕುಟುಂಬದ ಸಂತೋಷ ಮತ್ತು ಸಮೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದಂತೆ. ಹಾಗಿದ್ದರೆ ಆ ಸಾಮಾನ್ಯ ತಪ್ಪುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಅಡುಗೆ ಮಾಡುವಾಗ ಮಹಿಳೆಯರು ಮಾಡುವಂತಹ ಸಾಮಾನ್ಯ ತಪ್ಪುಗಳು:

ಅಡುಗೆ ಮಾಡುವಾಗ ಮಾತನಾಡುವುದು:  ಆಚಾರ್ಯ ಚಾಣಕ್ಯರ ಪ್ರಕಾರ, ಮಹಿಳೆ ಅಡುಗೆ ಮಾಡುವಾಗ ಇತರರೊಂದಿಗೆ ಮಾತನಾಡಬಾರದು ಅಥವಾ ಅವಳ ಗಮನ ಬೇರೆಡೆಗೆ ಸೆಳೆಯುವ ಯಾವ ಕೆಲಸವನ್ನು ಮಾಡಬಾರದು. ಏಕೆಂದರೆ ಅಡುಗೆ ಮಾಡುವಾಗ ಮನಸ್ಸು ಚಂಚಲವಾದರೆ ಅದು ಆಹಾರದ ರುಚಿಯ ಮೇಲೆ ಪರಿಣಾಮ ಬೀರುತ್ತದೆ. ರುಚಿಕರವಾಗಿಲ್ಲದ ಆಹಾರವನ್ನು ಸೇವನೆ ಮಾಡುವುದರಿಂದ ಮನೆಯವರ ಮನಸ್ಸಿಗೂ ಸ್ವಲ್ಪ ನೋವಾಗುತ್ತದೆ. ಹೀಗಾದರೆ ಮನೆಯಲ್ಲಿ ಅಡುಗೆ ವಿಚಾರವಾಗಿ ಕಿರಿಕ್‌ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನೀವು ಅಡುಗೆ ಮಾಡುವಾಗಲೆಲ್ಲಾ ನಿಮ್ಮ ಸಂಪೂರ್ಣ ಗಮನ ನೀವು ಮಾಡುವ ಮೇಲೆ ಕೇಂದ್ರೀಕೃತವಾಗಿರಬೇಕು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ.

ಸ್ನಾನ ಮಾಡದೆ ಅಡುಗೆ ಮಾಡುವುದು: ನೀವು ಅಡುಗೆ ಮಾಡಲು ಅಡುಗೆ ಮನೆಗೆ ಪ್ರವೇಶಿಸುವಾಗ, ನಿಮ್ಮ ದೇಹ ಮತ್ತು ಬಟ್ಟೆಗಳು ಸಂಪೂರ್ಣವಾಗಿ ಸ್ವಚ್ಛವಾಗಿರಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಸ್ನಾನ ಮಾಡದೆ ಅಡುಗೆ ಮಾಡುವುದು ಅಶುದ್ಧವೆಂದು ಪರಿಗಣಿಸಲಾಗಿದೆ. ದೇಹವನ್ನು ಸ್ವಚ್ಛಗೊಳಿಸದೆ ಅಡುಗೆ ಮಾಡುವುದರಿಂದ ಮತ್ತು ಅಂತಹ ಆಹಾರವನ್ನು ಸೇವನೆ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಮತ್ತು ಮಾನಸಿಕ ತೊಂದರೆಗಳು ಉಂಟಾಗಬಹುದು. ಈ ತಪ್ಪು ಸಂಪೂರ್ಣ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹರಡುತ್ತದೆ ಮತ್ತು ಪ್ರಗತಿಗೆ ಅಡ್ಡಿಯಾಗುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ.

ಇದನ್ನೂ ಓದಿ
ವಿದ್ಯಾರ್ಥಿಗಳು ಈ ಅಭ್ಯಾಸಗಳನ್ನು ತ್ಯಜಿಸಲೇಬೇಕು ಎನ್ನುತ್ತಾರೆ ಚಾಣಕ್ಯ
ಚಾಣಕ್ಯರ ಪ್ರಕಾರ ಈ ಅಭ್ಯಾಸಗಳಿರುವ ಜನ ಮಾತ್ರ ಶ್ರೀಮಂತರಾಗುತ್ತಾರಂತೆ
ಇಂತಹ ಸ್ನೇಹಿತರು ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ
ಈ ನಾಲ್ಕು ಕೆಲಸಗಳನ್ನು ಏಕಾಂತದಲ್ಲಿರುವಾಗಲೇ ಮಾಡಿದರೆ ಒಳ್ಳೆಯದಂತೆ

ಇದನ್ನೂ ಓದಿ:  ವಿದ್ಯಾರ್ಥಿಗಳು ಅಭ್ಯಾಸಗಳನ್ನು ತ್ಯಜಿಸಲೇಬೇಕು ಎನ್ನುತ್ತಾರೆ ಚಾಣಕ್ಯ

ಕೋಪ ಅಥವಾ ಹಿಂಜರಿಕೆಯಲ್ಲಿ ಅಡುಗೆ ಮಾಡುವುದು: ಅನೇಕ ಬಾರಿ, ಮನೆಯಲ್ಲಿ ಜಗಳಗಳು ನಡೆದಾಗ ಇದರಿಂದಾಗಿ ಮಹಿಳೆಯರು ಸ್ವಲ್ಪ ದುಃಖದಲ್ಲಿ ಇರುತ್ತಾರೆ. ಹೀಗೆ ದುಃಖ ಅಥವಾ ನೋವಿನಲ್ಲಿ ಇರುವ ಸಂದರ್ಭದಲ್ಲಿ ಮಹಿಳೆಯರು ಎಂದಿಗೂ ಅಡುಗೆ ಮಾಡಬಾರದಂತೆ. ಏಕೆಂದರೆ ಕೋಪ ಅಥವಾ ದುಃಖದಲ್ಲಿ ಅಡುಗೆ ಮಾಡಿದಾಗ, ಅದು ಆಹಾರದ ರುಚಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದು ಕುಟುಂಬ ಸದಸ್ಯರಲ್ಲಿ ಕಿರಿಕಿರಿಯನ್ನು ಉಂಟುಮಾಡಬಹುದು. ಅಂತಹ ಆಹಾರವನ್ನು ಸೇವಿಸಿದರೆ, ಅದು ಕುಟುಂಬದೊಳಗೆ ಘರ್ಷಣೆಗಳು ಮತ್ತು ಪರಸ್ಪರ ಸಂಘರ್ಷವನ್ನು ಹೆಚ್ಚಿಸುತ್ತದೆ. ಹಾಗಾಗಿ ಅಡುಗೆ ಮಾಡುವಾಗ, ನಿಮ್ಮ ಮನಸ್ಸು ಶಾಂತವಾಗಿರಬೇಕು ಮತ್ತು ನೀವು ಸಂತೋಷವಾಗಿರಬೇಕು, ಮುಖ್ಯವಾಗಿ ಸಂಪೂರ್ಣ ಮನಸ್ಸಿನಿಂದ ಖುಷಿ ಖುಷಿಯಾಗಿ ಅಡುಗೆ ತಯಾರಿಸಬೇಕು ಎಂದು ಚಾಣಕ್ಯರು ಹೇಳುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ