ಚೀಸ್​ನಿಂದ ಮಾಡಲಾಗುವ 100 ಬೆಸ್ಟ್​ ತಿಂಡಿಗಳಲ್ಲಿ ಭಾರತೀಯ ತಿಂಡಿಗೂ ಸ್ಥಾನ

|

Updated on: Nov 28, 2023 | 2:05 PM

ಭಾರತದ ತಿಂಡಿಗಳು ಇಡೀ ವಿಶ್ವದ ಎಲ್ಲ ದೇಶಗಳಲ್ಲೂ ಪ್ರಸಿದ್ಧಿ ಪಡೆಯುತ್ತಿವೆ. ದೋಸೆ, ಇಡ್ಲಿ, ರೋಟಿ ಮುಂತಾದ ತಿಂಡಿಗಳಿಗೆ ವಿದೇಶದಲ್ಲೂ ಬೇಡಿಕೆ ಇದೆ. ಇದೀಗ ಆ ಪಟ್ಟಿಗೆ ಭಾರತದ ಚೀಸ್ ತಿಂಡಿಗಳು ಕೂಡ ಸೇರಿವೆ. ಚೀಸ್​ನಿಂದ ಮಾಡಲಾಗುವ 100 ಬೆಸ್ಟ್​ ತಿಂಡಿಗಳಲ್ಲಿ ಭಾರತೀಯ ತಿಂಡಿಗಳು ಕೂಡ ಸ್ಥಾನ ಪಡೆದಿವೆ.

ಚೀಸ್​ನಿಂದ ಮಾಡಲಾಗುವ 100 ಬೆಸ್ಟ್​ ತಿಂಡಿಗಳಲ್ಲಿ ಭಾರತೀಯ ತಿಂಡಿಗೂ ಸ್ಥಾನ
ರಸಗುಲ್ಲ
Image Credit source: iStock
Follow us on

ಚೀಸ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಎಲ್ಲೋ ಅಪರೂಪಕ್ಕೆ ಕೆಲವರು ಚೀಸ್ ಇಷ್ಟಪಡದವರು ಸಿಗಬಹುದು ಅಷ್ಟೆ. ಚೀಸ್ ತನ್ನದೇ ಆದ ಅಭಿಮಾನಿಗಳನ್ನು ಹೊಂದಿದೆ. ಟೇಸ್ಟ್‌ಅಟ್ಲಾಸ್, ಅನುಭವಿ ಟ್ರಾವೆಲ್ ಆನ್‌ಲೈನ್ ಮಾರ್ಗದರ್ಶಿ ‘ಚೀಸ್‌ನಿಂದ ಮಾಡುವ 100 ಅತ್ಯುತ್ತಮ ಭಕ್ಷ್ಯಗಳು’ ಎಂಬ ಪಟ್ಟಿಯನ್ನು ಪ್ರಕಟಿಸಿದೆ. ಅದರಲ್ಲಿ ಅಗ್ರ ಸ್ಥಾನವನ್ನು ಪೋಲೆಂಡ್‌ನ ಪಿರೋಗಿ ಪಡೆದಿದೆ. ಈ ಪಟ್ಟಿಯಲ್ಲಿ ಭಾರತೀಯ ಚೀಸ್ ತಿಂಡಿಗಳಿಗೂ ಸ್ಥಾನ ಸಿಕ್ಕಿದೆ.

ಭಾರತದಲ್ಲಿ ಜನಪ್ರಿಯ ಸಿಹಿತಿಂಡಿಯಾಗಿರುವ ರಸಗುಲ್ಲ 95ನೇ ಸ್ಥಾನ ಪಡೆದಿದೆ. ಮಲೈ ಕೋಫ್ತಾ 68ನೇ ಸ್ಥಾನ ಪಡೆದುಕೊಂಡಿದೆ. ಶಾಹಿ ಪನೀರ್ 39ನೇ ಸ್ಥಾನ ಹಾಗೂ ವಿಂದಾಲೂನ ಪನೀರ್ 30ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಮೆದುಳಿನ ಆರೋಗ್ಯಕ್ಕೆ ಚೀಸ್ ತಿನ್ನಿ; ತಜ್ಞರು ಹೇಳೋದೇನು?

ಈ ಪಟ್ಟಿ ಪ್ರಕಟವಾದ ಬಳಿಕ ಸಿಹಿ ತಿನಿಸಾದ ರಸಗುಲ್ಲಾ ನಮ್ಮದೆಂದು ಪಶ್ಚಿಮ ಬಂಗಾಳ ಮತ್ತು ಒಡಿಶಾ ನಡುವೆ ಸ್ವಲ್ಪ ಹಗ್ಗ ಜಗ್ಗಾಟ ನಡೆದಿದೆ. ಇಬ್ಬರೂ ಅದನ್ನು ತಮ್ಮ ಡೆಸರ್ಟ್ ತಿನಿಸು ಎಂದು ಹೇಳಿಕೊಳ್ಳುತ್ತಿದ್ದಾರೆ. ಶಾಹಿ ಪನೀರ್ ಭಾರತದ ಮೊಘಲ್ ಪಾಕಪದ್ಧತಿಯ ತಿನಿಸಾಗಿದ್ದು, ಪನೀರ್ ಚೀಸ್, ಈರುಳ್ಳಿ, ಬಾದಾಮಿ ಪೇಸ್ಟ್ ಮತ್ತು ಕಟುವಾದ ಟೊಮ್ಯಾಟೊ ಕ್ರೀಮ್ ಸಾಸ್‌ನಿಂದ ಇದನ್ನು ಮಾಡಲಾಗುತ್ತದೆ. ಸಾಗ್ ಪನೀರ್ ಪಂಜಾಬ್‌ ತಿನಿಸಾಗಿದೆ. ವಿಂದಾಲೂ ಇಂಗ್ಲೆಂಡ್‌ನಲ್ಲಿ ಹುಟ್ಟಿ ಭಾರತದ ಗೋವಾ ಮತ್ತು ಕೊಂಕಣ ಪ್ರದೇಶಗಳಲ್ಲಿ ಜನಪ್ರಿಯವಾಗಿದೆ. ಇದು ಮಾಂಸಾಹಾರಿ ತಿನಿಸಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ