Coconut Fiber : ನೀವು ತೆಂಗಿನ ನಾರನ್ನು ಬಿಸಾಡುತ್ತೀರಾ? ಹಾಗಾದ್ರೆ ಇದರ ಪ್ರಯೋಜನ ನಿಮಗೆ ತಿಳಿದಿರಲಿ

| Updated By: ಅಕ್ಷತಾ ವರ್ಕಾಡಿ

Updated on: Oct 15, 2024 | 6:17 PM

ತೆಂಗಿನಕಾಯಿ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ, ವಿವಿಧ ರೀತಿಯ ಅಡುಗೆಗಳಲ್ಲಿ ಬಳಸುವ ಈ ತೆಂಗಿನಕಾಯಿ, ತೆಂಗಿನ ಎಣ್ಣೆಯೂ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇನ್ನು ಈ ತೆಂಗಿನ ನಾರು ಕೇವಲ ಒಲೆ ಹಚ್ಚಲು ಉಪಯೋಗಕ್ಕೆ ಬರುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಅಷ್ಟೇ ಅಲ್ಲದೇ, ತೆಂಗಿನ ನಾರಿನಿಂದ ಹೆಚ್ಚಾಗಿ ಪಾತ್ರೆ ತೊಳೆಯುವುದರಿಂದ ಹಿಡಿದು ಕೂದಲಿನ ಆರೈಕೆಗೂ ಸಹಕಾರಿಯಾಗಿದೆ. ಹಾಗಾದ್ರೆ ಈ ತೆಂಗಿನನಾರಿನ ಪ್ರಯೋಜನಗಳ ಬಗೆಗಿನ ಮಾಹಿತಿ ಇಲ್ಲಿದೆ.

Coconut Fiber : ನೀವು ತೆಂಗಿನ ನಾರನ್ನು ಬಿಸಾಡುತ್ತೀರಾ? ಹಾಗಾದ್ರೆ ಇದರ ಪ್ರಯೋಜನ ನಿಮಗೆ ತಿಳಿದಿರಲಿ
Coconut Fiber
Follow us on

ಪ್ರತಿಯೊಬ್ಬರು ಅಡುಗೆಗೆ ಬಳಸುವ ತೆಂಗಿನಕಾಯಿ ಖಾದ್ಯಗಳ ರುಚಿಯನ್ನು ಹೆಚ್ಚಿಸುವುದಲ್ಲದೆ ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು. ಎಳನೀರು, ತೆಂಗಿನಕಾಯಿ, ಒಣಗಿದರೆ ಕೊಬ್ಬರಿ, ಕಸಗುಡಿಸಲು ಪೊರಕೆ, ಹೊಲ ಗದ್ದೆಗೆ ಗೊಬ್ಬರ, ಮನೆ ಉರುವಲು ಹೀಗೆ ಇದರ ಪ್ರಯೋಜನಗಳು ಇವೆ. ವೇಸ್ಟ್ ಎಂದು ಬಿಸಾಡುವ ಈ ತೆಂಗಿನನಾರನ್ನು ವಿವಿಧ ರೀತಿಯಲ್ಲಿ ದಿನನಿತ್ಯದ ಬದುಕಿನಲ್ಲಿ ಬಳಸಿಕೊಳ್ಳಬಹುದು.

  1. ಪಾತ್ರೆಗಳನ್ನು ತೊಳೆಯಲು ಸ್ಕ್ರಬರ್ ಗಳನ್ನು ಬಳಸುವುದನ್ನು ನೋಡಿರಬಹುದು. ಆದರೆ ತೆಂಗಿನ ನಾರಿನಿಂದಲೂ ನಾವು ಪಾತ್ರೆಗಳನ್ನು ತೊಳೆಯಬಹುದು. ಇದು ಪಾತ್ರೆಯಲ್ಲಿನ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ತೆಂಗಿನನಾರು ಮೊಂಡುತನದ ಕಲೆಗಳನ್ನು ತೆಗೆದುಹಾಕಲು ಸಹಕಾರಿಯಾಗಿದೆ.
  2. ತೆಂಗಿನ ನಾರನ್ನು ಗೊಬ್ಬರವಾಗಿಯೂ ಬಳಸಬಹುದು. ತೆಂಗಿನ ನಾರು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ತೆಂಗಿನ ನಾರನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಬಿಸಿಲಿನಲ್ಲಿ ಒಂದು ವಾರ ಚೆನ್ನಾಗಿ ಒಣಗಿಸಿ. ಆ ಬಳಿಕ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಂಡರೆ ಗೊಬ್ಬರ ರೆಡಿಯಾದಂತೆ.
  3. ತೆಂಗಿನ ನಾರು ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ. ಅನೇಕರು ತಲೆ ಕೂದಲನ್ನು ಕಪ್ಪಾಗಿಸಲು ಬಣ್ಣಗಳನ್ನು ಬಳಸುತ್ತಾರೆ. ಆದರೆ ಇದರಿಂದ ಅಧಿಕ ಪ್ರಮಾಣದಲ್ಲಿ ರಾಸಾಯನಿಕಗಳಿರುತ್ತದೆ. ಈ ನಾರಿನಿಂದ ನೈಸರ್ಗಿಕವಾಗಿ ಕೂದಲಿನ ಬಣ್ಣವನ್ನು ಮಾಡಬಹುದು. ಮೊದಲು ಬಾಣಲೆಗೆ ತೆಂಗಿನ ನಾರು ಹಾಕಿ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು. ಇದನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈ ಪುಡಿಯನ್ನು ಸ್ವಲ್ಪ ತೆಂಗಿನೆಣ್ಣೆ ಮತ್ತು ಸ್ವಲ್ಪ ಸಾಸಿವೆ ಎಣ್ಣೆಯೊಂದಿಗೆ ಬೆರೆಸಿ ತಲೆಗೆ ಹಚ್ಚಬಹುದು.
  4. ಸಂಧಿವಾತದಿಂದ ಬಳಲುತ್ತಿರುವವರಿಗೆ ತೆಂಗಿನ ನಾರು ಅತ್ಯುತ್ತಮ ಔಷಧವಾಗಿದೆ. ಇದು ಉರಿಯೂತದ ಗುಣಗಳನ್ನು ಹೊಂದಿದೆ. ತೆಂಗಿನ ನಾರಿನಿಂದ ತಯಾರಿಸಿದ ಚಹಾವನ್ನು ಕುಡಿಯುವುದರಿಂದ ಸಂಧಿವಾತ ನೋವು ಬಹುಬೇಗನೆ ಶಮನವಾಗುತ್ತದೆ.
  5. ಹಳದಿ ಹಲ್ಲುಗಳ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ತೆಂಗಿನಕ ನಾರನ್ನು ಬಳಸಿಕೊಳ್ಳಬಹುದು. ಒಂದು ಬಾಣಲೆಗೆ ತೆಂಗಿನ ನಾರು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಇದನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿ, ಇದರಿಂದ ಹಲ್ಲುಜ್ಜಿದರೆ ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ನಾಶವಾಗಿ ಹಳದಿ ಹಲ್ಲು ಬಿಳಿಯಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ