Relationship: ನಿಮ್ಮ ಸಂಬಂಧದಲ್ಲಿ ಈ ಬದಲಾವಣೆಯಾಗಲು ಕಾರಣವೇನು?

|

Updated on: May 17, 2023 | 6:24 PM

ದೀರ್ಘಾವಧಿಯಲ್ಲಿ ತಮ್ಮ ಭಾವನಾತ್ಮಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಅವುಗಳು ಹಾನಿಯಾಗಬಹುದು ಎಂದು ಗೊತ್ತಿದ್ದರೂ, ಜನರು ಸಾಮಾನ್ಯವಾಗಿ ತಮ್ಮ ಸಂಬಂಧದಲ್ಲಿನ ಎಚ್ಚರಿಕೆಯ ಚಿಹ್ನೆಗಳನ್ನು ನಿರ್ಲಕ್ಷಿಸುತ್ತಾರೆ.

Relationship: ನಿಮ್ಮ ಸಂಬಂಧದಲ್ಲಿ ಈ ಬದಲಾವಣೆಯಾಗಲು ಕಾರಣವೇನು?
ಸಾಂದರ್ಭಿಕ ಚಿತ್ರ
Follow us on

ಸಂಬಂಧವು ನಮ್ಮ ಜೀವನದದ ಪ್ರಮುಖ ಮತ್ತು ಸುಂದರವಾದ ಹಂತಗಳಲ್ಲಿ ಒಂದಾಗಿದೆ. ನಾವು ಪ್ರೀತಿಸುವವರ ಜೊತೆ ಜೀವನ ಸಾಗಿಸುವುದು ನಮಗೆ ಸಂತೋಷವನ್ನು ನೀಡುತ್ತದೆ. ಸಮಾನ ಪ್ರಯತ್ನಗಳು, ಹೊಂದಾಣಿಕೆಗಳು, ಕಾಳಜಿ ಮತ್ತು ಪ್ರೀತಿ ಯಾವುದೇ ಸಂಬಂಧದ ಮೂಲ ಅಡಿಪಾಯವಾಗಿದೆ. ಇದರ ಹೊರತಾಗಿಯೂ ಕೆಲವೊಮ್ಮೆ ಪ್ರಯತ್ನಗಳ ನಂತರವೂ ಸಂಬಂಧವು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಸಂಬಂಧವು ಹಾಳಾಗುತ್ತಿದೆ ಎಂಬ ಎಚ್ಚರಿಕೆಯ ಚಿಹ್ನೆಗಳು ಗೋಚರಿಸಿದರೂ ಅದನ್ನು ನಾವು ನಿರ್ಲಕ್ಷಿಸುತ್ತೇವೆ. ಏಕೆಂದರೆ ಒಂದಲ್ಲ ಒಂದು ದಿನ ನಮ್ಮ ಸಂಬಂಧವು ಸರಿ ಹೋಗಬಹುದು ಎಂಬ ಕಾರಣದಿಂದ. ನಾವು ಸಂಬಂಧದಲ್ಲಿನ ಎಚ್ಚರಿಕೆಯ ಚಿಹ್ನೆಗಳನ್ನು ಏಕೆ ನಿರ್ಲಕ್ಷಿಸುತ್ತೇವೆ? ಇದನ್ನು ಉದ್ದೇಶಿಸಿ, ಥೆರಪಿಸ್ಟ್ ಇಸ್ರಾ ನಾಸಿರ್ ಅವರು ಹೇಳುತ್ತಾರೆ, ಇದರ ಅರ್ಥವೇನೆಂದರೆ ನಾವು ನಿಜವಾಗಿಯೂ ನಮ್ಮದೇ ಆದ ಮಾದರಿಗಳಿಗೆ ಗಮನಕೊಡಬೇಕು. ಈ ಮಾದರಿಗಳು ನಮ್ಮ ಜೀವನದ ವಿವಿಧ ಸಂದರ್ಭಗಳಲ್ಲಿ ಇದೇ ರೀತಿಯ ಸನ್ನಿವೇಶಗಳಿಗೆ ನಮ್ಮನ್ನು ಕರೆದೊಯ್ಯುತ್ತವೆ. ಬಹಳಷ್ಟು ಜನರು ಸಂಬಂಧದಲ್ಲಿ ಸಂತೋಷವಾಗಿರಲು ಕಾರಣವೇನೆಂದರೆ ಅವರು ಸಂಬಂಧಲ್ಲಿನ ಎಚ್ಚರಿಕೆಯ ಚಿಹ್ನೆಗಳನ್ನು ಕಡೆಗಣಿಸಿರುವುದು.’

ಸಂಬಧಂದಲ್ಲಿನ ಎಚ್ಚರಿಕೆಯ ಚಿಹ್ನೆಗಳನ್ನು ನಿರ್ಲಕ್ಷಿಸಲು ಸಾಮಾನ್ಯ ಕಾರಣಗಳು

ಬದಲಾವಣೆ: ನಾವು ಸಾಮಾನ್ಯವಾಗಿ ಸಂಬಂಧದಲ್ಲಿ ಉಂಟಾಗಬಹುದಾದ ಎಚ್ಚರಿಕೆಯ ಚಿಹ್ನೆಗಳನ್ನು ನಿರ್ಲಕ್ಷಿಸುತ್ತೇವೆ. ಏಕೆಂದರೆ ನಾವು ನಮ್ಮ ಸಂಗಾತಿಯನ್ನು ಬದಲಾಯಿಸಬಹುದು, ಸಂಬಂಧವನ್ನು ಸರಿ ಮಾಡಿಕೊಳ್ಳಬಹುದು ಎಂದು ನಂಬುತ್ತೇವೆ.

ಒಂಟಿತನ: ಬಹಳಷ್ಟು ಜನರಿಗೆ, ಒಂಟಿತನವು ಒಂದು ಪ್ರಮುಖ ಭಯವಾಗಿದೆ. ಒಂಟಿತನವನ್ನು ಸೋಲಿಸಲು ಸಂಗಾತಿಯ ಜೊತೆ ಇರುವುದು ಸಂಬಂಧದಲ್ಲಿನ ಎಚ್ಚರಿಕೆಯ ಚಿಹ್ನೆಯನ್ನು ನಿರ್ಲಕ್ಷಿಸಲು ಒಂದು ದೊಡ್ಡ ಕಾರಣವಾಗಿದೆ.

ಮತ್ತೆ ಪ್ರಾರಂಭಿಸುವುದು: ನಾವು ವ್ಯಕ್ತಿಯ ಮೇಲೆ ಸಮಯ, ಶಕ್ತಿ ಮತ್ತು ಭಾವನೆಗಳನ್ನು ಹೂಡಿಕೆ ಮಾಡಿದಾಗ, ನಾವು ಅವರು ಸಂಬಂಧದಲ್ಲಿ ಆಸಕ್ತಿ ಹೊಂದಿಲ್ಲದಿದ್ದರೂ, ಅದನ್ನು ನಿರ್ಲಕ್ಷಿಸಲು ಪ್ರಾರಂಭಿಸುತ್ತೇವೆ. ಏಕೆಂದರೆ ನಾವು ಇನ್ನೊಬ್ಬ ವ್ಯಕ್ತಿಯೊಂದಿಗೆ ಮತ್ತೆ ಸಂಬಂಧವನ್ನು ಪ್ರಾರಂಭಿಸಲು ಬಯಸುವುದಿಲ್ಲ.

ಇದನ್ನೂ ಓದಿ:Relationships: ಸರಳವಾಗಿ ಪ್ರೀತಿಯನ್ನು ಒಬ್ಬರಿಗೊಬ್ಬರು ವ್ಯಕ್ತಪಡಿಸುವುದು ಹೇಗೆ? ಇಲ್ಲಿದೆ ಸಲಹೆಗಳು

ಭಾವನಾತ್ಮಕ ಅಗತ್ಯಗಳು: ಜನರು ತಮ್ಮ ಸ್ವಂತ ಭಾವನಾತ್ಮಕ ಅಗತ್ಯಗಳನ್ನು ಕಡಿಮೆಗೊಳಿಸಿದಾಗ, ಎಲ್ಲರನ್ನು ತಮ್ಮ ಆದ್ಯತೆಯನ್ನಾಗಿ ಮಾಡಲು, ಅವರು ಎಲ್ಲರನ್ನು ಮೆಚ್ಚಿಸಲು ಹೆಣಗಾಡುತ್ತಾರೆ. ಮತ್ತು ಸಂಬಂಧದಲ್ಲಿ ಇರುವ ಎಲ್ಲಾ ಎಚ್ಚರಿಕೆಯ ಚಿಹ್ನೆಗಳನ್ನು ನಿರ್ಲಕ್ಷಿಸುತ್ತಾರೆ.

ಭರವಸೆ: ಸಂಬಂಧದಲ್ಲಿ ಒಬ್ಬರ ಕಡೆಯಿಂದ ಆಸಕ್ತಿ ಕಡಿಮೆಯಾದರೂ, ಮುಂದಿನ ದಿನಗಳಲ್ಲಿ ಸಂಗಾತಿಯೂ ಖಂಡಿತವಾಗಿಯೂ ಬದಲಾಗಬಹುದು ಎಂಬ ಭರವಸೆಯ ಕಾರಣದಿಂದ ಸಂಬಂಧವನ್ನು ಹಾಳು ಮಾಡುವ ಎಚ್ಚರಿಕೆಯ ಚಿಹ್ನೆಗಳನ್ನು ನಿರ್ಲಕ್ಷಿಸುತ್ತೇವೆ.

ನಂಬಿಕೆ: ನಾವು ಉತ್ತಮವಾದುದಕ್ಕೆ ಅರ್ಹರಲ್ಲ ಎಂಬ ನಂಬಿಕೆಯನ್ನು ಕೆಲವರು ಹೊಂದಿರುತ್ತಾರೆ. ಆದ್ದರಿಂದ ಅವರು ಸಂಬಂಧ ಹಾಳಾಗಿದ್ದರೂ, ಅದೇ ಸಂಬಂಧದಲ್ಲಿ ಮುಂದುವರೆಯುತ್ತಾರೆ.