ಸಾಂದರ್ಭಿಕ ಚಿತ್ರ
ಸುಡು ಬಿಸಿಲಿನ ತಾಪಮಾನದ ನಡುವೆ ಆರೋಗ್ಯವಂತೂ ಹದಗೆಟ್ಟರೆ ಕೇಳುವುದೇ ಬೇಡ. ಈ ಬೇಸಿಗೆಯಲ್ಲಿ ಆಹಾರ ಕ್ರಮದಲ್ಲಾಗುವ ಸಣ್ಣ ಪುಟ್ಟ ಬದಲಾವಣೆಯಿಂದ ಮಲಬದ್ಧತೆ ಸಮಸ್ಯೆಯೂ ಹೆಚ್ಚಿನವರಲ್ಲಿ ಕಾಡುವುದಿದೆ. ಮಲಬದ್ಧತೆ ಸಮಸ್ಯೆಯಿದ್ದರೆ ವ್ಯಕ್ತಿಯು ನರಕಯಾತನೆಯನ್ನು ಅನುಭವಿಸುತ್ತಾನೆ. ಆದರೆ ಪ್ರಾರಂಭದಲ್ಲಿ ಮನೆ ಮದ್ದಿನ ಮೂಲಕ ಪರಿಹಾರ ಮಾಡಿಕೊಂಡು ಸಮಸ್ಯೆಯೂ ಅತಿಯಾದರೆ ವೈದ್ಯರನ್ನು ಭೇಟಿಯಾಗುವುದು ಒಳಿತು.
ಮಲಬದ್ಧತೆ ಸಮಸ್ಯೆಗೆ ಸರಳ ಮನೆಮದ್ದುಗಳು:
- ದೇಹಕ್ಕೆ ನೀರು ಕಡಿಮೆಯಾದ ಕೂಡಲೇ ಈ ಮಲಬದ್ಧತೆ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ದಿನನಿತ್ಯ ಸರಿಯಾಗಿ ನೀರು ಕುಡಿಯುವ ಅಭ್ಯಾಸದಿಂದ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.
- ಮಲಬದ್ಧತೆ ಸಮಸ್ಯೆಯಿಂದ ಬಳಲುವವರು ರಾತ್ರಿ ಮಲಗುವ ಮುನ್ನ 2 ಅಥವಾ 3 ಅಂಜೂರಗಳನ್ನು ಶುದ್ಧ ನೀರಿಗೆ ಹಾಕಿ ನೆನೆಸಿಟ್ಟು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಈ ಆರೋಗ್ಯ ಸಮಸ್ಯೆಯೂ ದೂರವಾಗುತ್ತದೆ.
- ರಾತ್ರಿಯಿಡೀ ನೆನೆಸಿಟ್ಟ ಕಪ್ಪು ದ್ರಾಕ್ಷಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಈ ಸಮಸ್ಯೆಗೆ ಸುಲಭ ಪರಿಹಾರವನ್ನು ಕಂಡುಕೊಳ್ಳಬಹುದು.
- ನಿಯಮಿತವಾಗಿ ಸೋಂಪು ಕಾಳಿನ ನೀರಿನ ಸೇವನೆಯಿಂದ ಮಲಬದ್ಧತೆ ಸಮಸ್ಯೆಯೂ ನಿವಾರಣೆಯಾಗುತ್ತದೆ.
- ಬಾರ್ಲಿಯ ನೀರನ್ನು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆಯೂ ಕಡಿಮೆಯಾಗುತ್ತದೆ.
- ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ನುಗ್ಗೆ ಸೊಪ್ಪಿನ ರಸವನ್ನು ಕುದಿಸಿ ಸೇವಿಸುವುದು ಪರಿಣಾಮಕಾರಿಯಾಗಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ