AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepavali 2026: ಹಬ್ಬದ ಶಾಪಿಂಗ್‌ನಲ್ಲಿ ಈ ಸ್ಮಾರ್ಟ್‌ ಟಿಪ್ಸ್‌ಗಳನ್ನು ಪಾಲಿಸುವ ಮೂಲಕ ಅನಗತ್ಯ ಖರ್ಚುಗಳನ್ನು ತಪ್ಪಿಸಿ

ಬೆಳಕಿನ ಹಬ್ಬ ದೀಪಾವಳಿಗೆ ದಿನ ಗಣನೆ ಶುರುವಾಗಿದ್ದು, ಜನರೆಲ್ಲರೂ ಶಾಪಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಬಟ್ಟೆ, ಪಟಾಕಿ, ಗೃಹಪಯೋಗಿ ವಸ್ತುಗಳು, ಸ್ವೀಟ್ಸ್‌ ಅಂತೆಲ್ಲಾ ಹಲವಾರು ಉತ್ಪನ್ನಗಳನ್ನು ಖರೀದಿ ಮಾಡುತ್ತಾರೆ. ಹೀಗೆ ಶಾಪಿಂಗ್‌ ಮಾಡುವ ಸಂದರ್ಭದಲ್ಲಿ ನಾವು ಮಾಡುವ ಕೆಲವೊಂದು ಸಣ್ಣ ತಪ್ಪುಗಳಿಂದ ಜೇಬಿಗೆ ಕತ್ತರಿ ಬೀಳಬಹುದು. ಆದ್ದರಿಂದ ಹಬ್ಬದ ಶಾಪಿಂಗ್‌ ಸಮಯದಲ್ಲಿ ದುಡ್ಡು ಹೆಚ್ಚು ಖರ್ಚಾಗದಂತೆ ನೋಡಿಕೊಳ್ಳಲು ಈ ಕೆಲವೊಂದು ಸ್ಮಾರ್ಟ್‌ ಟಿಪ್ಸ್‌ಗಳನ್ನು ಪಾಲಿಸಿ.

Deepavali 2026: ಹಬ್ಬದ ಶಾಪಿಂಗ್‌ನಲ್ಲಿ ಈ ಸ್ಮಾರ್ಟ್‌ ಟಿಪ್ಸ್‌ಗಳನ್ನು ಪಾಲಿಸುವ ಮೂಲಕ ಅನಗತ್ಯ ಖರ್ಚುಗಳನ್ನು ತಪ್ಪಿಸಿ
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Nov 05, 2026 | 2:46 PM

Share

ಹೊಸ ಬೆಳಕು, ಭರವಸೆ, ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿರುವ ಬೆಳಕಿನ ಹಬ್ಬ ದೀಪಾವಳಿಗೆ (Deepavali) ದಿನಗಣನೆ ಶುರುವಾಗಿದ್ದು, ಹಬ್ಬಕ್ಕೆ ಜೋರು ತಯಾರಿ ನಡೆಯುತ್ತಿದೆ. ಹೆಚ್ಚಿನವರು ಮನೆ ಕ್ಲೀನಿಂಗ್‌ ಮಾಡುವುದರ ಜೊತೆಗೆ ಶಾಪಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಹಬ್ಬದ ಸಮಯದಲ್ಲಿ ಹೊಸ ಬಟ್ಟೆಗಳು, ಗೃಹಾಲಂಕಾರ ವಸ್ತುಗಳು, ಸಿಹಿತಿಂಡಿಗಳು, ಉಡುಗೊರೆಗಳಿಂದ ಹಿಡಿದು ಎಲೆಕ್ಟ್ರಾನಿಕ್ಸ್‌ ವಸ್ತುಗಳಂತ ಬಹುತೇಕ ಎಲ್ಲಾ ಸಣ್ಣ, ದೊಡ್ಡ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಈ ಸಮಯದಲ್ಲಿ ಆನ್‌ಲೈನ್‌ ಮತ್ತು ಆಫ್‌ಲೈನ್‌ ಮಾರುಕಟ್ಟೆಗಳು  ಕೊಡುಗೆಗಳು ಮತ್ತು ರಿಯಾಯಿತಿಗಳು ಸಹ ಹೇರಳವಾಗಿರುತ್ತವೆ. ಇಂತಹ ಸಂದರ್ಭದಲ್ಲಿ ಬಜೆಟ್‌ಗಿಂತ ಹೆಚ್ಚು ಖರ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಕೆಲವೊಂದು ಸ್ಮಾರ್ಟ್‌ ಸಲಹೆಗಳನ್ನು ಪಾಲಿಸುವ ಮೂಲಕ ಶಾಪಿಂಗ್‌ ಸಮಯದಲ್ಲಿ ವ್ಯರ್ಥ ಖರ್ಚುಗಳಾಗದಂತೆ ತಪ್ಪಿಸಿ.

ಮೊದಲು ಎಷ್ಟು ಖರ್ಚು ಮಾಡಲು ಬಯಸುತ್ತೀರಿ ಎಂಬುದನ್ನು ನಿರ್ಧರಿಸಿ:

ಹಬ್ಬಗಳ ಸಮಯದಲ್ಲಿ, ಸಣ್ಣ ಖರೀದಿಗಳು ದೊಡ್ಡ ಖರ್ಚನ್ನು ಸೇರಿಸಬಹುದು. ಆದ್ದರಿಂದ, ಬಜೆಟ್ ಇಲ್ಲದೆ ಶಾಪಿಂಗ್‌ಗೆ ಹೋಗಬೇಡಿ. ನಿಮ್ಮ ದೀಪಾವಳಿ ಶಾಪಿಂಗ್ ಪ್ರಾರಂಭಿಸುವ ಮೊದಲು, ನಿಮ್ಮ ಒಟ್ಟಾರೆ ಬಜೆಟ್ ಅನ್ನು ನಿಗದಿಪಡಿಸಿ. ಈ ವರ್ಷ ನೀವು ಬಟ್ಟೆ, ಮನೆ ಅಲಂಕಾರ, ಸಿಹಿತಿಂಡಿಗಳು, ಉಡುಗೊರೆಗಳು ಮತ್ತು ಇತರ ವಸ್ತುಗಳಿಗೆ ಎಷ್ಟು ಖರ್ಚು ಮಾಡಲು ಬಯಸುತ್ತೀರಿ ಎಂಬುದನ್ನು ನಿರ್ಧರಿಸಿ. ಖರ್ಚು ನಿಮ್ಮ ಬಜೆಟ್ ಅನ್ನು ಮೀರಬಾರದು ಎಂಬ ನಿಯಮವನ್ನು ಮುಂಚಿತವಾಗಿಯೇ ಮಾಡಿ. ಈ ರೀತಿ ಮಾಡುವುದರಿಂದ ಅತಿಯಾದ ಖರ್ಚನ್ನು ತಪ್ಪಿಸಬಹುದು.

ಶಾಪಿಂಗ್‌ ಲಿಸ್ಟ್‌ ಅನ್ನು ಮೊದಲೇ ಬರೆದಿಟ್ಟುಕೊಳ್ಳಿ:

ಕೆಲವೊಮ್ಮೆ ನಾವು ಮಾರುಕಟ್ಟೆಯಲ್ಲಿ ಕಂಡ ಎಲ್ಲಾ ವಸ್ತುಗಳನ್ನು ಖರೀದಿಸಿಬಿಡುತ್ತೇವೆ. ಹೌದು ಅಗತ್ಯವಿಲ್ಲದಿದ್ದರೂ ಚೆಂದ ಕಾಣಿಸುವ ಅನಗತ್ಯ ವಸ್ತುಗಳನ್ನು ಖರೀದಿಸುತ್ತೇವೆ. ಇದರಿಂದ ಖರ್ಚು ಹೆಚ್ಚಾಗುತ್ತದೆ. ಅದಕ್ಕಾಗಿ ಮೊದಲೇ ಏನೆಲ್ಲಾ ವಸ್ತುಗಳು ಬೇಕು ಎಂದು ಶಾಪಿಂಗ್‌ ಲಿಸ್ಟ್‌ ರೆಡಿ ಮಾಡಿಕೊಳ್ಳಿ, ಮತ್ತು ಆ ಲಿಸ್ಟ್‌ನಲ್ಲಿರುವ ಅಗತ್ಯ ವಸ್ತುಗಳನ್ನು ಮಾತ್ರವೇ ಖರೀದಿಸಿ, ಈ ಸಣ್ಣ ಟ್ರಿಕ್ಸ್‌ ದುಂದುವೆಚ್ಚವನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಆಫರ್ ನೋಡಿದ ತಕ್ಷಣ ಖರೀದಿಸಬೇಡಿ:

“ಒಂದನ್ನು ಖರೀದಿಸಿ, ಒಂದನ್ನು ಫ್ರೀಯಾಗಿ ಪಡೆಯಿರಿ” ಎಂಬಿತ್ಯಾದಿ ಆಫರ್‌, ಕೊಡುಗೆಗಳಿಗೆ ಆಕರ್ಷಿತರಾಗಿ ಅನಗತ್ಯ ವಸ್ತುಗಳನ್ನು ಖರೀದಿ ಮಾಡಬೇಡಿ. ಕಡಿಮೆ ಬೆಲೆಯನ್ನು ನೋಡಿದಾಗ ನಾವು ಅನಗತ್ಯ ವಸ್ತುಗಳನ್ನು ಕೂಡ ಖರೀದಿ ಮಾಡುತ್ತೇವೆ. ಇದರಿಂದ ದುಡ್ಡು ವ್ಯರ್ಥವಾಗುತ್ತದೆ. ಹಾಗಾಗಿ ಆಫರ್‌ಗಳಿಗೆ ಆಕರ್ಷಿತರಾಗದೆ ಯಾವುದು ಅಗತ್ಯವಿದೆಯೋ ಆ ಉಪಯುಕ್ತ ವಸ್ತುಗಳನ್ನು ಮಾತ್ರವೇ ಖರೀದಿ ಮಾಡಿ.

ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ಹೆಚ್ಚು ಜಾಗರೂಕರಾಗಿರಿ:

ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವುದು ಸುಲಭ, ಆದರೆ ಆ ಅನುಕೂಲವು ಹೆಚ್ಚಾಗಿ ಅತಿಯಾದ ಖರ್ಚಿಗೆ ಕಾರಣವಾಗಬಹುದು. ನೀವು ಅಪ್ಲಿಕೇಶನ್ ತೆರೆದ ತಕ್ಷಣ ಹೊಸ ಉತ್ಪನ್ನಗಳು ಮತ್ತು ಆಫರ್‌ಗಳು  ಕಾಣಿಸಿಕೊಳ್ಳುತ್ತವೆ. ಇದರಿಂದ ಅನಗತ್ಯ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆ ಇರುತ್ತದೆ.  ಆದ್ದರಿಂದ, ಮುಂಚಿತವಾಗಿ ಶಾಪಿಂಗ್ ಪಟ್ಟಿಯನ್ನು ಮಾಡಿ ಮತ್ತು  ಕಾರ್ಟ್‌ಗೆ ಪದೇ ಪದೇ ಬೇರೆ ವಸ್ತುಗಳನ್ನು ಸೇರಿಸುವುದನ್ನು ತಪ್ಪಿಸಿ. ಈ ಮೂಲಕ ವ್ಯರ್ಥ ಖರ್ಚುಗಳನ್ನು ತಪ್ಪಿಸಬಹುದು.

ಇದನ್ನೂ ಓದಿ: ದೀಪಾವಳಿಯಂದು ತಪ್ಪಿಯೂ ಈ ವಸ್ತುವನ್ನು ಮನೆಗೆ ತರಬೇಡಿ

ಬೆಲೆಗಳನ್ನು ನೋಡದೆ ಶಾಪಿಂಗ್ ಮಾಡಬೇಡಿ:

ಹಬ್ಬಗಳ ಸಮಯದಲ್ಲಿ ಮಾರುಕಟ್ಟೆಗಳು ಜನದಟ್ಟಣೆಯಿಂದ ಕೂಡಿರುತ್ತವೆ. ಹೀಗಿರುವಾಗ ಒಮ್ಮೆ ಶಾಪಿಂಗ್‌ ಮುಗಿಸಿ ಮನೆಗೆ ಬಂದ್ರೆ ಸಾಕಪ್ಪಾ ಎನ್ನುತ್ತಾ ಅನೇಕರು ಬೆಲೆಗಳನ್ನು ಪರಿಶೀಲಿಸದೆ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಎಲೆಕ್ಟ್ರಾನಿಕ್‌ ಗ್ಯಾಜೆಟ್‌, ಚಿನ್ನ ಇತ್ಯಾದಿ ದುಬಾರಿ ವಸ್ತುಗಳನ್ನು ಖರೀದಿಸುವಾಗ ಈ ರೀತಿ ಆತುರಪಟ್ಟರೆ ಸಾಕಷ್ಟು ನಷ್ಟವನ್ನು ಅನುಭವಿಸಬೇಕಅಗುತ್ತದೆ.  ಹಾಗಾಗಿ ದುಬಾರಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುತ್ತಿದ್ದರೆ, ಖರೀದಿಸುವ ಮೊದಲು ಬೇರೆಡೆ ಬೆಲೆಗಳನ್ನು ಪರಿಶೀಲಿಸಿಲಿ. ಎಲ್ಲಿ ಕಡಿಮೆ ಬೆಲೆ ಇದೆಯೋ ಅಲ್ಲಿಂದಲೇ ಆ ವಸ್ತುಗಳನ್ನು ಖರೀದಿ ಮಾಡಿ. ಜೊತೆಗೆ ನೀವು ಖರೀದಿಸುವ ವಸ್ತುಗಳ ಗುಣಮಟ್ಟವನ್ನು ಪರಿಶೀಲಿಸುವುದು ಕೂಡ ತುಂಬಾನೇ ಮುಖ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಬಸ್ ದರ ಏರಿಕೆ ಖಂಡಿಸಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಪ್ರತಿಭಟನೆ
ಬಸ್ ದರ ಏರಿಕೆ ಖಂಡಿಸಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಪ್ರತಿಭಟನೆ
‘ಎಲ್ಲರೂ ನೋಡಲೇಬೇಕಾದ ಸಿನಿಮಾ’; ರಾಮಾಯಣ ನೋಡಿ ವಿಮರ್ಶೆ ಕೊಟ್ಟ ಫ್ಯಾನ್ಸ್
‘ಎಲ್ಲರೂ ನೋಡಲೇಬೇಕಾದ ಸಿನಿಮಾ’; ರಾಮಾಯಣ ನೋಡಿ ವಿಮರ್ಶೆ ಕೊಟ್ಟ ಫ್ಯಾನ್ಸ್
ಚನ್ನಪಟ್ಟಣ: ಸುಳ್ಳೇರಿ ಗ್ರಾಮದಲ್ಲಿ ಮನೆ ಬಳಿಗೇ ಬರುತ್ತಿದೆ ಚಿರತೆ!
ಚನ್ನಪಟ್ಟಣ: ಸುಳ್ಳೇರಿ ಗ್ರಾಮದಲ್ಲಿ ಮನೆ ಬಳಿಗೇ ಬರುತ್ತಿದೆ ಚಿರತೆ!
ಹಣ ಹಾಕಿದ್ರೆ ದೀಪಾವಳಿ ಹಬ್ಬ ಜೋರಾಗಿ ಮಾಡುತ್ತೇವೆ: ಗೃಹಲಕ್ಷ್ಮೀಯರು
ಹಣ ಹಾಕಿದ್ರೆ ದೀಪಾವಳಿ ಹಬ್ಬ ಜೋರಾಗಿ ಮಾಡುತ್ತೇವೆ: ಗೃಹಲಕ್ಷ್ಮೀಯರು
ಪ್ರಿಯಾಂಕ್​​ ಖರ್ಗೆ ಹೇಳಿಕೆ ಖಂಡಿಸಿ ಜೆಡಿಎಸ್​​ನಿಂದ ಫ್ಲೆಕ್ಸ್​​
ಪ್ರಿಯಾಂಕ್​​ ಖರ್ಗೆ ಹೇಳಿಕೆ ಖಂಡಿಸಿ ಜೆಡಿಎಸ್​​ನಿಂದ ಫ್ಲೆಕ್ಸ್​​
ಕಬ್ಬು ಬೆಳೆಗಾರರಿಂದ ಜೈಲ್ ಭರೋ ಚಳವಳಿ: ಬೆಳಗಾವಿಯಲ್ಲಿ ಹೈಡ್ರಾಮಾ
ಕಬ್ಬು ಬೆಳೆಗಾರರಿಂದ ಜೈಲ್ ಭರೋ ಚಳವಳಿ: ಬೆಳಗಾವಿಯಲ್ಲಿ ಹೈಡ್ರಾಮಾ
ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ: ಏಳನೇ ದಿನವೂ ಸಾವಿರಾರು ಭಕ್ತರು
ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ: ಏಳನೇ ದಿನವೂ ಸಾವಿರಾರು ಭಕ್ತರು
‘ರಾಮಾಯಣ’ ಸಿನಿಮಾ ನೋಡಿದ ಯಶ್ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ: ವಿಡಿಯೋ
‘ರಾಮಾಯಣ’ ಸಿನಿಮಾ ನೋಡಿದ ಯಶ್ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ: ವಿಡಿಯೋ
ನಂಜನಗೂಡಿನ ಆಕಳ ಸುತ್ತಮುತ್ತ ನಾಲ್ಕು ಹುಲಿಗಳ ಓಡಾಟ
ನಂಜನಗೂಡಿನ ಆಕಳ ಸುತ್ತಮುತ್ತ ನಾಲ್ಕು ಹುಲಿಗಳ ಓಡಾಟ
ಬೆಂಗಳೂರಲ್ಲಿ ಸುರಿದ ಧಾರಾಕಾರ ಮಳೆ: ಬಾರ್​​ಗೆ ನುಗ್ಗಿದ ನೀರು
ಬೆಂಗಳೂರಲ್ಲಿ ಸುರಿದ ಧಾರಾಕಾರ ಮಳೆ: ಬಾರ್​​ಗೆ ನುಗ್ಗಿದ ನೀರು